ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಮಾಹಿತಿಯಂತೆ ರಾಜ್ಯದಲ್ಲಿರುವ ಕೈಮಗ್ಗ ನೇಕಾರರು ಎರಡು ಲಕ್ಷ ಮುವತೈದು ಸಾವಿರ. ಕುಟುಂಬಗಳು.
ವಿದ್ಯುತ್ ಮಗ್ಗಗಳ ನೇಕಾರರು ನಾಲ್ಕು ಲಕ್ಷ ಅರುವತ್ತು ಸಾವಿರ. ಕುಟುಂಬಗಳು
ಸರ್ಕಾರಕ್ಕೆ ಈ ಮಾಹಿತಿಗಳನ್ನು ನಾನು ವಿಧಾನ ಪರಿಷತ್ತಿನಲ್ಲಿ ನೀಡಿರುವೆ.
ಆದರೆ ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನೇಕಾರ್ ಸಮ್ಮಾನ್ ಯೋಜನೆಯನ್ನು ಎರಡು ಸಾವಿರ ರೂ. ನಂತೆ ಘೋಷಣೆ ಮಾಡಿ ನೇಕಾರರಿಗೆ ಮುಂಜೂರು ಮಾಡಿದ ನೇಕಾರರ ಸಂಖ್ಯೆ ಕೆಳಗಿನಂತೆ.
ಕೈ ಮಗ್ಗ ನೇಕಾರರು 47016 ಮಾತ್ರ.
ವಿದ್ಯುತ್ ಮಗ್ಗ ನೇಕಾರರು 51249. ಮಾತ್ರ
ಇಷ್ಟು ಜನರಿಗೆ 2000 ದಂತೆ ತಲುಪಿದೆ.
ರಾಜ್ಯದಲ್ಲಿರುವ ಒಟ್ಟು ನೇಕಾರರು
6,95000 ಹೋದ ವರ್ಷ ಸರ್ಕಾರ ನೀಡಿದ ನೇಕಾರರು ಕೇವಲ 98265 ಇದುವರೆಗೆ ಕಾದು ಕುಳಿತ ನೇಕಾರರು 5,96735 ಇಷ್ಟು ನೇಕಾರರಿಗೆ ಹೋದ ವರ್ಷದ ನೇಕಾರ್ ಸಮ್ಮಾನ್ ದುಡ್ಡು ಸಿಗದೆ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇವತ್ತು ಕೂಡ ಬಡ ನೇಕಾರರಿಗೆ ಘೋಷಣೆ ಮಾಡಬಹುದೆಂದು ಕಾದು ಕುಳಿತ ರಾಜ್ಯದ ಎಲ್ಲಾ ನೇಕಾರರು ಶಾಪ ಹಾಕುತ್ತಿದ್ದು, ಸರ್ಕಾರ ನೇಕಾರರಿಗೆ ಮಾಡಿದ ದ್ರೋಹ ಇದಾಗಿದೆ. ಮುಖ್ಯಮಂತ್ರಿಗಳು ಕೂಡಲೇ ನೇಕಾರರಿಗೆ ನಾನು ಈಗಾಗಲೇ ಹಲವಾರು ಮನವಿ ಸಲ್ಲಿಸಿರುವ ಬಗ್ಗೆ ನೇಕಾರರಿಗೆ ಕನಿಷ್ಟ ಹತ್ತು ಸಾವಿರ ರೂಗಳನ್ನು ಘೋಷಣೆ ಮಾಡಲು ಒತ್ತಾಯಿಸುತ್ತೇನೆ.ಎಂ.ಡಿ.ಲಕ್ಷ್ಮೀನಾರಾಯಣ