ರಡ್ಡಿ ಸಮುದಾಯದ ಗುರುಪೀಠದ ಮಹಾಯೋಗಿಗಳಾದ ಪರಮಪೂಜ್ಯ ಶ್ರೀ ವೇಮನಾನಂದ ಶ್ರೀಗಳ ಆಶೀರ್ವಾದ ಪಡೆದು ದೇಶದಾದ್ಯಂತ ಸಮಾಜದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನಿಡಿರುವ ಹಿನ್ನೆಲೆಯಲ್ಲಿ ಅಖಿಲ ಭಾರತ ರೆಡ್ಡಿ ಒಕ್ಕೂಟದಿಂದ ಕೇವಲ ಒಂದೇರಡು ದಿನಗಳಲ್ಲಿ ಕುಟುಂಬ ಮೊಬೈಲ್ ಆ್ಯಪ್ ಮುಖಾಂತರ ರಾಜ್ಯ ಹಾಗೂ ದೇಶದಾದ್ಯಂತ ಅತೀ ಹೆಚ್ಚಿನ ರಡ್ಡಿ ಸಮಾಜದ ಸದಸ್ಯತ್ವ ಪಡೆದಿರುವ ಏಕೈಕ ಸಮಾಜ ಸಂಘಟಿತ ಪ್ರಯತ್ನವೆಂಬುದು ರಡ್ಡಿ ಸಮಾಜಕ್ಕೆ ಹೆಮ್ಮೆಯ ವಿಷಯ. ಇದು ರಾಜ್ಯ ಹಾಗೂ ದೇಶದಲ್ಲಿಯೇ ಮೊದಲು ರಚನೆಗೊಂಡ ಸಮಾಜದ ಸಂಘಟನೆಯ ಮೊಬೈಲ್ ಅಪ್ಲಿಕೇಶನ ಆಗಿದೆ. ಇದರಲ್ಲಿ ಎಲ್ಲರೂ ಸದಸ್ಯತ್ವ ಪಡೆಯಬೇಕು ಈಗಾಗಲೇ ಈ ಆ್ಯಪ್ ಮುಖಾಂತರ ದೇಶದಾದ್ಯಂತ 36412 ಕರ್ನಾಟಕದಲ್ಲಿ ಹಾಗೂ 595 ಕುಲ ಬಾಂಧವರು ಅಂಡಮಾನ್ ನಿಕೊಬಾರ್,ಪಶ್ಚಿಮ ಬಂಗಾಳ,ಝಾರ್ಖಂಡ,ಜಮ್ಮು ಕಾಶ್ಮೀರ ಸೇರಿದಂತೆ ಇನ್ನಿತರ ರಾಜ್ಯದಲ್ಲಿ ಸದ್ಯಸತ್ವ ಪಡೆದಿರುತ್ತಾರೆ. ಸಮಾಜದಲ್ಲಿ ಕುಲ ಬಾಂಧವರು ಪರಸ್ಪರ ಏಕತೆ ಹಾಗೂ ಬಲಿಷ್ಠವಾಗಿ ಬೆಳೆಯಲು ನಮ್ಮ ರಡ್ಡಿ ಕುಲದ ಎಲ್ಲಾ ಒಳಪಂಗಡಗಳು ಒಂದಾಗಿ ಕೂಡಿಕೊಂಡು ಏನಾದರೂ ಸಾಧನೆ ಮಾಡಬೇಕು ಮತ್ತು ಅಖಿಲ ಭಾರತ ರೆಡ್ಡಿ ಒಕ್ಕೂಟವು ಎಲ್ಲರಿಗೂ ಅನುಕೂಲವಾಗುವಂತೆ ಕಾರ್ಯನಿರ್ವಹಿಸಲಿದೆ ಸಮಾಜದವರೆಲ್ಲಾ ಅದರ ಸದಸ್ಯತ್ವವನ್ನು ಕೂಡಲೇ ಪಡೆದುಕೊಳ್ಳಬೇಕು ಕರ್ನಾಟಕ ರಾಜ್ಯಾದ್ಯಂತ ಇರುವ ರಡ್ಡಿ ಸಮಾಜವೂ ಒಂದುಗೂಡದೇ ಇರುವುದಕ್ಕೆ ಸರ್ಕಾರದ ಹಲವು ಯೋಜನೆಗಳು ರಡ್ಡಿ ಸಮಾಜಕ್ಕೆ ಸಿಗದೆ ಕೈತಪ್ಪಿ ಹೋಗಿವೆ ರಡ್ಡಿ ಕುಲ ಭಾಂದವರಲ್ಲಿ ಕೂಡ ಕಡು ಬಡವರಿದ್ದಾರೆ ಮತ್ತು ಆರ್ಥಿಕವಾಗಿ ಹಿಂದುಳಿದವರಿದ್ದಾರೆ ವಿದ್ಯಾಭ್ಯಾಸದಲ್ಲಿಯೂ ಎಷ್ಟೋ ಓದಿ ಒಳ್ಳೆಯ ಪಲಿತಾಂಶ ಪಡೆದರೂ ಸಹಿತ ಸರ್ಕಾರಿ ಕೆಲಸದಿಂದ ವಂಚಿತರಾಗದ್ದಾರೆ. ಇದಕ್ಕಾಗಿ ನಾವೆಲ್ಲಾ ಒಂದಾಗಬೇಕಾದ ಅನಿವಾರ್ಯತೆ ಉಂಟು
