ಹೊನ್ನಾಳಿ : ಕೊರೊನಾ ಎರಡನೇ ಅಲೆ ಸುನಾಮಿ ರೀತಿ ಅಪ್ಪಳಿಸುತ್ತಿದ್ದು, ಪ್ರತಿಹಳ್ಳಿಹಳ್ಳಿಗಳಲ್ಲೂ ಜನರಿಗೆ ಕೊರೊನಾ ಜಾಗೃತಿ ಮೂಡಿಸುವ ಕೆಲಸವನ್ನು ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಮುಖಂಡರು ಮಾಡ ಬೇಕಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ತಾಲೂಕಿನ ಕುಂಬಳೂರು ಹಾಗೂ ಕುಂದೂರು ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಕೊರೊನಾ ಜಾಗೃತಿ ಮೂಡಿಸಿ ಮಾತನಾಡಿದರು. ಕುಂಬಳೂರು ಗ್ರಾಮದಾಧ್ಯಂತ ಸ್ಯಾನಿಟೈಸರ್ ಮಾಡಿದ್ದು ಅದೇ ರೀತಿ ಪ್ರತಿ ಹಳ್ಳಿಹಳ್ಳಿಗಳನ್ನು ಸ್ಯಾನಿಟೈಸರ್ ಮಾಡುವಂತೆ ಶಾಸಕರು ಗ್ರಾಮ ಪಂಚಾಯಿತಿ ಸದಸ್ಯರಿಗೆ ಕಿವಿ ಮಾತು ಹೇಳಿದರು.
ನಮ್ಮಗಳ(ಸಾರ್ವಜನಿಕರ) ಬೇಜಬ್ದಾರಿತನದಿಂದ ಎರಡನೇ ಅಲೆ ಸುನಾಮಿ ರೀತಿ ಹಬ್ಬುತ್ತಿದೇ ಅಷ್ಟೇ ಅಲ್ಲದೇ ಮನುಷ್ಯನನ್ನು ಬಲಿ ಪಡೆಯುತ್ತಿದೆ ಎಂದ ಶಾಸಕರು ಇದಕ್ಕೆ ಕಾರಣ ಗಾಂಧೀ ಪ್ರತಿಮೆ ಬಳಿ ಕುಳಿತು ಪ್ರತಿಭಟನೆ ಮಾಡಿದವರು ಎಂದು ಪ್ರತಿಪಕ್ಷಗಳಿಗೆ ಪರೋಷವಾಗಿ ಟಾಂಗ ನೀಡಿದರು.
ಆರಂಭದಲ್ಲಿ ಲಸಿಕೆ ಬಂದಾಗ ಯಾರು ಹಾಕಿಸಿಕೊಳ್ಳ ಬೇಡಿ ಎಂದು ಅಪಪ್ರಚಾರ ಮಾಡಿದವರೇ ಲಸಿಕೆ ಹಾಕಿಸಿಕೊಂಡು ಆರೋಗ್ಯವಾಗಿ ಇದ್ದರೇ ಆದರೇ ಅವರ ಮಾತು ಕೇಳಿ ಲಸಿಕೆ ಹಾಕಿಸಿಕೊಳ್ಳದೇ ಇರುವವರು, ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದರು.
ಆರಂಭದಲ್ಲಿ ಲಸಿಕೆ ಹಾಕಿಸಿಕೊಂಡಿದ್ದರೇ ಇಷ್ಟು ಸಮಸ್ಯೆ ಇರಲಿಲ್ಲಾ. ಆದರೇ ಇದೀಗ ಜನರು ಲಸಿಕೆಗೆ ಮುಗಿ ಬೀಳುತ್ತಿರುವುದರಿಂದ ಲಸಿಕೆಗೆ ತೊಂದರೆಯಾಗಿದ್ದು ಲಸಿಕೆಯನ್ನು ಸರ್ಕಾರ ಪೂರೈಕೆ ಮಾಡಲಿದ್ದು ಜನರು ಆತಂಕ ಪಡುವ ಅಗತ್ಯವಿಲ್ಲಾ ಎಂದರು.
