ನ್ಯಾಮತಿ : ಕೊರೊನಾ ಹೆಮ್ಮಾರಿ ಹಳ್ಳಿಹಳ್ಳಿಗೂ ವ್ಯಾಪಿಸುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ರಣಕೇರೆ ಹಾಕುತ್ತಿದೇ. ಇನ್ನಾದರೂ ಗ್ರಾಮೀಣ ಭಾಗದ ಜನರು ಹೆಚ್ಚೆತ್ತುಕೊಂಡು ಮನೆಯಿಂದ ಹೊರ ಬಾರದೇ ಕೊರೊನಾದಿಂದ ದೂರ ಉಳಿಯುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದರು.
ತಾಲೂಕಿನ ಚೀಲೂರು, ದೊಡ್ಡೇರಿ,ಚಿ.ಕಡದಕಟ್ಟೆ,ದಿಡಗೂರು ಹರಳಹಳ್ಳಿ,ಗಡೇಕಟ್ಟೆ ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಕೊರೊನಾ ಜಾಗೃತಿ ಮೂಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊರೊನಾ ಸೋಂಕು ಸಮುದಾಯಕ್ಕೂ ಹರಡುತ್ತಿದ್ದರೂ, ಜನರು ಜಾಗೃತರಾಗದೇ ಇರುವುದು ಬೇಸರ ಮೂಡಿಸಿದೆ ಎಂದರು.
ಕೆಮ್ಮು,ನೆಗಡಿ,ಜ್ವರ ಬಂದ ತಕ್ಷಣ ಜನರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವ ಬದಲು ಔಷಧಿಗಳನ್ನು ತೆಗೆದುಕೊಂಡು ಸುಮ್ಮನಾಗುತ್ತಿದ್ದಾರೆ, ಕೊರೊನಾ ಸೋಂಕು ಶ್ವಾಸಕೋಶಕ್ಕೆ ಹಬ್ಬುತ್ತಿದ್ದಂತೆ ಜನರು ಬಡ್ ಕೊಡಿಸಿ ಎಂದು ಪೋನ್ ಮಾಡುತ್ತಾರೆ, ಅದನ್ನು ಬಿಟ್ಟು ಯಾರಿಗೇ ಕೆಮ್ಮು,ನೆಗಡಿ,ಶೀತದ ಲಕ್ಷಣಗಳು ಕಂಡು ಬಂದರೇ ಕೂಡಲೇ ಅವರು ಸರ್ಕಾರಿ ಆಸ್ಪತ್ರೆಗೆ ಬಂದು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಶಾಸಕರು ಮನವಿ ಮಾಡಿದರು.
ಕೊರೊನಾದಂತಹ ಸಂಕಷ್ಟದ ಕಾಲದಲ್ಲೂ ನನಗೆ ಅವಳಿ ತಾಲೂಕಿನ ಜನರ ಆರೋಗ್ಯವೇ ಮುಖ್ಯ ಎಂದು ಅವಳಿ ತಾಲೂಕಿನಾಧ್ಯಂತ ಓಡಾಡಿ ಜನರಿಗೆ ಕೊರೊನಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ, ಇಷ್ಟಿದ್ದರೂ ಹಳ್ಳಿಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದು ನಿಜಕ್ಕೂ ಬೇಸರ ಮೂಡಿಸಿದೇ ಎಂದರು.
ಇನ್ನಾದರೂ ಜನರು ಎಚ್ಚೆತ್ತುಕೊಂಡು ಮನೆಯಿಂದ ಹೊರ ಬಾರದೇ ಮನೆಯಲ್ಲಿ ಇದ್ದು ಕೊರೊನಾದಿಂದ ದೂರ ಉಳಿಯುವಂತೆ ಸಲಹೆ ನೀಡಿದರು.
ಚೆಕ್‍ಪೋಸ್ಟ್ ಭೇಟಿ : ಚೀಲೂರು ಗ್ರಾಮದ ಚೆಕ್‍ಪೋಸ್ಟ್‍ಗೆ ಭೇಟಿ ನೀಡಿದ ಶಾಸಕರು ಚೆಕ್‍ಪೋಸ್ಟ್ ಸಿಬ್ಬಂದಿಗಳ ಬಳಿ ಮಾಹಿತಿ ಪಡೆದರು. ಇದೇ ವೇಳೆ ಚೆಕ್‍ಪೋಸ್ಟ್‍ನಲ್ಲಿ ಲಾರಿಯೊಂದು ಬಂದಾಗ ಚಾಲಕನಿಗೆ ಕೊರೊನಾ ಜಾಗೃತಿ ಮೂಡಿಸಿದ ಶಾಸಕರು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವಂತೆ ಬುದ್ದಿ ಹೇಳಿದರು.
ಆಸ್ಪತ್ರೆಗಳಿಗೆ ಭೇಟಿ : ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ ಶಾಸಕರು ಲಸಿಕೆ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು. ಆರಂಭದಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳದ ಪರಿಣಾಮ ಲಸಿಕೆಗೆ ತೊಂದರೆಯಾಗಿದ್ದು ಮುಂದೆ ಯಾವುದೇ ತೊಂದರೆಯಾಗದ ರೀತಿ ಸರ್ಕಾರ ಲಸಿಕೆ ಪೂರೈಕೆ ಮಾಡಲಿದೆ ಎಂದರು.
ಕೊರೊನಾ ವಾರಿಯರ್ಸಗಳಿಗೆ ಲಸಿಕೆ : ಇಂದಿನಿಂದ 18 ವರ್ಷ ಮೇಲ್ಪಟ್ಟ 44 ವರ್ಷ ಒಳಗಿನ ಕೊರೊನಾ ವಾರಿಯರ್ಸಗಳಿಗೆ ನಗರದ ಅಂಬೇಡ್ಕರ್ ಭವನದಲ್ಲಿ ಲಸಿಕೆ ನೀಡಲಾಗುತ್ತಿದ್ದು, ಅಷ್ಟೇ ಅಲ್ಲದೇ 45 ವರ್ಷ ಮೇಲ್ಟಟ್ಟವರಿಗೆ ಕಿತ್ತೂರುರಾಣಿ ಚೆನ್ನಮ್ಮ ಸಮುದಾಯ ಭವನ ಸೇರಿದಂತೆ ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡುತ್ತಿದ್ದು ಜನರು ಯಾವುದೇ ಗೊಂದಲ ಮಾಡಿಕೊಳ್ಳದೇ ಲಸಿಕೆ ಹಾಕಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.
ಬೆಳಗಿನ ಉಪಹಾರ : ಪ್ರತಿದಿನದಂತೆ ಇಂದೂ ಕೂಡ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರು, ಲಸಿಕೆ ಹಾಕಿಸಿಕೊಳ್ಳಲು ಬಂದ ಸಾರ್ವಜನಿಕರು, ಕೊರೊನಾ ವಾರಿಯರ್ಸಗಳಾದ ಪೊಲೀಸರು, ದಾದಿಯರು, ಆಶಾ ಕಾರ್ಯಕರ್ತರಿಗೆ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಶಾಸಕರ ಅನುಪಸ್ಥಿತಿಯಲ್ಲಿ ಅವರ ಸಹೋದರ ರಮೇಶ್ ಉಪಹಾರ ನೀಡಿ ಜನರಿಗೆ ಕೊರೊನಾ ಜಾಗೃತಿ ಮೂಡಿಸಿದರು
ಈ ಸಂದರ್ಭದಲ್ಲಿ ಮಾಜಿ ಬಿಜೆಪಿ ತಾಲೂಕು ಅಧ್ಯಕ್ಷ ದೊಡ್ಡೇರಿ ರಾಜಣ್ಣ,ಸೋಮಣ್ಣ,ಚನ್ನಯ್ಯ, ಗಿರೀಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿದ್ದರು.

Leave a Reply

Your email address will not be published. Required fields are marked *