ಸದ್ಯ ರಾಜ್ಯದಲ್ಲಿರುವ ಸಮಾಜ ಭಾಂದವರೆಲ್ಲಾ ಒಂದಾಗಲೂ ಒಂದು ಉತ್ತಮ ವೇದಿಕೆ ನಿರ್ಮಾಣವಾಗಿದೆ ಅಖಿಲ ಭಾರತ ರೆಡ್ಡಿ ಒಕ್ಕೂಟದಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಗಾಗಲೇ ಸಂಘಟನೆ ಜಾಗೃತಗೊಂಡಿದೆ ಇದಕ್ಕಾಗಿ ರಾಜ್ಯ ಹಾಗೂ
ದೇಶದಾದ್ಯಂತ ಇರುವ ರೆಡ್ಡಿ ಬಾಂದವರಿಗಾಗಿ ಕುಟುಂಬ ಆ್ಯಪ್ ಮೂಲಕ ಎಲ್ಲರೂ ಸದ್ಯಸತ್ವ ಪಡೆದುಕೊಳ್ಳಬೇಕು ಹಾಗೂ ಅದರಲ್ಲಿ ತಮ್ಮ ಅಭಿಪ್ರಾಯವನ್ನು ಸೂಚಿಸಿಬೇಕು ಇದರ ಮೂಲಕ ನಮ್ಮ ರಡ್ಡಿ ಸಮಾಜದ ರಾಜ್ಯದ ಹಾಗೂ ದೇಶದ ವಿವಿಧ ರಾಜ್ಯದ ರಡ್ಡಿ ಬಂಧುಗಳ ಪರಿಚಯ ಆಗುವುದರೊಂದಿಗೆ ಕೆಲವು ವಿಶೇಷ ಸಂಧರ್ಭ ಮತ್ತು ಸನ್ನಿವೇಶಗಳಲ್ಲಿ ತುಂಬಾ ಸಹಕಾರಿ ಆಗುತ್ತದೆ. ಈ ಸಹಕಾರದ ಸಹಾಯ ಉಪಯೋಗ ಸಕರಾತ್ಮಕ ವಾಗಿರಲಿ ಎಂದು ಆಶಿಸುತ್ತೆವೆ. ಮುಂದೆ ಬರುವ ದಿನಗಳಲ್ಲಿ ನಮ್ಮ ರಡ್ಡಿ ಸಮಾಜದ ಸಂಖ್ಯೆಯ ಅರಿವಾಗುತ್ತದೆ. ಅಖಿಲ ಭಾರತ ರೆಡ್ಡಿ ಒಕ್ಕೂಟವು ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಈ ಆ್ಯಪ್ ಮೂಲಕ ಒದಗಿಸುವ ಪ್ರಯತ್ನ ಸಹ ಮಾಡಲಾಗುತ್ತದೆ. ಪ್ರತಿಯೊಬ್ಬರೂ ಸದಸ್ಯತ್ವಕ್ಕಾಗಿ ಸಹಕರಿಸಿ ಒಕ್ಕೂಟವು ಪ್ರಾರಂಭದಲ್ಲಿ ತಮ್ಮಿಂದ ಸಮಾಜದ ಒಳಿತಿಗಾಗಿ ಸದಾ ಮಾರ್ಗದರ್ಶನ ಮಾಡಲು ಆಶಿಸುವರಾಗಿದ್ದೇವೆ.
ಸಮಾಜದ ಸಂಘಟನೆ ಮಾಡುತ್ತಿರುವ ಪ್ರತಿಯೊಬ್ಬ ಸಮಾಜದ ಸಂಘಟಕರಿಗೆ ಹಾಗೂ ಸದಸ್ಯತ್ವ ಪಡೆದಿರುವ ಪ್ರತಿಯೊಬ್ಬರಿಗೂ ಅಖಿಲ ಭಾರತ ರಡ್ಡಿ ರಾಜ್ಯ ಒಕ್ಕೂಟದಿಂದ ಆತ್ಮೀಯ ಕುಲ ಬಾಂಧವರಿಗೆಲ್ಲ ಕೃತಜ್ಞತೆಗಳನ್ನು ಸಲ್ಲಿಸುತ್ತದ ಎಂದರು.