ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರು ಅವಳಿ ತಾಲೂಕುಗಳಲ್ಲಿ ಕೊರೊನ 2ನೇಯ ಅಲೆಯು ಹೆಚ್ಚಾಗಿರವ ಕಾರಣ ಇದನ್ನು ಮನಗಂಡು ಇಂದು ಡಿ.ಜಿ.ಶಾಂತನಗೌಡ್ರುರವರು ಮಾಜಿ ಶಾಸಕರಾಗಿದ್ದರೂ ಸಹ ತಮ್ಮ ಸ್ವಂತ ಕರ್ಚಿನಲ್ಲಿ ಅಂಬ್ಯುಲೆನ್‍ನ್ನು ಕರಿದಿ ಮಾಡಿ ತಾಲೂಕ ವ್ಯೆದ್ಯಾಧಿಕಾರಿಗಳಾದ (ಟಿ.ಹೆಚ್.ಒ) ಕೆಂಚಪ್ಪ ಬಂತಿ ತಾಲೂಕು ತಹಿಸಿಲ್ದಾರ್‍ರಾದ ಬಸವನಗೌಡ ಕೂಟೂರು ಇವರುಗಳ ನೇತೃತ್ವದಲ್ಲಿ ಅಂಬ್ಯುಲೆನ್ಸ್‍ನ್ನು ಅಧಿಕಾರಿಗಳಿಗೆ ವಾಹನದ ಬೀಗವನ್ನು ಕೊಡುವುದರ ಮೂಲಕ ಆರೋಗ್ಯ ಇಲಾಖೆಗೆ ಹಸ್ತಂತರಿಸಿದರು.


ಡಿ.ಜಿ ಶಾಂತನಗೌಡ್ರು ನಂತರ ಮಾತನಾಡಿ ಕಾಂಗ್ರೆಸ್ ರಾಜಾಧ್ಯಕ್ಷರಾದ ಡಿ.ಕೆ ಶಿವುಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯನವರ ಆದೇಶದ ಹಿನ್ನಲೆಯಲ್ಲಿ ಹಾಗೂ ನನಗೆ ಈ ಹಿಂದೆ ಕೊರೋನಾ ರೋಗವು ಸಹ
ಬಂದಿತ್ತು ಕೊರೊನಾದ ಅನುಭವ ತುಂಬಾ ಇದೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಕೊರೋನಾ ಹೆಚ್ಚಾಗಿ ನೂರಾರು ಜನರು ಸಾವಿಗಿಡಾಗಿದ್ದಾರೆ ಮತ್ತು ಬಡವರಿಗೆ ಸ್ವಂತ ಕರ್ಚಿನಲ್ಲಿ ವಾಹನ ಮಾಡಿಕೊಂಡು ಕೊರೊನಾ ಸಂದರ್ಭದಲ್ಲಿ ಹಣ ಕೊಟ್ಟು ಬರಲಿಕ್ಕೆ ಸ್ಯಾಧವಾಗದ ಕಾರಣ ಇದನ್ನು ನಾನು ಅರಿತು. ನಾನು ಅಂಬುಲೆನ್ಸ್ ಕೊಡುವುದರ ಜೊತೆಗೆ ಈಗಾಡಿಗೆ ಬೇಕಾಗುವ ಡಿಸೇಲ್ ಮತ್ತು ಡ್ರೈವರ್ ಸಂಬಳವನ್ನು ಸಹ ನಾನೇ ಭರಿಸುತ್ತೇನೆ ಎಂದು ವಾಹನವನ್ನು ಹಸ್ತಾಂತರಿಸುವಾಗ ಡಿ ಜಿ ಶಾಂತನಗೌಡ್ರು ಹೇಳಿದರು. ,ಅಂಬುಲೆನ್ಸ್ ಬೇಕಾದವರು ಈ ನಂಬರಿಗೆ ತುರ್ತುಸೇವೆ ಗೆ ಕರೆ ಮಾಡಿ 7411323488-8088428316
ಇವರ ಉಪಸ್ಥಿತಿಯಲ್ಲಿ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು, ತಹಸಿಲ್ದಾರ್ ಬಸವನ ಗೌಡ ಕೊಟ್ಟರು , ಟಿ.ಹೆಚ್.ಓ ಕೆಂಚಪ್ಪ ಬಂತಿ, ಹೆಚ್.ಜಿ ಗದ್ದಿಗೇಶ್ ಣ್ಣ, ಹೆಚ್ ಬಿ ಮಂಜಪ್ಪ ಜಿಲ್ಲಾಧ್ಯಕ್ಷರು, ಡಿ.ಜಿ ವಿಶ್ವನಾಥ್, ಎಂ ರಮೇಶ್, ಇನ್ನೂ ಅನೇಕ ಮುಖಂಡರುಗಳು ಹಾಗೂ ಯುವ ಕಾರ್ಯಕರ್ತರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *