ಹೊನ್ನಾಳಿ : ಕೋವಿಡ್ ಲಸಿಕೆಗೆ ಯಾವುದೇ ತೊಂದರೆ ಇಲ್ಲಾ ಯುವಕರು ಗೊಂದಲ ಇಲ್ಲದಂತೆ ಲಸಿಕೆ ಹಾಕಿಸಿಕೊಳ್ಳ ಬೇಕು, ಸಮಾಜಕ್ಕೆ ಬುದ್ದಿ ಹೇಳ ಬೇಕಾದ ಯುವಕರೇ ಸಾಮಾಜಿಕ ಅಂತರ ಮರೆತರೇ ಹೇಗೆ, ವಯಸ್ಕರಿಗೆ ಲಸಿಕೆ ಹಾಕಿಸಿಕೊಳ್ಳು ಅವಕಾಶ ನೀಡಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಯುವಕರಿಗೆ ತಿಳಿ ಹೇಳಿದರು.
ಅಂಬೇಡ್ಕರ್ ಭವನದಲ್ಲಿರುವ ಕೋವಿಡ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಸಾಮಾಜಿಕ ಅಂತರ ಮರೆತು ಲಸಿಕೆ ಹಾಕಿಸಿಕೊಳ್ಳುತ್ತಿದ್ದ ಯುವಕರಿಗೆ ತಿಳಿ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಲಸಿಕೆಗೆ ಯಾವುದೇ ತೊಂದರೆಯಾಗದ ರೀತಿ ಕೆಲಸ ಮಾಡುತ್ತಿದ್ದು, ಈಗಾಗಲೇ ಲಸಿಕೆಗಳು ಹಂತ ಹಂತವಾಗಿ ಬರುತ್ತಿದ್ದು ಯುವಕರು ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡದೇ ಲಸಿಕೆ ಹಾಕಿಸಿಕೊಳ್ಳುವುದರ ಜೊತೆಗೆ ವಯಸ್ಕರಿಗೆ ಪ್ರಾತಿನಿಧ್ಯ ನೀಡುವಂತೆ ಮನವಿ ಮಾಡಿದರು.
ಅವಳಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕರೋನಾ ಸೋಕಿತರನ್ನು ಕರೆ ತರುವುದಕ್ಕೆ ವೈಯಕ್ತಿಕವಾಗಿ ನಾಲ್ಕು ಆಂಬುಲೆನ್ಸ್‍ನ್ನು ಬಿಡಲಾಗುವುದು, ಇದರ ಉಪಯೋಗವನ್ನು ಉಚಿತವಾಗಿ ಪಡೆದುಕೊಳ್ಳಬಹುದು ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಆಂಬುಲೆನ್ಸ್‍ಗೆ ಚಾಲನೆ ನೀಡುವರು ಎಂದು ತಿಳಿಸಿದರು.
ಚಿತ್ರ1 ; ಲಸಿಕಾ ಕೇಂದ್ರಕ್ಕೆ ಆಗಮಿಸಿದ ಶಾಸಕ ಎಂ.ಪಿ.ರೇಣುಕಾಚಾರ್ಯ ಸಾಮಾಜಿಕ ಅಂತರದಲ್ಲಿ ನಿಂತು ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.