ಹೊನ್ನಾಳಿ : ಅವಳಿ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ನೂರು ಹಾಸಿಗೆಗಳ ಮೂರನೇ ಕೋವಿಡ್ ಕೇರ್ ಸೆಂಟರ್ ಆರಂಭ ಮಾಡಲಿದ್ದು, ಅದಕ್ಕೆ ಬೇಕಾದ ನೂರು ಹಾಸಿಗೆ ಹಾಗೂ ನೂರು ಕಾಟ್‍ಗಳನ್ನು ಉಚಿತವಾಗಿ ನೀಡುತ್ತೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಅವಳಿ ತಾಲೂಕಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೂರು ದಿನ ಲಾಕ್‍ಡೌನ್ ಕರೆ ನೀಡಿದ್ದು ಎರಡನೇ ದಿನವಾದ ಇಂದು ನಗರದ ಪ್ರದಕ್ಷಿಣಿ ಹಾಕಿ, ಕೊರೊನಾ ವಾರಿಯರ್ಸಗಳಾದ ಪೊಲೀಸರು ಹಾಗೂ ಕೊರೊನಾ ಸೋಂಕಿತರು, ರೋಗಿಗಳಿಗೆ ಬೆಳಗಿನ ಉಪಹಾರ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗಾಗಲೇ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಎರಡು ಕೋವಿಡ್ ಕೇರ್ ಸೆಂಟರ್‍ಗಳನ್ನು ಆರಂಭಿಸಿದ್ದು, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನೊಂದು ಕೋವಿಡ್ ಕೇರ್ ಸೆಂಟರ್ ಆರಂಭ ಮಾಡಲಿದ್ದು ಅದಕ್ಕೆ ಬೇಕಾದ ನೂರು ಬೆಡ್ ಹಾಗೂ ನೂರು ಕಾಟ್‍ಗಳನ್ನು ಉಚಿತವಾಗಿ ನಾನೇ ನೀಡುತ್ತೇನೆ ಎಂದರು.
ಅರಬಗಟ್ಟೆಯಲ್ಲಿ ಮೂರನೇ ಕೋವಿಡ್ ಕೇರ್ ಸೆಂಟರ್ ಆರಂಭವಾಗಲಿದ್ದು ಇನ್ನೂರು ಹಾಸಿಗೆ ಬೇಕಾದರೂ ಮಾಡ ಬಹುದಾದ ಸಾಮಥ್ರ್ಯವನ್ನು ಹೊಂದಿದ್ದು ಆರಂಭಿಕ ಹಂತವಾಗಿ ನೂರು ಹಾಸಿಗೆ ಬೆಡ್‍ಗಳನ್ನು ಮಾಡುತ್ತಿದ್ದು ಅಗತ್ಯ ಬಿದ್ದರೇ ಅದನ್ನು ಜಾಸ್ತಿ ಮಾಡುವುದಾಗಿ ತಿಳಿಸದರಲ್ಲದೇ ಬೆಡ್ ಹಾಗೂ ಕಾಟ್‍ಗಳನ್ನು ನೀಡುತ್ತೇನೆ ಎಂದರು.
ತಾಲೂಕು ಆಸ್ಪತ್ರೆಗೆ ಆಮ್ಲಾಜನಕ ಸಾಂಧ್ರಕಗಳನ್ನು ನೀಡುವಂತೆ ಸಿಎಂ ಬಳಿ ಮನವಿ ಮಾಡಿದ್ದು ನಿನ್ನೆ 18 ಕಳುಹಿಸಿಕೊಟ್ಟಿದ್ದು ನಾಳೆ ಮತ್ತೆ ಇಪ್ಪತೈದು ಆಮ್ಲಜನಕ ಸಾಂಧ್ರಕಗಳು ಆಸ್ಪತ್ರೆಗೆ ಬರಲಿವೆ ಎಂದರು.
ಸೋಮವಾರದಿಂದ ಅಂಬ್ಯೂಲೆನ್ಸ್ ಸೇವೆ ಆರಂಭವಾಗಲಿದೆ ಎಂದ ಶಾಸಕರು, ಶಿವಮೊಗ್ಗದಲ್ಲಿರುವ ನಮ್ಮ ಒಡೆತನದ ಬಾಪೂಜಿ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಮಾಡುತ್ತಿದ್ದು 120 ಬೆಡ್‍ಗಳನ್ನು ಸಿದ್ದ ಪಡಿಸಲಾಗುತ್ತಿದೆ ಎಂದರು. ಈಗಾಗಲೇ ಆಕ್ಸಿಜನ್ ಪೂರೈಕೆ ಸೇರಿದಂತೆ ವಿವಿಧ ಕಾಮಗಾರಿಗಳು ಆರಂಭವಾಗಿದ್ದು ಸದ್ಯದಲ್ಲೇ ಅದೂ ಕೂಡ ಕಾರ್ಯಾರಂಭವಾಗಲಿದೆ ಎಂದರು.
ಎರಡನೇ ದಿನವೂ ಲಾಕ್‍ಡೌನ್ ಯಶಸ್ವಿ : ಅವಳಿ ತಾಲೂಕಿನಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಈ ಹಿನ್ನೆಲೆಯಲ್ಲಿ ಅವಳಿ ತಾಲೂಕುಗಳನ್ನು ಮೂರು ದಿನ ಸಂಪೂರ್ಣವಾಗಿ ಲಾಕ್‍ಡೌನ್ ಮಾಡಿದ್ದು ಎರಡನೇ ದಿನವಾದ ಇಂದು ಅವಳಿ ತಾಲೂಕುಗಳು ಸಂಪೂರ್ಣವಾಗಿ ಸ್ಥಬ್ದವಾಗಿತ್ತು. ವರ್ತಕರು, ಅಗಂಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಲಾಕ್‍ಡೌನ್‍ಗೆ ಬೆಂಬಲ ಸೂಚಿಸಿದ್ದು ಅವರಿಗೆ ಶಾಸಕರು ಧನ್ಯವಾದ ಅರ್ಪಿಸಿದರು. ಲಾಕ್‍ಡೌನ್ ಸೋಮವಾರ ಬೆಳಗ್ಗೆ ಆರುಘಂಟೆಯವರೆಗೂ ಮುಂದುವರೆಯಲಿದ್ದು ಸಾರ್ವಜನಿಕರು ಕಠಿಣ ಲಾಕ್‍ಡೌನ್‍ಗೆ ಇದೇ ರೀತಿ ಸಹಕಾರ ನೀಡುವಂತೆ ಮನವಿ ಮಾಡಿದರು.
ನಾಳೆಯಿಂದ 18 ವರ್ಷ ಮೇಲ್ಪಟ್ವರಿಗೆ ಲಸಿಕೆ : ಅವಳಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ತಾಲೂಕು ಆಸ್ಪತ್ರೆಗಳಲ್ಲಿ, ಅಂಬೇಡ್ಕರ್ ಭವನದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿದ್ದು, ಸರ್ಕಾರದ ಗೈಡ್‍ಲೈನ್ಸ್ ಮೂಲಕ ಲಸಿಕೆ ನೀಡಲಾಗುತ್ತಿದ್ದು ಯುವಕರು ಯಾವುದೇ ಗೊಂದಲವಿಲ್ಲದಂತೆ ಲಸಿಕೆ ಹಾಕಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.
ಈ ಸಂದರ್ಭ ಡಾ.ಸುದೀಪ್, ಎಸೈ ಬಸವನಗೌಡ ಬಿರಾದರ್ ಸೇರಿದಂತೆ ಮತ್ತೀತತರಿದ್ದರು.

Leave a Reply

Your email address will not be published. Required fields are marked *