ದಾವಣಗೆರೆ : ರಾಜ್ಯ ಸರಕಾರ ಘೋಷಿಸಿರುವ ೨ ಸಾವಿರ, ೩ ಸಾವಿರ ಪರಿಹಾರ ಯಾವುದೇ ಅನುಕೂಲಕರವಾಗಿಲ್ಲ. ಅದ್ದರಿಂದ ರಾಜ್ಯಸರಕಾರ ಕಾರ್ಮಿಕ ವರ್ಗಕ್ಕೆ ಕನಿಷ್ಟ ೧೦ ಸಾವಿರ ರೂ ಘೋಷಣೆ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾ ಅಧ್ಯಕ್ಷ ಹೆಚ್. ಸುಭಾನ್ ಸಾಬ್ ಆಗ್ರಹಿಸಿದ್ದಾರೆ.
ಗಾರ್ಮೆಂಟ್ಸ್ ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರು ಮತ್ತು ಎಲ್ಲಾ ಕಾರ್ಮಿಕ ವರ್ಗಕ್ಕೆ ಈಗಿನ ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಯಾವುದೇ ರೀತಿಯ ಪ್ಯಾಕೇಜ್ ಘೋಷಿಸಿರುವುದಿಲ್ಲ.ಇದರಿಂದ ಕಾರ್ಮಿಕ ಜೀವನ ಕಷ್ಟವಾಗಿದೆ. ಅದ್ದರಿಂದ ಈ ವರ್ಗವನ್ನು ಸರಕಾರ ಪರಿಗಣಿಸುವ ಮೂಲಕ ಅವರಿಗೂ ೧೦ ಸಾವಿರ ಪರಿಹಾರ ಘೋಷಿಸಬೇಕು.ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಹಿರಿಯ ಉಪಾಧ್ಯಕ್ಷ ಡಿ.ಜಿ.ಆಸೀಫ್ ಆಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಜಮ್ಮುಲ್ ಇದ್ದರು.