ಶಿಕಾರಿಪುರ ತಾಲೂಕಿನ ಚುರ್ಚಗುಂಡಿ ಗ್ರಾಮದಲ್ಲಿ ಸೋಮವಾರ ಕರೋನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮದ ಕೇರಿಗಳು ಗ್ರಾಮ ಪಂಚಾಯತಿ ಕಛೇರಿ, ಹಾಲಿನ ಡೈರಿ, ಮುರಾರ್ಜಿ ವಸತಿ ಶಾಲೆ, ಸಂಗಮೇಶ್ವರ ದೇವಸ್ಥಾನ ಎಲ್ಲಾ ಬೀದಿಗಳನ್ನು ಸ್ವಚ್ಛಗೊಳಿಸಿದರು.ಶಿಕಾರಿಪುರ ತಾಲೂಕಿನ ಚುರ್ಚಗುಂಡಿ ಗ್ರಾಮದಲ್ಲಿ ಸ್ಯಾನಿಟೈಸರ್ ಸಿಂಪಡಣೆ…ಚುರ್ಚಗುಂಡಿ ಗ್ರಾಮದ ವ್ಯಾಪ್ತಿಯಲ್ಲಿ ಕರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾವಾಗಿ ಕ್ರಮವನ್ನು ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲೇಶಪ್ಪ, ಸದಸ್ಯರಾದ ಭರತ್, ಪಂಚಾಯತಿ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು