ಉಳ್ಳಾಲ ಮಿಲ್ಲತ್ ನಗರ ನಿವಾಸಿಯಾಗಿದ್ದ ತಾಜುದ್ದೀನ್ ತಂಗಲ್ ಕಳೆದ ಕೆಲವು ದಿನಗಳ ಹಿಂದೆ ಮಂಗಳೂರಿನ ಮಂಗಳ ಕಿಡ್ನಿ ಪೌಂಡೇಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದರು, ಚಿಕಿತ್ಸೆ ಪಡೆಯುತ್ತಿದ್ದರು. ಈ ದಿನ ತಾರೀಕು 19 5 20 21 ಇಂದು ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ವಿಷಯ ತಿಳಿದ ತಕ್ಷಣ covid 19 ಯು ಟಿ ಕೆ ಹೆಲ್ಪ್ಲೈನ್ 24/7 ತಂಡದ ಸದಸ್ಯರು ತಕ್ಷಣ ಆಸ್ಪತ್ರೆಗೆ ಧಾವಿಸಿ ತಮ್ಮ ನೆಚ್ಚಿನ ಶಾಸಕರಾದ ಯುಟಿ ಖಾದರ್ ಸಾಹೇಬರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ *ಆಸ್ಪತ್ರೆಯಲ್ಲಿ ಪಾವತಿಸಲು ಬಾಕಿ ಇದ್ದ 2 ಲಕ್ಷ 60 ಸಾವಿರ ರೂಪಾಯಿಯನ್ನುಮಾನ್ಯ ಶಾಸಕರಾದ ಯುಟಿ ಖಾದರ್ ಸಾಹೇಬರು ಬಿಲ್ಲನ್ನು ಬರಿಸಿ ಮೃತ ಪ್ರಾರ್ಥಿವ ಶರೀರವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು, ನಿಸ್ವಾರ್ಥ ಸೇವೆಗೈದ ಮಾನ್ಯ ಯುಟಿ ಖಾದರ್ ಸಾಹೇಬ್ ರವರಿಗೆ ತುಂಬು ಹೃದಯದ ಕೃತಜ್ಞತೆಗಳು,ಅದೇ ಸಹಕರಿಸಿದ covid 19 ಯು ಟಿ ಕೆ ಹೆಲ್ಪ್ಲೈನ್ 24/7 ಇದರ ಸದಸ್ಯರಿಗೂ ಅನಂತಾನಂತ ಧನ್ಯವಾದಗಳನ್ನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *