ಹೊನ್ನಾಳಿ : ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ 18 ಆಕ್ಸಿಜನ್ ಕನ್ಸಲ್ಟೇಟರ್‍ಗಳು ಇಂದು ಬಂದಿದ್ದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಖುದ್ದು ಆಸ್ಪತ್ರೆಯಲ್ಲಿದ್ದು ಅವುಗಳನ್ನು ಬರ ಮಾಡಿಕೊಂಡರು.
ಆಕ್ಸಿಜನ್ ಕನ್ಸಲ್ಟೇಟರ್‍ಗಳ ಜೊತೆಗೆ, ವೈದ್ಯಕೀಯ ಉಪಕರಣಗಳು ಸೇರಿದಂತೆ 5 ಜಂಬೋ ಸಿಲಿಂಡರ್ ಇಂದು ಹೊನ್ನಾಳಿಗೆ ಆಗಮಿಸಿದ್ದು ಇಂದಿನಿಂದ ಕಾರ್ಯಾರಂಭ ಮಾಡಲಿವೆ.
ಇದೇ ವೇಳೆ ಮಾತನಾಡಿದ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನರಿಗೆ 25 ಕನ್ಸಲ್ಟೇಟರ್‍ಗಳನ್ನು ನೀಡುವಂತೆ ಮನವಿ ಮಾಡಿದ್ದು ನನ್ನ ಮನವಿಗೆ ಸ್ಪಂಧಿಸಿ ಸಿಎಂ ಇಂದು 18 ಆಕ್ಸಿಜನ್ ಕನ್ಸಲ್ಟೇಟರ್‍ಗಳನ್ನು ಕಳುಹಿಸಿಕೊಟ್ಟಿದ್ದು ಸಿಎಂ ಅವರಿಗೆ ಧನ್ಯವಾದ ತಿಳಿಸಿದರು.
ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ 50 ಆಕ್ಸಿಜನ್ ಬೆಡ್ ಇದ್ದು ಪ್ರತಿಯೊಂದು ಬೆಡ್‍ಗೂ ಆಕ್ಸಿಜನ್ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದ ಶಾಸಕರು, ಆಕ್ಸಿಜನ್ ಘಟಕ ಸದ್ಯದಲ್ಲೇ ತಾಲೂಕು ಆಸ್ಪತ್ರೆಯ ಆವರಣದಲ್ಲಿ ತಲೆ ಎತ್ತಲಿದೇ ಎಂದರು.
ಲಸಿಕೆ ಆರಂಭದಲ್ಲಿ ವಿಪಕ್ಷದವರು ಅಪಪ್ರಚಾರ ಮಾಡಿದ ಪರಿಣಾಮ ಜನರು ಲಸಿಕೆ ಹಾಕಿಸಿಕೊಳ್ಳಲು ಬರಲಿಲ್ಲಾ. ಆಗ ಉತ್ಪಾದನೆಯೂ ಕಡಿಮೆ ಇತ್ತು, ಆದರೇ ಇದೀಗ ಲಸಿಕೆ ಹಾಕಿಸಿಕೊಳ್ಳಲು ಜನರು ಮುಗಿ ಬೀಳುತ್ತಿದ್ದಾರೆ, ಆದರೇ ಉತ್ಪಾದನೆ ಕಡಿಮೆಯಾಗಿದೆ ಎಂದ ಶಾಸಕರು ಆಗಂತ ಲಸಿಕೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದರು.
ವಿಪಕ್ಷದವರು ಕೊರೊನಾ ಸಂದರ್ಭದಲ್ಲೂ ಟೀಕೆ-ಟಿಪ್ಪಣಿ ಮಾಡುತ್ತಾ ಕೀಳುಮಟ್ಟದ ರಾಜಕಾರಣ ಮಾಡುವುದನ್ನು ಬಿಟ್ಟು ಜನರಿಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೆಪಿಸುವ ಮೂಲಕ ರಾಜ್ಯವನ್ನು ಕೊರೊನಾ ಮುಕ್ತ ಮಾಡಲು ಸರ್ಕಾರದೊಂದಿಗೆ ಕೈಜೋಡಿಸಿ ಎಂದು ಸಲಹೆ ನೀಡಿದರು.
ಲಾಕ್‍ಡೌನ್ ಯಶಸ್ವಿ : ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳನ್ನು ಇಂದಿನಿಂದ ಮೂರು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಆಗಿದ್ದು, ವರ್ತಕರು ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡಿ ಲಾಕ್‍ಡೌನ್‍ಗೆ ಸಹಕಾರ ನೀಡಿದ್ದರಿಂದ ಹೊನ್ನಾಳಿ ತಾಲೂಕು ಸಂಪೂರ್ಣವಾಗಿ ಸ್ಥಬ್ದವಾಗಲು ಕಾರಣವಾಗಿದ್ದು ಶಾಸಕರು ಅವರಿಗೆ ಅಭಿನಂದನೆ ಸಲ್ಲಿಸಿದರು. ಜನರು ಕೊರೊನಾವನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಅನಿವಾರ್ಯವಾಗಿ ಲಾಕ್‍ಡೌನ್ ಮಾಡ ಬೇಕಾಯಿತು ಎಂದ ಶಾಸಕರು ಜನರ ರಕ್ಷಣೆಗಾಗೀ ಈ ತೀರ್ಮಾನ ಕೈಗೊಂಡಿದ್ದೇವೆ ಎಂದರು.
