ಚಿಕ್ಕಮಗಳೂರು,ಮೇ.20 :ಕೋವಿಡ್-20 ಸಾಂಕ್ರಾಮಿಕ ರೋಗವು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಮೇ ೨೪ ರವರೆಗೆ ನಡೆಯಲಿರುವ ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಕೋವಿಡ್-೧೯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸದೆ ಉಲ್ಲಂಘನೆ ಕಂಡುಬಂದಲ್ಲಿ ಅಥವಾ ಅನಧಿಕೃತವಾಗಿ ಸಮಾರಂಭಗಳು ನಡೆಯುವುದು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ತಾಲ್ಲೂಕು ವ್ಯಾಪ್ತಿಯಲ್ಲಿನ ಕಂಟ್ರೋಲ್ ರೂಂಗಳಿಗೆ ದೂರುಗಳನ್ನು ಸಲ್ಲಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ.
ತಾಲ್ಲೂಕುವಾರು ಕಂಟ್ರೋಲ್ ರೂಂಗಳ ವಿವರ:
ಚಿಕ್ಕಮಗಳೂರು ತಾಲ್ಲೂಕು ಕಛೇರಿ ದೂ.ಸಂ:೦೮೨೬೨-೨೩೧೩೯೨, ಕಡೂರು ತಾಲ್ಲೂಕು ಕಛೇರಿ ದೂ.ಸಂ:೦೮೨೬೭-೨೨೧೨೪೦, ತರೀಕೆರೆ ತಾಲ್ಲೂಕು ಕಛೇರಿ ದೂ.ಸಂ:೦೮೨೬೧-೨೯೫೫೦೧, ಅಜ್ಜಂಪುರ ತಾಲ್ಲೂಕು ಕಛೇರಿ ದೂ.ಸಂ:೦೮೨೬೧-೨೯೫೮೦೧, ಕೊಪ್ಪ ತಾಲ್ಲೂಕು ಕಛೇರಿ ದೂ.ಸಂ:೦೮೨೬೫-೨೯೫೭೪೭, ಶೃಂಗೇರಿ ತಾಲ್ಲೂಕು ಕಛೇರಿ ದೂ.ಸಂ;೦೮೨೬೫-೨೫೦೧೩೫, ನರಸಿಂಹರಾಜಪುರ ತಾಲ್ಲೂಕು ಕಛೇರಿ ದೂ.ಸಂ:೦೮೨೬೬-೨೨೦೧೨೮, ಮೂಡಿಗೆರೆ ತಾಲ್ಲೂಕು ಕಛೇರಿ ದೂ.ಸಂ:೦೮೨೬೩-೨೨೧೨೦೪, ಚಿಕ್ಕಮಗಳೂರು ನಗರಸಭೆ ದೂ.ಸಂ:೦೮೨೬೨-೨೩೪೦೩೨/ ೨೩೨೨೭೨, ಕಡೂರು ಪುರಸಭೆ ದೂ.ಸಂ: ೦೮೨೬೭-೨೨೧೨೨೧, ಬೀರೂರು ಪುರಸಭೆ ದೂ. ಸಂ:೦೮೨೬೭-೨೫೫೮೮೮/೨೫೫೦೭೯, ತರೀಕೆರೆ ಪುರಸಭೆ ದೂ.ಸಂ:೦೮೨೬೧-೨೨೨೨೩೩, ನರಸಿಂಹರಾಜಪುರ ಪಟ್ಟಣ ಪಂಚಾಯಿತಿ ದೂ.ಸಂ:೦೮೨೬೬-೨೨೦೧೨೧, ಕೊಪ್ಪ ಪಟ್ಟಣ ಪಂಚಾಯಿತಿ ದೂ.ಸಂ:೦೮೨೬೫-೨೨೧೦೨೧, ಶೃಂಗೇರಿ ಪಟ್ಟಣ ಪಂಚಾಯಿತಿ ದೂ.ಸಂ:೦೮೨೬೫-೨೫೦೧೨೧, ಮೂಡಿಗೆರೆ ಪಟ್ಟಣ ಪಂಚಾಯಿತಿ ದೂ.ಸಂ:೦೮೨೬೩-೨೨೦೨೫೭ ಹಾಗೂ ಅಜ್ಜಂಪುರ ಪಟ್ಟಣ ಪಂಚಾಯಿತಿ ದೂ.ಸಂ:೦೮೨೬೧-೨೪೫೧೨೧ ನ್ನು ಸಂಪರ್ಕಿಸಬಹುದಾಗಿದೆ.