ಶಿವಮೊಗ್ಗ: ನಗರದ ವಿವಿಧೆಡೆ ಆ್ಯಂಬ್ಯುಲೆನ್ಸ್‌ಗಳು ನಿಯಮ ಮೀರಿ ಹಣ ಆ್ಯಂಬ್ಯುಲೆನ್ಸ್‌ಗಳ ಹಣ ಸುಲಿಗೆಗೆ ಕಡಿವಾಣ ಹಾಕಿ : ವಿಜಯ್ಸುಲಿಗೆ
ಮಾಡುತ್ತಿದ್ದು, ಶೀಘ್ರವೇ ಇದಕ್ಕೆ ಕಡಿವಾಣ ಹಾಕುವಂತೆ ಎನ್‌ಎಸ್‌ಯುಐ ನಗರಾಧ್ಯಕ್ಷ
ವಿಜಯ್ ಒತ್ತಾಯಿಸಿದ್ದಾರೆ.
ಕೊರೊನಾ ರೋಗವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವೊಂದಿಷ್ಟು
ಆ್ಯಂಬುಲೆನ್ಸ್ ಚಾಲಕರು ನಿಗದಿತ ದರಕ್ಕಿಂತ ಎರಡು, ಮೂರು ಪಟ್ಟು ಹೆಚ್ಚು ಹಣ
ವಸೂಲಿ ಮಾಡುತ್ತಿದ್ದಾರೆ. ಆದರೂ ಸಂಬಂಧಪಟ್ಟವರು ಈ ಬಗ್ಗೆ ಜಾಣ ಕುರುಡುತನ
ಪ್ರದರ್ಶಿಸುತ್ತಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಖಾಸಗಿ ಆಂಬ್ಯುಲೆನ್ಸ್‌ಗಳ ಹಾವಳಿ
ಮಿತಿ ಮೀರಿದೆ. ಇತ್ತೀಚೆಗೆ ಇದನ್ನು ತಡೆಯಲು ಪೋಲಿಸ್, ಆರ್.ಟಿ.ಒ. ಜಂಟಿಯಾಗಿ
ಕಾರ್ಯಾಚರಣೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ಖಾಸಗಿ
ಆಸ್ಪತ್ರೆಗಳ ಆಂಬ್ಯುಲೆನ್ಸ್‌ಗಳ ವಿಪರೀತ ಶುಲ್ಕಕ್ಕೆ ಕಡಿವಾಣ ಹಾಕುವವರೇ
ಇಲ್ಲವಾಗಿದ್ದಾರೆ ಎಂದು ಅವರು ದೂರಿದ್ದಾರೆ.
ಮೆಗ್ಗಾನ್‌ನಿಂದ ಕೊರೋನಾ ಸೋಂಕಿತರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗಳಿಗೆ
ಕರೆದೊಯ್ಯುವ ವೇಳೆ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ. ಇದನ್ನು ತಡೆಯಲು
ಪ್ರೀಪೇಯ್ಡ್ ವ್ಯವಸ್ಥೆ ಮಾಡಿದ್ದು, ಕಿ.ಮೀ ಲೆಕ್ಕದಲ್ಲಿ ದರ ನಿಗದಿ ಮಾಡಲಾಗಿದೆ. ಶವ
ಸಾಗಿಸಲು ಟೆಂಪೋ ಟ್ರಾವೆಲ್‌ಗೆ ಪ್ರತಿ ಕಿಮೀಗೆ 16 ರೂ, ಒಮ್ನಿ ಅಂಬ್ಯುಲೆನ್ಸ್ ಗೆ 11
ರೂ ನಿಗದಿ ಮಾಡಲಾಗಿದೆ. ಆದರೂ ಆಂಬ್ಯುಲೆನ್ಸ್ ಚಾಲಕರು ರೋಗಿಗಳ
ಕುಟುಂಬಸ್ತರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ಪ್ರೀಪೇಯ್ಡ್ ವ್ಯವಸ್ಥೆ
ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಅಲ್ಲದೇ ಕೋವಿಡ್ನಿಂದ ಮೃತಪಟ್ಟ ಶವವನ್ನು ಸ್ಮಶಾನಕ್ಕೆ ಸಾಗಣೆ
ಮಾಡುವುದಕ್ಕಾಗಿಯೇ ಮೃತನ ಸಂಬಂಧಿಕರಿಂದ ಸಾವಿರಾರು ರೂಪಾಯಿ ವಸೂಲಿ
ಮಾಡಲಾಗುತ್ತಿದೆ. ಈ ಆರೋಪಗಳು ಮೊದಲಿನಿಂದಲೂ ಕೇಳಿ ಬರುತ್ತಿದ್ದರೂ
ಸಂಬಂಧಪಟ್ಟವರು ಕಠಿಣ ಕ್ರಮಕ್ಕೆ ಮುಂದಾಗಿಲ್ಲ. ಇನ್ನಾದರೂ ಜಿಲ್ಲಾಡಳಿತ
ಕೋವಿಡ್ನಿಂದ ಸಾವನ್ನಪ್ಪಿದವರ ಕುಟುಂಬಸ್ಥರ ಮತ್ತು ಇತರೆ ರೋಗಿಗಳ ನೆರವಿಗೆ
ಧಾವಿಸಬೇಕು. ಕೊರೊನಾ ರೋಗವನ್ನೆ ಬಂಡವಾಳ ಮಾಡಿಕೊಂಡಿರುವ ಆ್ಯಂಬುಲೆನ್ಸ್
ಚಾಲಕರು ಸೇರಿದಂತೆ ಇತರರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಮಾಡಬೇಕು ಎಂದು
ವಿಜಯ್ ಒತ್ತಾಯಿಸಿದ್ದಾರೆ.