ಸರ್ಕಾರದ ಆದೇಶದ ಮೇರೆಗೆ ವಿಕಲಚೇತನರು ಹಾಗೂ
ಆರೈಕೆದಾರರಿಗೆ ಉಚಿತವಾಗಿ ಕೋವಿಡ್-19 ಲಸಿಕಾ
ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು
ಕೊರಟೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ
ನೆರವೇರಿಸಲಾಯಿತು.
ಹೆಬ್ಬಳಗೆರೆ ಹಾಗೂ ಚಿಕ್ಕಗಂಗೂರು ಪ್ರಾಥಮಿಕ
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮತ್ತು
ಸಿಬ್ಬಂದಿಗಳು ಕೊರಟೀಕೆರೆ, ಕೆ.ಲಕ್ಷ್ಮೀಸಾಗರ ಮತ್ತು
ಶೆಟ್ಟಿಹಳ್ಳಿ ಗ್ರಾಮಗಳಲ್ಲಿ ಖಾಯಂ ನಿವಾಸಿಗಳಾಗಿದ್ದ
ವಿಕಲಚೇತನರು ಹಾಗೂ ಆರೈಕೆದಾರರಿಗೆ ಮೇ 28 ರ
ಶುಕ್ರವಾರದಂದು ಲಸಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಸರೋಜಮ್ಮ,
ಉಪಾಧ್ಯಕ್ಷ ಎಚ್.ಸಿ. ಮಂಜುನಾಥ, ಸದಸ್ಯರಾದ ಪ್ರಸನ್ನ ಕುಮಾರ್
ಹಾಗೂ ಗ್ರಾ.ಪಂ ಸರ್ವ ಸದಸ್ಯರು ಮತ್ತು ಪಂಚಾಯಿತಿ
ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಎಂ.ಆರ್.ಡಬ್ಲ್ಯೂ
ಹಾಗೂ ವಿ.ಆರ್.ಡಬ್ಲ್ಯೂ ಗಳು ಭಾಗವಹಿಸಿದ್ದರು.