ಬೆಂಗಳೂರು – ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಘೋಷಣೆ ಮಾಡಿರುವ ಕೆಲವೇ ಸಮುದಾಯಗಳು ವೃತ್ತಿಪರರಾಗಿ ಇರುವುದಾಗಿ ಎಂದು ಬಿಂಬಿಸಿರುವುದು ಉಳಿದ ಸಮುದಾಯಗಳ ಆಕ್ರೋಶಕ್ಕೆ ಕಾರಣವಾಗಿದೆ.
ವೃತ್ತಿಪರವಾದ ೧೦೨ ಸಮಾಜಗಳಿದ್ದು ಕೇವಲ ೭ ಸಮಾಜಗಳಿಗೆ ಘೋಷಣೆ ಮಾಡಿದ್ದು ಎಷ್ಟು ಸರಿ. ಉದಾಹರಣೆಗೆ ನೇಕಾರ ಸಮುದಾಯಗಳು ೨೬ ಪಂಗಡಗಳು ನೇಕಾರಿಕೆ ವೃತ್ತಿಜೀವನ ನಡೆಸುತ್ತಿರುವ ಬಗ್ಗೆ ಸರ್ಕಾರ ಮನವರಿಕೆ ಮಾಡದಿರುವದು ಹಾಗೂ ಇನ್ನೂ ಅನೇಕ ಸಮಾಜಗಳು ವೃತ್ತಿಪರ ಜೀವನ ಸಾಗಿಸುತ್ತಿದ್ದು ಅವರೆಲ್ಲರಿಗೂ ವಿಶೇಷ ಪ್ಯಾಕೇಜ್ ನೀಡಬೇಕೆಂದು ತುರುವೇಕೆರೆ ಮಾಜಿ ಶಾಸಕರು ಹಾಗೂ ಹಿಂದುಳಿದ ವರ್ಗಗಳ ರಾಜ್ಯ ಅಧ್ಯಕ್ಷರು ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದರು.