ಮುಂಗಾರು ಮಳೆಗಾಲದ ಅವಧಿಯಲ್ಲಿ ಜೂನ್ 1 ರಿಂದ ಜುಲೈ 30
ರವರೆಗೆ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ. ಚನ್ನಗಿರಿ
ತಾಲ್ಲೂಕು ದಾವಣಗೆರೆ ಜಿಲ್ಲೆ ಶಾಂತಿಸಾಗರ ಜಲಾಶಯದಲ್ಲಿ ಮುಂಗಾರು
ಮಳೆಗಾಲದ ಅವಧಿಯಲ್ಲಿ ಒಳನಾಡು ಜಲಸಂಪನ್ಮೂಲಗಳ ಮೀನು
ಪಾಶುವಾರು ಹಕ್ಕಿನ ವಿಲೇವಾರಿ ಕಾರ್ಯನೀತಿ 2014 ರ ಆದೇಶದಂತೆ
ಮುಂಗಾರು ಮಳೆಗಾಲದ ಅವಧಿಯಲ್ಲಿ ಜೂನ್ 1 ರಿಂದ ಜುಲೈ 30
ಮಳೆಗಾಲದ ಅವಧಿಯಲ್ಲಿ ಮೀನುಗಳ ವಂಶಾಭಿವೃದ್ಧಿ ಚಟುವಟಿಕೆ
ನಡೆಯುವುದರಿಂದ ರಾಜ್ಯದ ಎಲ್ಲಾ ಸರ್ವಋತು ಕೆರೆಗಳು,
ಜಲಾಶಯಗಳು, ತೊರೆಗಳು, ಅಳೆವೆಗಳು ಮತ್ತು ನದಿಗಳಲ್ಲಿ
ಮೀನುಹಿಡಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.
ನಿಷೇಧವನ್ನು ಉಲ್ಲಂಘಿಸಿ ಮೀನು ಹಿಡುವಳಿ ಮಾಡಿದಲ್ಲಿ ನಿಯಾಮಾನುಸಾರ
ಕಾನೂನು ಜರುಗಿಸಲಾಗುವುದು ಎಂದು ಶಾಂತಿಸಾಗರ ಮೀನುಮರಿ
ಪಾಲನ ಕೇಂದ್ರದ ಮೀನುಗಾರಿಕೆ ಸಹಾಯಕ ನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.