ಕೋವಿಡ್-19 ಎರಡನೇ ಅಲೆ ವೈರಸ್‍ನಿಂದ ರೋಗವು ವಿಶ್ವದೆಲ್ಲಡೆ
ವ್ಯಾಪಕವಾಗಿ ಹರಡುತ್ತಿದ್ದು, ಸಂಭವಿಸಬಹುದಾದ
ಅನಾಹುತಗಳನ್ನು ತಡೆಗಟ್ಟಲು ಜಿಲ್ಲೆಯಾದ್ಯಂತ ತಂಬಾಕು
ಮಾರಾಟ ಮತ್ತು ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಆದೇಶಿಸಿದ್ದಾರೆ.
 ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಸಾರ್ವಜನಿಕರಿಗೆ
ತೊಂದರೆಯಾಗುವುದರ ಜೊತೆಗೆ ಸಾಂಕ್ರಾಮಿಕ
ರೋಗಗಳಾದ ಕ್ಷಯರೋಗ, ನ್ಯೂಮೋನಿಯ ಮತ್ತು
ಕೋವಿಡ್-19 ರೋಗವು ಒಬ್ಬರಿಂದ ಮತ್ತೊಬ್ಬರಿಗೆ ಹರಡಲು
ಕಾರಣವಾಗಬಹುದು. ಬೀಡಿ ಸಿಗರೇಟ್ ಸೇದುವುದರಿಂದ ಕೈಯಿಂದ
ಬಾಯಿಗೆ ವೈರಸ್‍ಗಳು ಮಾನವನ ದೇಹವನ್ನು ಪ್ರವೇಶಿಸುವ
ಸಾಧ್ಯತೆ ಇರುವುದರಿಂದ ಹಾಗೂ ದೇಹದ ಇತರ ಭಾಗಗಳಿಗೆ
ಸೋಂಕು ಹರಡಿ ಶ್ವಾಸಕೋಶ, ಹೃದಯ ಸಂಭಂಧಿಸಿದ
ಖಾಯಿಲೆಗಳು ಹಾಗು ಕೋವಿಡ್-19 ರೋಗವು ಬರಬಹುದಾಗಿದೆ.
       ಕೋವಿಡ್-19 ಸೋಂಕಿತರು ಜಗಿಯುವ ತಂಬಾಕು ಹಾಗೂ
ತಂಬಾಕು ಉತ್ಪನ್ನಗಳನ್ನು ಬಳಸಿ ಉಗುಳುವುದರಿಂದ ರೋಗ
ಹರಡುವ ಭೀತಿ ಇರುತ್ತದೆ. ಸಾರ್ವಜನಿಕರ ಹಿತದೃಷ್ಠಿಯಿಂದ
ಕೋವಿಡ್-19 ಹತೋಟಿಗೆ ಬರುವವರೆಗೂ ತಂಬಾಕು ಮತ್ತು
ತಂಬಾಕು ಉತ್ಪನ್ನಗಳನ್ನು ಜಿಲ್ಲೆಯಾದ್ಯಂತ ಅಂಗಡಿಗಳಲ್ಲಿ
ಮಾರಾಟ ಮಾಡುವುದು ಮತ್ತು ಸಾರ್ವಜನಿಕರು ಬಳಸುವುದನ್ನು
ನಿಷೇಧಿಸಲಾಗಿದೆ. ಒಂದು ವೇಳೆ ಉಲ್ಲಂಘಿಸಿದಲ್ಲಿ ಸಾಂಕ್ರಾಮಿಕ
ರೋಗಗಳ ಕಾಯಿದೆ-187, ವಿಪ್ಪತ್ತು ನಿರ್ವಹಣಾ ಕಾಯಿದೆ-2005, ಐಪಿಸಿ-
1860, ಸಿಆರ್‍ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಸಂಬಂಧಿಸಿದವರ ಮೇಲೆ ಶಿಸ್ತು
ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್
ಬೀಳಗಿ ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *