ಹೊನ್ನಾಳಿ : ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಸರ್ಕಾರ ಉಚಿತವಾಗಿ ಲಸಿಕೆ ನೀಡುತ್ತಿದ್ದು ಜಾತಿ,ಮತ,ಬೇದವಿಲ್ಲದೇ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾದಿಂದ ದೂರ ಉಳಿಯುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.


ಇಂದಿನಿಂದ ಜೂನ್ 7 ರವರೆಗೆ ರಾಜ್ಯಾದ್ಯಂತ ಲಾಕ್‍ಡೌನ್ ಕರೆ ನೀಡಿದ ಹಿನ್ನೆಲೆಯಲ್ಲಿ ಹೊನ್ನಾಳಿ ನಗರದಾದ್ಯಂತ ಅಧಿಕಾರಿಗಳೊಂದಿಗೆ ಪೆಟ್ರೊಲಿಂಗ್ ನಡೆಸಿ ಜನರಿಗೆ ಕೊರೊನಾ ಜಾಗೃತಿ ಮೂಡಿಸಿ ಮಾತನಾಡಿದರು.
ಮುಖ್ಯಮಂತ್ರಿಗಳು ಎಲ್ಲರಿಗೂ ಲಸಿಕೆ ನೀಡಬೇಕೆಂಬ ಉದ್ದೇಶದಿಂದ ಲಸಿಕೆ ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದು ಎಲ್ಲಾವರ್ಗದವರು ಲಸಿಕೆ ಹಾಕಿಸಿಕೊಂಡು ಕೊರೊನಾವನ್ನು ಹಿಮ್ಮೆಟ್ಟಿಸಲು ಸರ್ಕಾರದೊಂದಿಗೆ ಸಹಕಾರಿಸುವಂತೆ ಕರೆ ನೀಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೊರೊನಾ ಸಂಕಷ್ಟ ಕಾಲದಲ್ಲೂ ಎಲ್ಲಾ ವರ್ಗದವರಿಗೂ ಪ್ಯಾಕೇಜ್ ಘೋಷಿಸಿದ್ದು ಕೆಲವರು ಪ್ರಚಾರಕ್ಕಾಗಿ ಸಿಎಂ ಅವರನ್ನು ಟೀಕಿಸುವುದರ ಜೊತೆಗೆ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಕೇಳುತಿದ್ದು ಇದು ಸರಿಯಲ್ಲ ಎಂದ ಶಾಸಕರು, ಕೊರೊನಾ ಸಂಕಷ್ಟದ ಸಮಯದಲ್ಲೂ ಅತ್ಯುತ್ತಮ ಕೆಲಸ ಮಾಡುತ್ತಿರುವ ಸಿಎಂ ಏಕೆ ರಾಜಿನಾಮೆ ನೀಡಬೇಕು, ರಾಜಿನಾಮೆ ಕೇಳುವ ನೈತಿಕತೆ ನಿಮಗಿಲ್ಲಾ ಎಂದರು.
ಲಸಿಕೆ ಬಂದಾಗ ಆರಂಭದಲ್ಲಿ ಅಪಪ್ರಚಾರ ಮಾಡಿದವರು ತಾವು ಲಸಿಕೆ ಹಾಕಿಸಿಕೊಂಡು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ಆದರೇ ನಾವು ಕೊರೊನಾ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡುವುದಿಲ್ಲಾ ಎಂದರು.
ಶಾಸಕರಿಂದ ನಗರ ಪ್ರದಕ್ಷಿಣಿ : ಇಂದಿನಿಂದ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಹೊನ್ನಾಳಿ ನಗರಾಧ್ಯಂತ ಅಧಿಕಾರಿಗಳೊಂದಿಗೆ ಪೆಟ್ರೋಲಿಂಗ್ ಮೂಲಕ ನಗರ ಪ್ರದಕ್ಷಿಣಿ ಹಾಕಿದ ಶಾಸಕರು, ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಿದರು. ಯಾರೂ ಕೂಡ ಅನಗತ್ಯವಾಗಿ ಓಡಾಡದೇ ಲಾಕ್‍ಡೌನ್‍ಗೆ ಬೆಂಬಲ ನೀಡ ಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಿದರು.


