ಪಾಲಿಕೆಯ ವ್ಯಾಪ್ತಿಯಲ್ಲಿ ಮಾಂಸದ ಉದ್ದಿಮೆ ನೆಡೆಸುತ್ತಿರುವ
ಉದ್ದಿಮೆದಾರರಿಗೆ ಮೇ.26 ರಂದು ಬುದ್ಧ ಪೂರ್ಣಿಮಾ
ಪ್ರಯುಕ್ತ ಪ್ರಾಣಿ ವಧೆ, ಪ್ರಾಣಿ ಮಾಂಸ, ಹಾಗೂ ಮೀನಿನ
ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಆದ್ದರಿಂದ ಸದರಿ
ದಿನಾಂಕದಂದು ಮಾಂಸ ಮಾರಾಟ ಮಾಡಬಾರದು, ತಪ್ಪಿದಲ್ಲಿ
ಮಹಾನಗರಪಾಲಿಕೆ ಕಾಯ್ದೆಯ ಪ್ರಕಾರ ಕಾನೂನು
ಕ್ರಮ ಜರುಗಿಸಲಾಗುವುದೆಂದು ಮಹಾನಗರಪಾಲಿಕೆಯ
ಆಯುಕ್ತರಾದ ವಿಶ್ವನಾಥ ಮುದ್ದಜ್ಜಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