ಹೊನ್ನಾಳಿ : ಸಿ.ಪಿ.ಯೋಗಿಶ್ವರ್ ನನ್ನು ಕೂಡಲೇ ಸಚಿವ ಸ್ಥಾನದಿಂದ ಮುಖ್ಯಮಂತ್ರಿಗಳು ವಜಾಗೊಳಿಸಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರು ಮೆಗಾಸಿಟಿ ಹಗರಣದಲ್ಲಿ ಸಿ.ಪಿ.ಯೋಗಿಶ್ವರನನ್ನು ಬಂದಿಸುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪನವರ ಕಾಲು ಹಿಡಿದು ಸಚಿವನಾದ ಯೋಗಿಶ್ವರ್ ಅವರ ಬಗ್ಗೆಯೇ ಮಾತನಾಡುತ್ತಿದ್ದು, ಯಡಿಯೂರಪ್ಪನವರು ಸಿ.ಪಿ.ಯೋಗಿಶ್ವರ್‍ನನ್ನ ಸಚಿವನನ್ನಾಗಿ ಮಾಡಿದ್ದೇ ದೊಡ್ಡ ತಪ್ಪು ಎಂದರು.
ಜನರಿಂದ ತಿರಸ್ಕøತನಾದ ನಿಮ್ಮನ್ನ ಎಂಎಲ್‍ಸಿ ಮಾಡಿ ಸಚಿವನನ್ನಾಗಿ ಮಾಡಿದ್ದೇ ದೊಡ್ಡ ತಪ್ಪು ಎಂದ ರೇಣುಕಾಚಾರ್ಯ ಕಾಂಗ್ರೇಸ್‍ನಿಂದ ಶಾಸಕನಾಗಿ ರಾಜಿನಾಮೆ ನೀಡಿ ಬಿಜೆಪಿ ಸೇರಿ, ನಂತರ ಯಡಿಯೂರಪ್ಪನವರ ಆಶೀರ್ವಾದದಿಂದ ಶಾಸಕನಾಗಿ ಸದಾನಂದಗೌಡರು ಸಿಎಂ ಆಗಿದ್ದಾಗ ಅರಣ್ಯ ಸಚಿವನಾಗಿ ಲೂಟಿ ಹೊಡೆದು, ಹೋಗುವುದರ ಜೊತೆಗೆ ಗೂಟ ಕಿತ್ತುಕೊಂಡು ಹೋದರು ಎಂಬುವಂತೆ ಪಕ್ಷ ಬಿಟ್ಟು ಸೈಕಲ್ ಏರಿ, ಕಾಂಗ್ರೇಸ್ ಪಕ್ಷ ಸೇರಿ, ಆನಂತರ ಮತ್ತೆ ಬಿಜೆಪಿ ಸೇರಿದ ಯೋಗಿಶ್ವರ್‍ನನ್ನು ಚನ್ನಪಟ್ಟಣದ ಜನರು ತಿರಸ್ಕರಿಸಿದ್ದರು.
ನಮ್ಮಲ್ಲಿ ಸಾಕಷ್ಟು ಜನ ಹಿರಿಯರಿದ್ದರು ನಿನ್ನ ಎಂಎಲ್‍ಸಿ ಮಾಡಿ ಸಚಿವನ್ನಾಗಿ ಮಾಡಿದಕ್ಕೆ
ಬಿಜೆಪಿ ಮೂರು ಭಾಗವಾಗಿದೆ ಎಂದು ಹೇಳ್ತೀಯಲ್ಲಾ ನಿನಗೆ ಯಾವ ನೈತಿಕತೆ ಎಂದು ಪ್ರಶ್ನೇ ಮಾಡಿದರು. ನಿಮ್ಮಿಂದಲೇ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದ್ದು ಕೂಡಲೇ ಸಿ.ಪಿ.ಯೋಗಿಶ್ವರ್ ನನ್ನ ಪಕ್ಷದಿಂದ ವಜಾ ಮಾಡುವಂತೆ ರೇಣುಕಾಚಾರ್ಯ ಸಿಎಂ ಅವರನ್ನು ಆಗ್ರಹಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಶಾಸಕಾಂಗ ಸಭೆ ಕರೆಯುವ ಅಗತ್ಯತೇ ಇಲ್ಲಾ ಎಂದ ರೇಣುಕಾಚಾರ್ಯ, ಕೋವಿಡ್ ಎರಡಲೇ ಅಲೆ ಹೆಚ್ಚಾಗಿದ್ದು ಕ್ಷೇತ್ರದ ಕಾವಲುಗಾರರಾಗಿ ಶಾಸಕರು ಕೆಲಸ ಮಾಡ ಬೇಕೆಂದು ಸಿಎಂ ಸೂಚಿಸಿದ್ದು ಅದರಂತೆ ನಾವು ಕೆಲಸ ಮಾಡುತ್ತಿದ್ದೇವೆ, ಶಾಸಕಾಂಗ ಸಭೆ ಕರೆಯವಂತೆ ಸಿ.ಪಿ.ಯೋಗಿಶ್ವರ್ ಹೇಳಿದ್ದು ಅವರಿಗೆ ಶಾಸಕಾಂಗ ಸಭೆಕರೆಯುವಂತೆ ಹೇಳುವ ಯಾವ ನೈತಿಕತೆ ಇಲ್ಲಾ ಎಂದರು.
ಯಡಿಯೂರಪ್ಪ, ವಿಜಯೇಂದ್ರ ಅವರ ಕಾಲು ಹಿಡಿದು ಸಚಿವರಾದವರು : ಸಿ.ಪಿ.ಯೋಗಿಶ್ವರ್ ಸಚಿವನಾಗ ಬೇಕೆಂದು ಬೆಂಗಳೂರಿನ ಶಿವಾನಂದ ಸರ್ಕಲ್‍ನಲ್ಲಿರುವ ಪ್ಲಾಟ್ ನಲ್ಲಿ ವಿಜಯೇಂದ್ರ ಅವರು ಕಾಲುಹಿಡಿದಿದ್ದು ನಾನೇ ನೋಡಿದ್ದೇನೆ. ಕಾವೇರಿ ಭವನದಲ್ಲಿ ಯಡಿಯೂರಪ್ಪನವರ ಕಾಲು ಹಿಡಿದು ಸಚಿವನಾದ ನೀನು ಯಡಿಯೂರಪ್ಪನವರ ಬಗ್ಗೆ ಮಾತನಾಡುತ್ತೀಯಾ, ನಿನಗೆ ಯಾವ ನೈತಿಕತೆ ಇದೇ ಎಂದು ಪ್ರಶ್ನೇ ಮಾಡಿದರು.
ನನಗೆ ಸಿಕ್ಸರ್ ಹೊಡೆಯುವುದು ಗೊತ್ತು, ಬೌಂಡರಿ ಹೊಡೆಯುವುದು ಗೊತ್ತು : ಸಿ.ಪಿ.ಯೋಗಿಶ್ವರ್ ಹಿಂದಿನಿಂದ ನನ್ನ ಮೇಲೆ ಆಕ್ರಮಣ ಮಾಡಿದರೆ ನನಗೆ ಸಿಕ್ಸರ್ ಹೊಡೆಯುವುದು ಗೊತ್ತು, ಬೌಂಡರಿ ಹೊಡೆಯುವುದು ಗೊತ್ತು ಎಂದ ರೇಣುಕಾಚಾರ್ಯ, ನಾನು ಅವಿದ್ಯಾವಂತನಾಗಿರ ಬಹುದು ಆದರೇ ನನಗೆ ಯಾವ ಹೇಗೆ ಪಟ್ಟು ಹಾಕ ಬೇಕು ಎಂದು ಗೊತ್ತಿದೆ, ಯೋಗಿಶ್ವರ್‍ಗೆ ತಾಖತ್ ಇದ್ದರೇ ನೇರಾ ನೇರಾ ಅಖಾಡಕ್ಕೆ ಬರಲಿ ಎಂದು ಸವಾಲು ಹಾಕಿದ್ದಾರೆ.
ಯೋಗಿಶ್ವರ್ ವಿರುದ್ದ ಮಾತನಾಡಲು ನನಗೆ ಯಾರೂ ಹೇಳಿಲ್ಲಾ :
ಸಿ.ಪಿ.ಯೋಗಿಶ್ವರ್ ವಿರುದ್ದ ಮಾತನಾಡಿ ಎಂದು ನನಗೆ ಯಡಿಯೂರಪ್ಪನವರಾಗಲಿ, ವಿಜಯೇಂದ್ರ ಆಗಲಿ ಹೇಳಿಲ್ಲಾ, ಇದೇಲ್ಲಾ ಊಹಾಪೋವಾ. ಯಡಿಯೂರಪ್ಪನವರಿಂದ ಸಚಿವರಾದ ನೀನು ಅವರ ಬಗ್ಗೆಯೇ ಮಾತನಾಡಿದಾಗ ಪ್ರಶ್ನೇ ಮಾಡುವ ಹಕ್ಕು ಶಾಸಕನಾದ ನನಗಿದೆ ಆಗಾಗೀ ನಾನೇ ಮಾತನಾಡುತ್ತಿದ್ದೇನೆ ಎಂದರು.
ದೆಹಲಿಯಲ್ಲಿ ಯಾರನ್ನೂ ಭೇಟಿ ಮಾಡಿಲ್ಲಾ :
ದೆಹಲಿಯಲ್ಲಿ ವರಿಷ್ಟರನ್ನು ಭೇಟಿ ಮಾಡಿದ್ದೇವೆ ಎಂದು ಹೇಳುವುದು ಶುದ್ದಸುಳ್ಳು. ವರಿಷ್ಟರ ಮನೆಯ ಗೇಟ್ ಮುಂದೆ ನಿಂತು ಪೋಟೊ ತೆಗಿಸಿಕೊಂಡು ಬಂದು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಸಿಎಂ ಬದಲಾವಣೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲಾ, ಪ್ರಹಲ್ಲಾದ್ ಘೋಷಿಯವರ ಹೆಸರು ವಿನಾಃ ಕಾರಣ ಮಧ್ಯಕ್ಕೆ ತರುವ ಕೆಲಸವನ್ನು ಮಾಡುತ್ತಿದ್ದಾರೆ ನಾಯಕತ್ವ ಬದಲಾವಣೆ ಸಾಧ್ಯವೇ ಇಲ್ಲಾ, 2023 ರಲ್ಲಿ ಮತ್ತೆ ಬಿಜೆಪಿ ಯಡಿಯೂರಪ್ಪನವರ ನೇತೃತ್ವದಲ್ಲಿ ಅಧಿಕಾರಕ್ಕೆ ಬರುವುದು ಕೂಡ ಸತ್ಯ ಎಂದರು.

Leave a Reply

Your email address will not be published. Required fields are marked *