ಪರೋಪಕಾರಿ ಫೌಂಡೇಶನ್ (ರಿ), ಮೈಸೂರು ಹಾಗೂ
ಶ್ರೀ ಸಿದ್ದರಾಮಯ್ಯ ಅಭಿಮಾನಿಗಳ ಬಳಗ, ಬಾದಾಮಿ ವಿಧಾನಸಭಾ ಮತಕ್ಷೇತ್ರ ವತಿಯಿಂದ ಬಾದಾಮಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬಾದಾಮಿ ನಗರ, ಕೆರೂರ, ಗುಳೇದಗುಡ್ಡ ನಗರದ ಸಾರ್ವಜನಿಕ ಆಸ್ಪತ್ರೆಗಳಿಗೆ ಕೋವಿಡ್ ಸೊಂಕು ನಿರ್ವಹಣೆ ಅಗತ್ಯಕ್ಕೆ 100 ಬೆಡ್‌ಗಳು ಮತ್ತು ಕಾಟ್‌ಗಳನ್ನು ನೀಡಿದ ಮೈಸೂರಿನ ಸ್ಥಳೀಯ ಸಂಸ್ಥೆ ಪರೋಪಕಾರಿ ಫೌಂಡೇಶನ್ ಕಾರ್ಯಕರ್ತರು ಹಾಗೂ ಬಾದಾಮಿ ತಾಲೂಕಿನ ಮುಚಂಣಿ ನಾಯಕರ ಉಪಸ್ಥಿತಿಯಲ್ಲಿ ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಅಮೃತ ಹಸ್ತದಿಂದ ಉದ್ಘಾಟಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿದರು. ಈ ಸಂದರ್ಭದಲ್ಲಿ ಪರೋಪಕಾರಿ ಫೌಂಡೇಶನ್ ಅಧ್ಯಕ್ಷರಾದ ಡಾ. ಭರತಕುಮಾರ್ ಅವರು, ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಎಸ್ ಜಿ ನಂಜಯ್ಯನಮಠ ಅವರು, ಮಾಜಿ ಶಾಸಕರಾದ ಶ್ರೀ ಎಚ್ ವಾಯ್ ಮೇಟಿ ಅವರು, ಕೆಪಿಸಿಸಿ(ಹಿಂ.ವ.ವಿ) ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಮಹೇಶ ಎಸ್ ಹೊಸಗೌಡ್ರ ಅವರು, ಶ್ರೀ ಹುಳೇಹುಚ್ಚೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಹೊಳೆಬಸು ಶೆಟ್ಟರ್ ಅವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಎಂ ಡಿ ಯಲಿಗಾರ ಅವರು, ಹಿರಿಯರಾದ ಶ್ರೀ ಎಂ ಬಿ ಹಂಗರಗಿ ಅವರು, ಶ್ರೀ ಪಿ ಆರ್ ಗೌಡರ ಅವರು, ಮುಖಂಡರಾದ ಶ್ರೀ ಎಮ್ ಜಿ ಕಿತ್ತಲಿ ಅವರು, ಮುಖಂಡರಾದ ಶ್ರೀ ಮಧು ಯಡ್ರಾಮಿ ಅವರು, ಪುರಸಭೆ ಸದಸ್ಯರಾದ ಶ್ರೀ ರಾಜಮಹ್ಮದ ಬಾಗವಾನ ಅವರು ಕಾರ್ಯಕರ್ತರು ತಾಲೂಕ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *