ಎಸ್‍ಪಿ ಪ್ರಶಂಸೆ
ಸಾಂಕ್ರಾಮಿಕ ರೋಗ ಕೋವಿಡ್-19 ಹಿನ್ನೆಲೆಯಲ್ಲಿ ಸಾರ್ವಜನಿಕರ
ಆರೋಗ್ಯದ ದೃಷ್ಠಿಯಿಂದ ಅಗತ್ಯವಿರುವ ಆಕ್ಸಿಜನ್ ಸಿಲಿಂಡರ್‍ಗಳನ್ನು
ಸಾರ್ವಜನಿಕರ ಮನವೊಲಿಸಿ ಪಡೆದು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದ
ಮಲೇಬೆನ್ನೂರು ಪಿಎಸ್‍ಐ ವೀರಬಸಪ್ಪ ಕುಸಲಾಪುರ ಅವರನ್ನು ಎಸ್‍ಪಿ
ಹನುಮಂತರಾಯ ಪ್ರಶಂಸಿದರು.
ದಾವಣಗೆರೆ ಜಿಲ್ಲಾ ಪೊಲೀಸ್ ಅಧಿಕ್ಷಕ ಹನುಮಂತರಾಯ ಅವರು
ಆದೇಶದ ಮೇರೆಗೆ ಅಪರ ಪೊಲೀಸ್ ಅಧೀಕ್ಷಕರು, ದಾವಣಗೆರೆ
ಗ್ರಾಮಾಂತರ ಡಿವೈಎಸ್‍ಪಿ ಹಾಗೂ ಹರಿಹರ ವೃತ್ತದ ಸಿಪಿಐ ಅವರ
ನೇತೃತ್ವದಲ್ಲಿ ಕಾರ್ಯಚರಣೆ ಕೈಗೊಳ್ಳಲಾಗಿತ್ತು.
ಮಲೆಬೆನ್ನೂರು ಠಾಣಾ ಸಿಬ್ಬಂದಿಗಳಾದ ವೆಂಕಟೇಶ್ ರೆಡ್ಡಿ, ಬಸವರಾಜ್.ಟಿ,
ಮೂರ್ತಿ.ಜೆ.ಎಸ್. ಮತ್ತು ರಾಜಶೇಕರ್ ಅವರ ತಂಡ ಮೇ 20 ರಂದು
ಮಲೇಬೆನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ವೆಲ್ಡಿಂಗ್
ಶಾಪ್‍ಗಳಿಗೆ ಭೇಟಿ ನೀಡಿ, ಅವರಿಗೆ ಪ್ರಸ್ತುತ ಸ್ಥಿತಿಯನ್ನು ತಿಳಿಸಿ
ಶಾಪ್‍ನವರ ಮನವೊಲಿಸಿ ಸುಮಾರು 32 ಖಾಲಿ ಸಿಲಿಂಡರ್‍ಗಳನ್ನು
ಪಡೆದುಕೊಂಡು ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್‍ಪಿ
ನರಸಿಂಹ ವಿ ತಾಮ್ರದ್ವಜ, ಹರಿಹರ ವೃತ್ತದ ಸಿಪಿಐ
ಸತೀಶ್‍ಕುಮಾರ್.ಯು ಅವರ ಮುಖಾಂತರ ಹರಿಹರದ ಸದರನ್
ಗ್ಯಾಸ್‍ನವರಿಗೆ ಆಕ್ಸಿಜನ್ ಸಂಗ್ರಹಣೆಗಾಗಿ ನೀಡಲಾಗಿದೆ.
ಈ ಸಾರ್ವಜನಿಕ ಹಿತಾಸಕ್ತಿಯ ಮಾನವೀಯ ಕಾರ್ಯವನ್ನು ಮೆಚ್ಚಿ
ಜಿಲ್ಲಾ ಪೊಲೀಸ್ ಅಧಿಕ್ಷಕ ಹನುಮಂತರಾಯ ಅವರು ಹೆಚ್ಚುವರಿ
ಪೊಲೀಸ್ ಅಧಿಕ್ಷಕ ರಾಜೀವ್.ಕೆಎಸ್‍ಪಿಎಸ್, ದಾವಣಗೆರೆ ಗ್ರಾಮಾಂತರ ಉಪ
ವಿಭಾಗದ ಡಿವೈಎಸ್‍ಪಿ ನರಸಿಂಹ ವಿ ತಾಮ್ರದ್ವಜ, ಹರಿಹರ ವೃತ್ತದ ಸಿಪಿಐ
ಸತೀಶ್‍ಕುಮಾರ್.ಯು, ಮಲೇಬೆನ್ನೂರು ಪಿಎಸ್‍ಐ ವೀರಬಸಪ್ಪ
ಕುಸಲಾಪುರ ಮತ್ತು ಸಿಬ್ಬಂದಿಗಳಾದ ವೆಂಕಟೇಶ್ ರೆಡ್ಡಿ,
ಬಸವರಾಜ್.ಟಿ, ಮೂರ್ತಿ.ಜೆ.ಎಸ್. ಮತ್ತು ರಾಜಶೇಕರ್ ಅವರಿಗೆ ಪ್ರಶಂಸೆ
ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.