ದೇಶ .ಹಾಗೂ ರಾಜ್ಯ ಹಿಂದೆಂದೂ ಕಂಡರಿಯದ ಒಂದು ಸಂದಿಗ್ಧ ಸ್ಥಿತಿಯಲ್ಲಿ ಇದ್ದು ಈ ಕೂ ರೋ ನಾ ಹೆಮ್ಮರಿಯನ್ನು ಕಟ್ಟಿ ಹಾಕುವುದರ ಜೊತೆಗೆ ಸಾರ್ವಜನಿಕರ ಜೀವ ಕಾಪಾಡುವ ಮತ್ತು ತುರ್ತು ಸೇವೆ ಸಲ್ಲಿಸುವುದು ಎಲ್ಲರ ಆದ್ಯ ಕರ್ತವ್ಯ ಅಂತಹ ಸೇವೆಯಲ್ಲಿ ನಮ್ಮ ವೀರ ಶೈವ ಸಮಾಜ ಪೂರಕವಾಗಿ ಕೆಲಸಮಾಡಿ ತೋರಿಸುತ್ತಿದೆ ಸಮಾಜ ಮುಖಿಯಾಗಿ ಅವರಸೇವೆ ಅನನ್ಯ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಅವರು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಅಖಿಲ ಭಾರತ ವೀರಶೈವ ಸಮಾಜದ ತಾ.ಘಟಕದ ವತಿಯಿಂದ ನೀಡಿದ್ದ ತುರ್ತು ವಾಹನ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು .ಅದರ ಅವಶ್ಯಕತೆ ಇತ್ತು ಹಳ್ಳಿಗಳಿಂದ ರೋಗಿಗಳ ತುರ್ತಾಗಿ. ಕರೆತರಲು ಈ ಆಂಬುಲೆನ್ಸ್ ಸೇವೆ ಅನನ್ಯ .ಜನರ ಜೀವ ಕಾಪಾಡಿ ದ ಪುಣ್ಯ ಅವರಿಗೆ ಲಭಿಸಲಿ ಎಂದು ಅಭಿಪ್ರಾಯಿಸಿದರು.
ಅಖಿಲ ಭಾರತ ವೀರಶೈವ ಮಹಾಸಭೆಯ ಅದ್ಯಕ್ಷ ವೀರೇಶ್ ಮಾತನಾಡಿ ನಾವು ಇಂದು ನೀಡುತ್ತಿರುವ ಈ ತುರ್ತು ವಾಹನ ಜನ ಸಾಮಾನ್ಯ ರ ಸೇವೆಗೆ ದಿನದ ಇಪ್ಪತ್ತು ನಾಲ್ಕು ಘಂಟೆ ಲಬ್ಯವಿದ್ದು ಸೇವೆ ಸಂಪೂರ್ಣ ಉಚಿತವಾಗಿ .ಮುಕ್ತಿ ವಾಹನದ ರೀತಿ ಕೆಲಸಕ್ಕೆ ಮೊದಲ ಆದ್ಯತೆ ಹಾಗೂ ತುರ್ತು ರೋಗಿಗಳನ್ನು ಕರೆತರಲು ಬಳಸಬಹುದಾಗಿದೆ.ಕೆಲವು ಕಡೆ ಕಾಸಾಗಿವಾಹನ್ ದವ ರು ಶವ ಸಾಗಿಸಲು ಹತ್ತ ರಿಂದ ಹದಿನೈದು ಸಾವಿರ ಹಣಕೆಳುತ್ತಿರುವ ವಿಚಾರ ಕೇಳಿ ಬಂದ ಹಿನ್ನಲೆಯಲ್ಲಿ ನಮ್ಮ ಸಮಾಜ ಬಡ ಜನರಿಗೆ ಅನುಕೂಲವಾಗಲೆಂದು ನಿರ್ಧರಿಸಿ ಇಂದು ಸಂಸದರ ಹಾಗೂ ಗುರುಗಳ ಸಾನಿಧ್ಯದಲ್ಲಿ ಲೋಕಾರ್ಪಣೆ ಮಾಡಲಾಗಿದ್ದು ಸಾರ್ವಜನಿಕರು ಇದನ್ನು ಸದ್ಬಳಕೆ ಮಾಡಿಕೊಳ್ಳಲು ಮನವಿ ಮಾಡಿದರು.
ದಿವ್ಯ ಸಾನಿದ್ಯವಹಿಸಿದ್ದ ವಿರಕ್ತ ಮಠದ ಬಸವ ಶ್ರೀಗಳು ಮಾತನಾಡಿ ಇದೊಂದು ಪುಣ್ಯದ ಕೆಲಸ ಸಮಾಜ ಇಂತಹ ಪುಣ್ಯದ ಕೆಲ್ಸ ಮಾಡಿದಾ ಗಲೇ ಭವಂತನ ಕಾಣಲು ಸಾಧ್ಯ ಈ ಪರಿಸ್ಥಿತಿ ಯಲ್ಲಿ ಪ್ರತಿ ಸಮಾಜ ಒಂದಲ್ಲ ಒಂದು ಸೇವೆಯಲ್ಲಿ ತೊಡಗಿಕೊಂಡು ಕೂ ರೋ ನಾ ರೋಗವನ್ನು ಓಡಿಸೋಣ ಪ್ರತಿಯೊಬ್ಬರೂ ಕೈ ಜೋಡಿಸಿ ಇಂತಹ ಪುಣ್ಯದ ಕೆಲಸದಲ್ಲಿ ಬಾಗಿಯಾ ಗುವುದು ಸೂಕ್ತ ವೇಂದರು .ಈ ಸಂದರ್ಬದಲ್ಲಿ ತಾ ಆರೋಗ್ಯ ಅಧಿಕಾರಿ ಚಂದ್ರಪ್ಪ.ಡಾಕ್ಟರ್ ಬ ಸ ವ ಕುಲಾಲ್.ಡಾಕ್ಟರ್ ಶಿವಾನಂದ್. ದಂಡಾಧಿಕಾರಿ ಕವಿರಾಜ್.ಹೆಮ್ಮೆಯ ಪೊಲೀಸ್ ಅಧಿಕಾರಿ ರಾಜು ರೆಡ್ಡಿ.ಬಿಸಿಎಂ ಇಲಾಖೆಯ ಶೋಬಾ. ಟಿ. ಏ.ಪೀ.ಎಮ್.ಸಿ.ಅಧ್ಯಕ್ಷ ಶಶಿಧರ ಚುರ್ಚಿಗುಂಡಿ. ಪುರಸಭೆ ಮುಖ್ಯಾಧಿಕಾರಿ ಸುರೇಶ್.ಹಾಗೂ ವೀರಶೈವ ಮಹಾಸಭೆಯ ಮುಖಂಡರು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿ ಸಿಬ್ಬಂದಿಗಳು ಇತರರು ಹಾಜರಿದ್ದರು
ವರದಿ ಜಿ ಕೆ ಹೆಬ್ಬಾರ್ ಶಿಕಾರಿಪುರ