ಕರೋನಾವೈರಸ್ ಮೊದಲ ಅಲೆ ಆರಂಭವಾಗಿ ಲಾಕ್ ಡೌನ್ ಆದ ನಂತರ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಆರ್ಥಿಕ ಪ್ಯಾಕೇಜ್ ಅನ್ನು ಘೋಷಿಸಿತು ಅದರಲ್ಲಿ ಸರ್ಕಾರವು ಹಲವು ವರ್ಗದ ಶ್ರಮಿಕರನ್ನು ಗುರುತಿಸಿ ನೆರವನ್ನು ನೀಡಿತು ನಿಜಕ್ಕೂ ಸರ್ಕಾರದ ಆ ಕಾರ್ಯ ಉತ್ತಮವಾದದ್ದು ಆನಂತರ ಸರ್ಕಾರವು ಲಾಕ್ ಡೌನ್ ಕ್ರಮೇಣ ಸಡಿಲ ಗೊಳಿಸುತ್ತಾ ಬಂದಂತೆ ಹಲವು ವರ್ಗದ ಶ್ರಮಿಕರ ಕೆಲಸಗಳು ಆರಂಭವಾಯಿತು ವಾಣಿಜ್ಯ ಚಟುವಟಿಕೆಗಳು ನಡೆಯಲಾರಂಭಿಸಿದವು ಭಾಗಶಃ ಎಲ್ಲಾ ಮೊದಲಿನಂತೆ ನಡೆಯಿತು ಎಲ್ಲರೂ ತಮ್ಮ ತಮ್ಮ ವೃತ್ತಿಯಲ್ಲಿ ತೊಡಗಿಸಿಕೊಂಡು ಜೀವನವನ್ನು ಸಾಗಿಸುತ್ತ ಬಂದರು ಆದರೆ 2020 ರ ಫೆಬ್ರವರಿಯಲ್ಲಿ ಮುಚ್ಚಲ್ಪಟ್ಟ ಶಾಲೆಗಳು ಒಂದೂವರೆ ವರ್ಷದಿಂದಲೂ ಹಾಗೆಯೇ ಮುಚ್ಚಿದೆ ಇದರಿಂದ ರಾಜ್ಯಾದ್ಯಂತ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರು ಹಾಗೂ ಪಠ್ಯೇತರ ಚಟುವಟಿಕೆಗಳಾದ ಕರಾಟೆ ಚಿತ್ರಕಲೆ ಭರತನಾಟ್ಯ ಡ್ಯಾನ್ಸ್ ಚೆಸ್ ಅಬಾಕಸ್ ನ ಶಿಕ್ಷಕ ವರ್ಗದವರು ಹಾಗೂ ಅವರ ಕುಟುಂಬ ಕರೋನಾ ಸಂಕಷ್ಟದಿಂದ ಅಲ್ಲದೆ ಆರ್ಥಿಕ ಸಂಕಷ್ಟದಿಂದ ಪ್ರತಿನಿತ್ಯ ನಲುಗಿ ಹೋಗುತ್ತಿದೆ ಇಂದು ರಾಜ್ಯಾದ್ಯಂತ ಕರೋನಾ ವಾರಿಯರ್ಸ್ ಗಳಾಗಿ ಕೆಲಸ ನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಸಿಬ್ಬಂದಿಗಳು ಅಧಿಕಾರಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಿರುವುದರಲ್ಲಿ ರಾಜ್ಯದ ಖಾಸಗಿ ಶಾಲೆಗಳ ಪಾತ್ರವೂ ಸಹ ಇದೆ ಏಕೆಂದರೆ ಒಬ್ಬ ಉತ್ತಮ ಶಿಕ್ಷಕನು ಇಲ್ಲದಿದ್ದರೆ ಉತ್ತಮ ಸಮಾಜದ ರಚನೆ ಆಗಲಾರದು ಎಂಬ ಮಾತಿನಂತೆ ಇಂದು ಉತ್ತಮ ಸಮಾಜವಿದೆ ಎಂದರೆ ಅದು ಶಿಕ್ಷಕರಿಂದ
ಇಂದು ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಪಠ್ಯೇತರ ಚಟುವಟಿಕೆಗಳ ಶಿಕ್ಷಕರು ಶಾಲೆಗಳನ್ನು ಅವಲಂಬಿಸಿ ಬದುಕುತ್ತಿರುವವರು ಕರೋನ ಎರಡನೇ ಅಲೆಯಿಂದಲೂ ಶಾಲೆಗಳು ಆರಂಭವಾಗದ ಕಾರಣ
ಮೊದಲೇ ಕಷ್ಟದಲ್ಲಿದ್ದ ಈ ವರ್ಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು ಸರಕಾರ ಎರಡನೆ ಅಲೆಯ ಪ್ಯಾಕೇಜನ್ನು ಘೋಷಿಸುವಾಗ ಎಲ್ಲೋ 1ಆಶಾಭಾವನೆಯನ್ನು ಇಟ್ಟುಕೊಂಡಿದ್ದರು ಆದರೆ ಸರ್ಕಾರ ಈ ಬಾರಿಯೂ ಅವರಿಗೆ ನಿರಾಸೆಯನ್ನು ತಂದಿದು ಮುಂದಿನ ದಿನಗಳಲ್ಲಾದರೂ ಸರ್ಕಾರವು ಕರೋನ ಆರಂಭವಾದಾಗಿನಿಂದಲೂ ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಶಾಲೆಗಳನ್ನು ಅವಲಂಬಿಸಿ ಇರುವ ವಿವಿಧ ವರ್ಗದ ಶ್ರಮಿಕರನ್ನು ಗುರುತಿಸಿ ಅವರಿಗೆ ನೆರವು ನೀಡಬೇಕಾಗಿ ವಿನಂತಿ