ಎಂ.ಡಿ.ಎಲ್.ಅಗ್ರಹಬೆಂಗಳೂರು – ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಪ್ರತಿಯೊಂದು ಮನೆಗೂ ಹೋಗಿ ಕೋವಿಡ್ 19 ಕೊರೋನಾ ರೋಗ ಲಕ್ಷಣದ ವಿವರ ಪಡೆಯುತ್ತಿರುವ “ಆಶಾ ಕಾರ್ಯಕರ್ತರು” ರಾತ್ರಿ ಹಗಲು ಶ್ರಮ ಹಾಕುತ್ತಿದ್ದು ಇವರಿಗೆ ಸರ್ಕಾರ ನೀಡುತ್ತಿರುವ ಗೌರವ ಧನ ಎನೇನೂ ಸಾಲದೆಂದು ಸಾರ್ವಜನಿಕರ ಆಕ್ರೋಶವಿದೆ. ಅನೇಕ ತಿಂಗಳಿಂದ ಗೌರವ ಧನ ನೀಡಿಲ್ಲವೆಂದು ಗೋಗರೆಯುತ್ತಿರುವ ಆಶಾ ಕಾರ್ಯಕರ್ತರು ತಮ್ಮ ಪ್ರಾಣದ ಹಂಗು ತೊರೆದು ಕೆಲಸ ನಿರ್ವಹಣೆ ಸಾರ್ವಜನಿಕರಿಂದ ಮೆಚ್ಚುಗೆಯಾಗಿದೆ. ಇವರಿಗೆ ವರದಿ ಸಲ್ಲಿಸಲು ಕನಿಷ್ಠ ಸೌಲಭ್ಯಗಳನ್ನು ನೀಡದಿರುವುದು ನಾಚಿಕೆಗೇಡು. ಸರ್ಕಾರ ಕೂಡಲೇ ಆಶಾ ಕಾರ್ಯಕರ್ತರಿಗೆ ನೀಡಬೇಕಾದ ಬಾಕಿ ಹಾಗೂ ಮುಂದಿನ ದಿನಗಳಲ್ಲಿ ಕನಿಷ್ಟ ದಿನಗೂಲಿ ನೌಕರರಿಗೆ ನೀಡುವ ಸಂಬಳವನ್ನು ನೀಡಲು ಕ್ರಮ ಕೈಗೊಳ್ಳಬೇಕೆಂದು ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ರಾಜ್ಯ ಅಧ್ಯಕ್ಷರು ಹಾಗೂ ತುರುವೇಕೆರೆ ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣರವರು ಮುಖ್ಯಮಂತ್ರಿಗಳಿಗೆ ಅಗ್ರಹಿಸಿದರು.