ಇದು ಸನ್ಮಾನ್ಯ ಯು.ಟಿ ಖಾದರ್ ಅವರು ಶಾಸಕರಾಗಿ ಪ್ರತಿನಿಧಿಸುವ ಮಂಗಳೂರು ವಿಧಾನಸಭಾ ಕ್ಷೇತ್ರದ ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್ ನ ಪೊಟ್ಟಳಿಕೆ ರಸ್ತೆ. ಪುರಾತನ ವಸ್ತುಗಳ ಕುರಿತು ಅಪಾರ ಕಾಳಜಿ ತೋರುತ್ತಿರುವ ಫ್ಯಾನ್-ಲೈಟ್ ಪೇಜುಗಳನ್ನು ನಡೆಸುವ ಪುಕ್ಸಟ್ಟೆ ಪ್ರಚಾರದ ಹಂಗಿನಲ್ಲಿರುವವರಿಗೆ.ಹಳೆಯ ಬೋರ್ ವೆಲ್ ಒಂದನ್ನು ಹೇಗೆ ಸಂರಕ್ಷಿಸಿ ಇಟ್ಟಿದ್ದಾರೆ ಎನ್ನುವುದರ ಇತಿಹಾಸ ತಿಳಿದುಕೊಳ್ಳಲು ವಿನಂತಿ.

ಇದು ನಮಗೆ ಕೇವಲ ಬೋರ್ ವೆಲ್ ಆದರೆ ಬಿಜೆಪಿ ಅವರಿಗೆ ಇದೊಂದು ಅಮೂಲ್ಯವಾದ ಕಲಾಪ್ರತಿಮೆ. ಹಾಗಾಗಿ ಬಿಜೆಪಿ ಆಡಳಿತದಲ್ಲಿ ಕಾಂಕ್ರೀಟ್ ರಸ್ತೆ ನಡುವಿನಲ್ಲಿರುವ “ಪುರಾತನ ಬೋರ್ ವೆಲ್” ಉಳಿಸಿಕೊಳ್ಳಲು ಕಾಂಕ್ರೀಟ್ ರಸ್ತೆಯ ನಡುವೆ ಅದನ್ನು ಸಂರಕ್ಷಿಸಿ ಇಡಲಾಗಿತ್ತು.ಕಾರಣ ಈ ಭಾಗದ ಜನರು ಕಾಂಕ್ರೀಟ್ ರಸ್ತೆಗೆ ಮನವಿ ಸಲ್ಲಿಸಿದ್ದರು.ಶಾಸಕರು ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭಿಸುವಾಗ ಸ್ಥಳೀಯರು ಬಂದು ಕರೆಂಟ್ ಇಲ್ಲದಾಗ ಹಾಗೂ ಇನ್ನಿತರ ಸಂದರ್ಭದಲ್ಲಿ ಬೊರೆವೆಲ್ ನಲ್ಲಿ ನೀರು ಬರುತ್ತದೆ ಹಾಗಾಗಿ ಈ ಬೊರ್ವೆಲ್ ಅವಶ್ಯಕತೆ ಇದೆ ಇದನ್ನು ತೆಗೆಯದಂತೆ ಬೇಡಿಕೆ ಇಟ್ಟಿದ್ದರು.ಆ ಸಂದರ್ಭದಲ್ಲಿ ಸತತ 5 ವರ್ಷ ಈ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಆಡಳಿತವಿತ್ತು.ನಂತರ ಬಿಜೆಪಿ ಆಡಳಿತವಿದ್ದ ಪಂಚಾಯತ್ ಗೆ ತೆರಳಿ ಸಾರ್ವಜನಿಕರು ಬೋರ್ವೆಲ್ ನಲ್ಲಿ ನೀರು ಇಲ್ಲದ ಕಾರಣ ಇದನ್ನು ತೆಗೆದುಹಾಕಿ ಎಂದರು. ಆದರೆ ಬಿಜೆಪಿ ಆಡಳಿತದ ಗ್ರಾಮ ಪಂಚಾಯತ್ ಜನರ ಮನವಿಗೆ ಸ್ಪಂದಿಸದೆ ಜಾಣ ಕಿವುಡುತನ ಪ್ರದರ್ಶಿಸಿದ ಪರಿಣಾಮ ಈ ಬಾರಿ ಗ್ರಾಮ ಪಂಚಾಯತ್ ಆಡಳಿತದಲ್ಲಿ 17 ಕ್ಕೆ 17 ಸೀಟುಗಳಲ್ಲಿ ಬಿಜೆಪಿ ಶೂನ್ಯ ಖಾತೆಯ ರೆಕಾರ್ಡ್ ಆರಂಭಿಸಿದೆ. ಜನರು ಬಿಜೆಪಿ ಆಡಳಿತವನ್ನು ಕಿತ್ತೊಗೆದು ಕಾಂಗ್ರೆಸ್ ಕೈಗೆ ಅಧಿಕಾರ ನೀಡಿದೆ.


ಇನ್ನು ಜಿಲ್ಲೆಯಾಗಲಿ ಗ್ರಾಮ ವಾಗಲಿ ಅಭಿವೃದ್ಧಿಪಡಿಸಲು ಕಾಂಗ್ರೆಸ್ ಬರಲೇ ಬೇಕು.ಇದಕ್ಕೆ ಪೇಮೆಂಟ್ ಕಾರ್ಮಿಕ ಸಮಜಾಯಿಷಿ ಕೊಡುವ ಅವಶ್ಯಕತೆ ಇಲ್ಲ.ಎಲ್ಲರಿಗೂ ತಿಳಿದಿರುವ ವಿಚಾರ. ಇವೆಲ್ಲದರ ನಡುವೆ ನಮಗೆ ಕಾಡುವ ಕಟ್ಟ ಕಡೆಯ ಪ್ರಶ್ನೆ ಈ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನೂ ಮಾಡುತ್ತಿರುತ್ತಾರೆ.

Leave a Reply

Your email address will not be published. Required fields are marked *