ಕೋವಿಡ್ 19 ಕೊರೊನಾ ವೈರಸ್ ಸೋಂಕು ವೇಗವಾಗಿ
ಹರಡುತ್ತಿರುವ ಕಾರಣ ದಾವಣಗೆರೆ ನಗರದ 18 ರಿಂದ 45 ವರ್ಷ
ಮತ್ತು 45 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ (ಮಾನಸಿಕ
ಅಸ್ವಸ್ಥರನ್ನು ಒಳಗೊಂಡಂತೆ) ಕೋವಿಡ್ 19 ಲಸಿಕೆಯನ್ನು
ಪಡೆಯಲು ಚಿಗಟೇರಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ
ಆವರಣದಲ್ಲಿರುವ ಮಕ್ಕಳ ಆಸ್ಪತ್ರೆಯಲ್ಲಿ ಪ್ರತಿದಿನ 100
ಜನರಿಗೆ (ವಿಕಲಚೇತನರು &ಚಿmಠಿ; ಆರೈಕೆದಾರರು) ಬೆಳಿಗ್ಗೆ 9.30 ರಿಂದ
ಮಧ್ಯಾಹ್ನ 2 ಗಂಟೆವರೆಗೆ ಲಸಿಕೆ ನೀಡಲಾಗುತ್ತಿದೆ.
ವಿಕಲಚೇತನರು ಸರತಿ ಸಾಲಿನಲ್ಲಿ ನಿಲ್ಲದಂತೆ ನೇರವಾಗಿ ಆದ್ಯತೆ
ಮೇರೆಗೆ ನೇರವಾಗಿ ಲಸಿಕೆ ನೀಡಲಾಗುವುದು. ವೀಲ್‍ಚೇರ್ &ಚಿmಠಿ;
ಮೂಲಭೂತ ವ್ಯವಸ್ಥೆ ಕಲ್ಪಿಸಲಾಗಿದೆ. ದಾವಣಗೆರೆ ನಗರದ
ವಿಕಲಚೇತನರು ಈ ಆಸ್ಪತ್ರೆಗೆ ಬರುವಾಗ ಕಡ್ಡಾಯವಾಗಿ
ಆಧಾರ ಕಾರ್ಡ್ ಮತ್ತು ವಿಕಲಚೇತನರ ಗುರುತಿನ ಚೀಟಿ
ಅಥವಾ ಯು.ಡಿ.ಐ.ಡಿ. ಕಾರ್ಡ್ ದಾಖಲೆಗಳನ್ನು ತೆಗೆದುಕೊಂಡು
ಬರತಕ್ಕದ್ದು. ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆಯನ್ನು
ಪಡೆಯಲು ಸಾಧ್ಯವಾಗದವರು (ಬೆಡ್‍ರಿಡನ್) ವಾಹನದ
ಸೌಲಭ್ಯಕ್ಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ
ಹಾಗೂ ಹಿರಿಯ ನಾಗರಿಕರ ಇಲಾಖೆ ದಾವಣಗೆರೆ ದೂ.ಸಂ: 08192-
263936 ಅಥವಾ ವಿಕಲಚೇತನರ ಸಲಹಾ ಕೇಂದ್ರ ದೂ.ಸಂ: 08192-
263939 ಗೆ ಕರೆ ಮಾಡಿ ವಿಳಾಸ, ಮೊಬೈಲ್ ಸಂಖ್ಯೆ &ಚಿmಠಿ; ಇತರೆ ಮಾಹಿತಿ
ನೀಡಿ ನೋಂದಣಿ ಮಾಡಿಕೊಳ್ಳಬಹುದೆಂದು ಜಿಲ್ಲಾ
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ
ಜಿ.ಎಸ್.ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.