ವೈದ್ಯರಿಂದ ಮೆಚ್ಚುಗೆ : ಹೊನ್ನಾಳಿ ಆಸ್ಪತ್ರೆಯಲ್ಲಿ ಪದೇ ಪದೇ ಆಕ್ಸಿಜನ್ ಸಮಸ್ಯೆಯಾಗುತ್ತಿದ್ದು ಸೋಂಕಿತರು ಸಾಕಷ್ಟು ಸಮಸ್ಯೆ ಅನುಭವಿಸ ಬೇಕಾಗಿತ್ತು. ಆದರೇ ಶಾಸಕರು 43 ಆಮ್ಲಜನಕ ಸಾಂದ್ರಕಗಳನ್ನು ಆಸ್ಪತ್ರೆಗೆ ಪೂರೈಕೆ ಮಾಡಿದ್ದರಿಂದ ಆಕ್ಸಿಜನ್ ಸಮಸ್ಯೆ ಕಡಿಮೆಯಾಗಿದ್ದು ಸೋಂಕಿತರಿಗೆ ಸಕಾಲಕ್ಕೆ ಆಕ್ಸಿಜನ್ ಪೂರೈಕೆ ಮಾಡಲು ಅನುಕೂಲವಾಗುತ್ತಿದೆ ಎಂದು ವೈದ್ಯ ಸುದೀಪ್ ಹಾಗೂ ವೈದ್ಯರ ತಂಡ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಹಂದಿಗಳ ಸ್ಥಳಾಂತರಕ್ಕೆ ಸೂಚನೆ : ತಾಲೂಕು ಆಸ್ಪತ್ರೆಯ ಆವರಣದಲ್ಲಿ ಹಂದಿಗಳ ಕಾಟ ಹೆಚ್ಚಾಗಿದ್ದು ಅವುಗಳನ್ನು ಕೂಡಲೇ ಸ್ಥಳಾಂತರ ಮಾಡುವಂತೆ ಸೂಚನೆ ನೀಡಿದ ಶಾಸಕರು ಆಸ್ಪತ್ರೆಯ ಆವರಣದಲ್ಲಿ ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡುವಂತೆ ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್‍ಗೆ ಸೂಚನೆ ನೀಡಿದರು. ಶಾಸಕರು ಸೂಚನೆ ನೀಡುತಿದ್ದಂತೆ ಜೆಸಿಬಿಯನ್ನು ಸ್ಥಳಕ್ಕೆ ಕರೆಸಿದ ಪುರಸಭಾಧ್ಯಕ್ಷರು ಆಸ್ಪತ್ರೆಯ ಆವರಣವನ್ನು ಸ್ವಚ್ಚಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ದಂಪತಿಗಳಿಗೆ ಪುಪ್ಪವೃಷ್ಟಿ : ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಿಮ್ಮೆನಹಳ್ಳಿ ಗ್ರಾಮದ ದಂಪತಿಗಳು ಕೊರೊನಾದಿಂದ ಗುಣಮುಖರಾಗಿ ಗ್ರಾಮಕ್ಕೆ ಹಿಂದಿರುಗುವಾಗ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಅಧಿಕಾರಿಗಳು ದಂಪತಿಗಳಿಗೆ ಪುಪ್ಪವೃಷ್ಟಿ ಸುರಿಸಿ ಬೀಳ್ಕೋಟ್ಟ ಘಟನೆ ನಡೆಯಿತು.
ತಹಸೀಲ್ದಾರ್ ಬಸನಗೌಡ ಕೋಟೂರ, ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್, ಮುಖ್ಯಾಧಿಕಾರಿ ಅಶೋಕ್ , ಎಂಜಿನಿಯರ್ ದೇವರಾಜ್,ಸದಸ್ಯರಾದ ರಂಗಪ್ಪ, ಮುಖಂಡರುಗಳಾದ ಮಹೇಶ್ ಹುಡೇದ್, ಗುಂಡ ಚಂದ್ರು,ಇಂಚರ ಮಂಜುನಾಥ್, ವೈದ್ಯರುಗಳಾದ ಡಾ.ಸುದೀಪ್ ಕುಮಾರ್, ಡಾ.ಗಿರೀಶ್, ಡಾ.ಲೀಲಾವತಿ, ಸಿಪಿಐ ಟಿ.ವಿ.ದೇವರಾಜ್, ಪಿಎಸ್‍ಐ ಬಸನಗೌಡ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *