ವಸತಿ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ
ಸಚಿವರಾದ ವಿ.ಸೋಮಣ್ಣ ಮೇ.30 ರಂದು ಜಿಲ್ಲಾ ಪ್ರವಾಸ
ಕೈಗೊಳ್ಳಲಿದ್ದಾರೆ.
ಅಂದು ಬೆಳಿಗ್ಗೆ 9.30 ಕ್ಕೆ ಹರಿಹರ ತಾಲ್ಲೂಕಿಗೆ ಆಗಮಿಸಿ ಅಲ್ಲಿಯ
ಇಲಾಖಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಹಾಗೂ ವಸತಿ
ಇಲಾಖೆಯ ವ್ಯಾಪ್ತಿಯ ಕರ್ನಾಟಕ ಗೃಹ ಮಂಡಳಿ ವತಿಯಿಂದ
ಹರಿಹರ ಪಟ್ಟಣ ವ್ಯಾಪ್ತಿಯ ಶೋರಾಪುರ ಗ್ರಾಮದಲ್ಲಿ
ಪ್ರಗತಿಯಲ್ಲಿರುವ ವಸತಿ ಬಡಾವಣೆಯ ಕಾಮಗಾರಿಗಳ
ಪರಿವೀಕ್ಷಣೆ ಮಾಡಲಿದ್ದಾರೆ.
ನಂತರ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸುವರೆಂದು
ವಸತಿ ಸಚಿವರ ಆಪ್ತಕಾರ್ಯದರ್ಶಿ ಎಸ್.ಬಿ.ನರೇಂದ್ರ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.