ಹೊನ್ನಾಳಿ ಎಪಿಎಮ್ ಸಿ ಪಕ್ಕದ ವಿದ್ಯಾನಗರದಲ್ಲಿರುವ ಏಸುಕ್ರಿಸ್ಥ ದೇವಾಲ¯ಯದ ಗುರುಗಳಾದ ಲೂರ್ಡತ್ ಸ್ವಾಮಿಗಳುರವರು ಕೊರೋನಾ 2 ನೇ ಅಲೆಯು ಹೆಚ್ಚಾಗಿರುವ ಕಾರಣ ಸರ್ಕಾರ ಲಾಕ್ ಡೌನ್ ಮಾಡಿರುವುದರಿಂದ ಕೆಲಸವಿಲ್ಲದೆ ಸುಮಾರು 15 ರಿಂದ 20 ಬಡಕುಟಂಬಗಳಿಗೆ ಆಹಾರದ ಕಿಟ್ಟುಗಳನ್ನು ವಿತರಿಸಿದರು.
ನಂತರ ಮಾತನಾಡಿದ ಲೂರ್ಡತ್ ಸ್ವಾಮಿಗಳು ನಮ್ಮ ಭಾರತ ದೇಶದಲ್ಲಿ ಕೊರೊನಾ ಮಹಾಮಾರಿ ಹೆಮ್ಮಾರಿ ಎಂಬ ರೋಗವು ತುಂಬಾ ಜನರನ್ನು ಬಲಿ ತಗೆದುಕೊಳ್ಳುತ್ತಿರುವುದು ದುಃಖದ ಸಂಗತಿಯಾಗಿದೆ ಎಂದರು. ಆದ ಕಾರಣ ಪ್ರತಿಯೊಬ್ಬರು ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳುಸುವುದರ ಜೊತೆಗೆ ಅಂತರವನ್ನು ಕಾಯ್ದುಕೊಂಡಾಗ ಮಾತ್ರ ಈ ರೊಗದಿಂದ ಮುಕ್ತರಾಗಬವುದು ಎಂದು ಹೇಳಿದರು.ನಾವುಗಳು ಏಸು ಕ್ರಿಸ್ಥರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವುದೆನೆಂದರೆ ಆದಸ್ಟು ಬೇಗನೆ ನಮ್ಮ್ ದೇಶದಿಂದ ಕೊರೊನಾ ರೋಗವನ್ನು ಓಡಿಸುವಂತಾಗಲಿ ಎಂದು ಯೇಸುವುನಲ್ಲಿ ಪ್ರಾರ್ಥಿಸಿದರು.