ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ಹಾಗೂ ಯುವ ನಾಯಕ ಶ್ರೀ ಮಿಥುನ್ ರೈ ಅವರ ನೇತ್ರತ್ವದಲ್ಲಿ ಕೊರೋನಾ ವೈರಸ್ ನಿಂದ ಜನತೆಯನ್ನು ರಕ್ಷಿಸುವ ಉದ್ದೇಶದಿಂದ ಮಿಥುನ್ ರೈ ವಿತರಿಸಲ್ಪಟ್ಟ ಹೋಮ್ ಐಸೊಲೇಷನ್ ಕಿಟ್ ಅನ್ನು ಇಂದು ಬೆಳುವಾಯಿ ಗ್ರಾಮದಲ್ಲಿ ಆಶಾ ಕಾರ್ಯ ಕರ್ತರಿಗೆ, ಆಟೋ ರಿಕ್ಷಾ ಚಾಲಕರಿಗೆ , ಪೆಟ್ರೊಲ್ ಪಂಪ್ ಸಿಬ್ಬಂದಿಗಳಿಗೆ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಲೇರಿಯನ್ ಸಿಕ್ವೇರಾ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಜಯ ಕುಮಾರ್ ಶೆಟ್ಟಿ, ನಾಯಕರಾದ ಚಂದ್ರಹಾಸ್ ಸನಿಲ್, ಸುರೇಶ್ ಕೋಟ್ಯಾನ್,ವಕ್ತರರಾದ ರಾಜೇಶ್ ಕಡಲಕೆರೆ,ಸಾಮಾಜಿಕ ಜಾಲತಾಣದ ಅಧ್ಯಕ್ಷ ನಿತಿನ್ ಬೆಳುವಾಯಿ, ಸಂತೋಷ್ ಶೆಟ್ಟಿ, ಶಾಹಬಾಜ್,ಕಿರಣ್ ಕುಮಾರ್, ರಾಘು ಪೂಜಾರಿ, ಸುರೇಶ್ ಕೆ. ಪೂಜಾರಿ,ಶೌಕತ್ ಅಲಿ, ಹೇಮಲತಾ, ಮಹೇಶ್ ಭಂಡಾರಿ, ಇಕ್ಬಾಲ್, ಮುಂತಾದವರು ಉಪಸ್ಥಿತರಿದ್ದರು.