ಮೊದಲನೇ ಅಲೆ ಆರಂಭವಾದಗ ಜನರು ಹಳ್ಳಿಹಳ್ಳಿಗಳಿಗೆ ಭೇಟಿ ನೀಡಿ ಜನರಿಗೆ ಜಾಗೃತಿ ಮೂಡಿಸಿ, ಕೊರೊನಾ ವಾರಿಯರ್ಸಗಳಿಗೆ ಉಪಹಾರ ನೀಡಿ, ಅಗತ್ಯ ಬಿದ್ದವರಿಗೆ ಫುಡ್ ಕಿಟ್ ನೀಡಿದ ಪರಿಣಾಮ ಕೊರೊನಾ ಅತೋಟಿಗೆ ಬಂತು.
ಆದರೇ ಎರಡನೇ ಅಲೆ ಸುನಾಮಿಯಂತೆ ಅಪ್ಪಳಿಸುತ್ತಿದ್ದರೂ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರೂ ಕೂಡ ಜನರು ಮಾತ್ರ ಜಾಗೃತರಾಗಿಲ್ಲಾ. ಇದರಿಂದ ಸಾಕಷ್ಟು ಸಾವು ನೋವು ಉಂಟಾಗುತ್ತಿದ್ದು ಜನರು ಇನ್ನಾದರೂ ಜಾಗೃತರಾಗಿರಿ ಎಂದರು.
ಹೊನ್ನಾಳಿ ಆಸ್ಪತ್ರೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದ್ದು ಈಗಾಗಲೇ ಆಕ್ಸಿಜನ್ ಘಟಕದ ಕೆಲಸ ಆರಂಭವಾಗಿದ್ದು, 18 ಆಮ್ಲಜನಕ ಸಾಂಧ್ರಕಗಳು ಬಂದಿದ್ದು ಇನ್ನು 25 ಸಾಂದ್ರಕಗಳು ಇಂದು ಬರಲಿವೆ ಎಂದ ಶಾಸಕರು, ಅಂಬ್ಯುಲೆನ್ಸ್ ಸೇವೆ ಸೇರಿದಂತೆ ನಮ್ಮ ಒಡೆತನದ ಶಿವಮೊಗ್ಗದಲ್ಲಿನ ಬಾಪೂಜಿ ಆಸ್ಪತ್ರೆಯಲ್ಲಿ 120 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ಆರಂಭವಾಗಲಿದೆ ಎಂದರು.
ತಾಲೂಕು ಆಸ್ಪತ್ರೆ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಮಾದನಬಾವಿನ ಕೋವಿಡ್ ಕೇರ್ ಸೆಂಟರ್‍ಗಳು ಸಂಪೂರ್ಣವಾಗಿ ಭರ್ತಿಯಾಗಿದ್ದು ಮೂರನೇ ಕೋವಿಡ್ ಕೇರ್ ಸೆಂಟರ್ ಸದ್ಯದಲ್ಲೇ ಆರಂಭಗೊಳ್ಳಿದೆ ಎಂದರು. ಇನ್ನಾದರೂ ಜನರು ಜಾಗೃತರಾಗಿ ಮನೆಯಿಂದ ಹೊರ ಬಾರದೇ ಕೊರೊನಾದಿಂದ ಮುಕ್ತರಾಗಿರಿ ಎಂದು ಶಾಸಕರು ಕಿವಿ ಮಾತು ಹೇಳಿದರು.
ಈ ಸಂದರ್ಭ ಗ್ರಾ.ಪಂ.ಅಧ್ಯಕ್ಷ ವಿಕಾಸ್, ತಾಲೂಕು ಪಂಚಾಯಿತಿ ಸದಸ್ಯರ ತಿಪ್ಪೇಶ್, ಎಸ್.ಆರ್.ಈಶ್ವರಪ್ಪ,ಡಿ.ಸಿ.ಹನುಮಂತಪ್ಪ,ಪಂಚಾಕ್ಷರಪ್ಪ,ಪಿ.ಪಿ.ರಾಜಣ್ಣ,ರಾಮು, ನಪೂರಿ

Leave a Reply

Your email address will not be published. Required fields are marked *