ಶಾಸಕರ ಮುಂದೆ ಗೋಳಾಡಿದ ಸೋಂಕಿತ : ಪ್ರತಿನಿಂತ್ಯ ಕೋವಿಡ್ ಸೋಂಕಿತರ ವಾರ್ಡಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಇಂದು ಕೋವಿಡ್ ಸೋಂಕಿತರ ವಾರ್ಡಗೆ ಶಾಸಕರು ಭೇಟಿ ನೀಡಿದಾಗ ಕೊರೊನಾ ಸೋಂಕಿತ ತನ್ನನ್ನು ಬದುಕಿಸಿ ಎಂದು ಮನವಿ ಮಾಡಿದ್ದಾನೆ. ಆತನಿಗೆ ಧೈರ್ಯ ಹೇಳಿದ ಶಾಸಕರು ಏನೂ ಆಗುವುದಿಲ್ಲಾ ನೀನುಗುಣವಾಗುತ್ತೀಯಾ ಎಂದು ಸಮಾದಾನ ಮಾಡಿ ಬಂದರು.
ಕೊರೊನಾ ವಾರಿಯರ್ಸ್‍ಗಳಿಗೆ ಉಪಹಾರ : ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕು ಸಂಪೂರ್ಣವಾಗಿ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ನಗರ ಪ್ರದಕ್ಷಿಣೆ ಹಾಕಿದ ಶಾಸಕರು ಬೈಕ್ ಸವಾರರಿಗೆ ಮನೆಯಿಂದ ಹೊರ ಬಾರದಂತೆ ಬುದ್ದಿ ಹೇಳಿದರಲ್ಲದೇ ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿ ಹೇಳಿದರು. ಪ್ರತಿದಿನದಂತೆ ತಾಲೂಕು ಆಸ್ಪತ್ರೆಯಲ್ಲಿನ ಕೊರೊನಾ ಸೋಂಕಿತರಿಗೆ, ಲಸಿಕೆ ಹಾಕಿಸಿಕೊಳ್ಳಲು ಬಂದ ಸಾರ್ವಜನಿಕರಿಗೆ ಹಾಗೂ ಪೊಲೀಸರಿಗೆ ಬೆಳಗಿನ ಉಪಹಾರ(ಟಮೋಟೋ ಬಾತ್) ನೀಡಿದರು.
ಭದ್ರಾವತಿಯಿಂದ ಆಕ್ಸಿಜನ್ ಸಿಲಿಂಡರ್ : ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ತಲೆ ದೋರಿದ ಹಿನ್ನೆಲೆ ಖುದ್ದು ಭದ್ರಾವತಿಯ ವಿಐಎಸ್‍ಎಲ್ ಪ್ಯಾಕ್ಟರಿಗೆ ತೆರಳಿದ ಶಾಸಕರು 21 ಆಕ್ಸಿಜನ್ ಸಿಲಿಂಡರ್‍ಗಳನ್ನು ತಂದು ಮತ್ತೋಮ್ಮೆ ಆಪತ್ ಬಾಂಧವ ಎನಿಸಿಕೊಂಡಿದ್ದಾರೆ.
ಕೋವ್ಯಾಕ್ಸಿನ್ ಲಸಿಕೆ ತಾಲೂಕಿಗೆ : ಅವಳಿ ತಾಲೂಕಿಗೆ ಇಂದು 900 ಕೋವ್ಯಾಕ್ಸಿನ್ ತರಿಸಿದ ಶಾಸಕರು ಅವುಗಳನ್ನು ವಿವಿಧ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಕೋವ್ಯಾಕ್ಸಿನ್ ಎರಡನೇ ಡೋಸ್ ನೀಡುವ ಉದ್ದೇಶದಿಂದ ಲಸಿಕೆ ತರಿಸಿದ್ದು ಜನರು ಗೊಂದಲ ಉಂಟು ಮಾಡದೇ ಕೇವಲ ಎರಡನೇ ಡೋಸ್ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್, ಮುಖಂಡರಾದ ನೆಲವೊನ್ನೆ ಮಂಜುನಾಥ್, ವೈದ್ಯಾಧಿಕಾರಿ ಚಂದ್ರಪ್ಪ ಸೇರಿದಂತೆ ಮತ್ತೀತತರಿದ್ದರು.

Leave a Reply

Your email address will not be published. Required fields are marked *