ಹೊನ್ನಾಳಿ : ಕೊರೊನಾ ಸೋಂಕು ಹರಡಿದ ತಕ್ಷಣ ಎಲ್ಲವೂ ಮುಗಿದೇ ಹೋಯಿತು ಎಂದು ಭಾವಿಸಬೇಡಿ, ಆತ್ಮವಿಶ್ವಾಸದಿಂದ ಇದ್ದರೇ ಕೊರೊನಾವನ್ನು ಗೆಲ್ಲಬಹುದೆಂದು ಸಿಎಂ.ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಎಚ್.ಕಡದಕಟ್ಟೆಯಲ್ಲಿರುವ ಕಿತ್ತೂರುರಾಣಿ ಚೆನ್ನಮ್ಮ,ಮಾದನಬಾವಿಯಲ್ಲಿರುವ ಮೊರಾರ್ಜಿವಸತಿಶಾಲೆ ಹಾಗೂ ಜೀನಹಳ್ಳಿಯ ಸಮಾಜಕಲ್ಯಾಣ ಇಲಾಖೆ ಹಾಸ್ಟನಲ್ಲಿರುವ ಕೋವಿಡ್ ಕೇರ್ ಸೆಂಟರ್ ಹಾಗೂ ಸಾಸ್ವೇಹಳ್ಳಿಯ ಸಮಾಜಕಲ್ಯಾಣ ಇಲಾಖೆಯ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿ, ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿ ಮಾತನಾಡಿದರು.
ಮನುಷ್ಯನಿಗೆ ಆತ್ಮವಿಶ್ವಾಸ ಆತ್ಯಂತ ಮುಖ್ಯವಾದದ್ದು, ಅದನ್ನು ಯಾರು ಕಳೆದುಕೊಳ್ಳಬಾರದೆಂದು ಕೊರೊನಾ ಸೋಂಕಿತರಿಗೆ ದೈರ್ಯ ತುಂಬಿದರು.
ಕೋವಿಡ್ ಕೇರ್ ಸೆಂಟರ್‍ನಲ್ಲಿರುವವರಿಗೆ ಮಾಸ್ಕ್ ಇಲ್ಲ ಸ್ಯಾನಿಟೈಸರ್ ಇಲ್ಲ ಕೊಡಿಸಿ ಎಂದು ಸೋಂಕಿತರು ಶಾಸಕರನ್ನು ಕೇಳಿದ ತಕ್ಷಣ ಶಾಸಕರು ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಸೋಂಕಿತರಿಗೆ ತಲಾ ಎರಡು ಮಾಸ್ಕ್ ನೀಡಿದರು ನಾಳೆ ಸ್ಯಾನಿಟೈಸರ್ ಕಳುಹಿಸಿ ಕೊಡುವುದಾಗಿ ಹೇಳಿದರು.
ಮಹಿಳೆಯೊಬ್ಬರು ಶಾಸಕರಿಗೆ ದೂರವಾಣಿ ಮಾಡಿ ಸಾರ್ ದಯಮಾಡಿ ನನ್ನ ತಮ್ಮನಿಗೆ ಬೆಡ್ ಸಿಗುತ್ತಿಲ್ಲ ದಯಮಾಡಿ ಬೆಡ್ ಕೊಡಿಸಿ ರಾಜಕೀಯವಾಗಿ ನೀವು ಹೇಳಿದಂಗೆ ಕೇಳುತ್ತೇವೆ ಎಂದು ಅಂಗಲಾಚಿದಾಗ ರಾಜಕೀಯವೇ ಬೇರೆ,ಮಾನವಿಯತಯೇ ಬೇರೆ ನಾನು ಶಾಸಕನಾಗಿರುವುದು ನಿಮ್ಮಗಳ ಸೇವೆಗಾಗಿ ಹೊರತು ಮೋಜು ಮಾಡುವುದಕ್ಕಲ್ಲ,ನೀವು ಯಾವುದೇ ಪಕ್ಷದವರಾಗಿರಿ ಮೊದಲು ನಿಮ್ಮ ಸೇವೆ ನಂತರ ರಾಜಕೀಯ ಎಂದು ಸಮಧಾನ ಹೇಳಿ ಅವರಿಗೆ ತಕ್ಷಣ ಬೆಡ್ ವ್ಯವಸ್ಥೆ ಮಾಡಿದರು.
ಇನ್ನು ಮುಂದೆ ಯಾವುದೇ ಕಾರಣಕ್ಕೂ ಕೊರೊನಾ ಸೋಂಕಿತರಿಗೆ ಹೋಂ ಐಸೋಲೇಷನ್‍ನಲ್ಲಿ ಅವಕಾಶ ಇಲ್ಲ,ದಯಮಾಡಿ ಯಾರಿಗೆ ಸೋಂಕು ದೃಢಪಟ್ಟಿದ್ದರೆ ಅಂತಹವರು ಕೋವಿಡ್‍ಕೇರ್ ಸೆಂಟರ್‍ನಲ್ಲಿ ಇರ ಬೇಕು, ಹೋಂಐಸೋಲೇಷನ್‍ಗೆ ದಯಮಾಡಿ ಮನವಿ ಮಾಡಬೇಡಿ ಎಂದರು.
ಈ ಸಂದರ್ಭದಲ್ಲಿ ನ್ಯಾಮತಿ ತಹಸೀಲ್ದಾರ್ ತನುಜಾಸೌದತ್ತಿ,ಉಪ ತಹಸೀಲ್ದಾರ್ ನಾಗರಾಜ್, ತಾ.ಪಂ.ಇಒ ರಾಮಬೋವಿ,ವೈದ್ಯಾಧಿಕಾರಿ ಮಲ್ಲಿಕಾರ್ಜುನ್.ನಿಂಗರಾಜ್,ಡಾ.ಮಧು,ಮೊರಾರ್ಜಿ ವಸತಿ ಶಾಲಾ ಪ್ರಾಂಶುಪಾಲರಾದ ಸುಪ್ರಿಯ,ಸಿಬ್ಬಂಧಿಗಳಾದ ರಾಧ,ವಿನಯ್ ಹಾಗೂ ಇತರರಿದ್ದರು.

Leave a Reply

Your email address will not be published. Required fields are marked *