ರಾಜ್ಯಾದ್ಯಂತ ಪ್ರಸ್ತುತ ಕೋವೀಡ್-19 ರ ಎರಡನೇ ಅಲೆಯ
ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ತಲಾ
ರೂ.3000 ಗಳ ಆರ್ಥಿಕ ನೆರವನ್ನು ಮುಖ್ಯಮಂತ್ರಿಗಳು
ಘೋಷಿಸಿದ್ದಾರೆ. ಇದರನ್ವಯ ಆರ್ಥಿಕ ಸಂಕಷ್ಟದಲ್ಲಿರುವ
ಕಲಾವಿದರಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ತಲಾ
ರೂ.3000 ಗಳ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದ್ದು, ಈ
ಯೋಜನೆಯಡಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಎಲ್ಲಾ ಪ್ರಕಾರದ
ಕಲಾವಿದರು ಸೇವಾಸಿಂಧು ಪೋರ್ಟಲ್ ಮೂಲಕ ಜೂನ್ 05 ರೊಳಗೆ ಅರ್ಜಿ
ಸಲ್ಲಿಸಬಹುದಾಗಿದೆ.
ಕಲಾವಿದರು ವೃತ್ತಿನಿರತರಾಗಿದ್ದು, 35 ವರ್ಷ
ಮೇಲ್ಪಟ್ಟವರಾಗಿರಬೇಕು ಹಾಗೂ ಕನಿಷ್ಟ 10 ವರ್ಷಗಳ ಕಲಾಸೇವೆ
ಮಾಡಿರಬೇಕು. ಕಲಾವಿದರು ಕಲಾಸೇವೆ ಮಾಡಿರುವ ಕನಿಷ್ಟ ಒಂದು
ಫೋಟೋ ಲಗತ್ತಿಸಿ ಸಲ್ಲಿಸಬೇಕು. ಕನ್ನಡ ಮತ್ತು ಸಂಸ್ಕøತಿ
ಇಲಾಖೆಯಿಂದ ಮಾಸಾಶನ ಪಡೆಯುತ್ತಿರಬಾರದು ಹಾಗೂ ಯಾವುದೇ
ಸರ್ಕಾರಿ ನೌಕರರಾಗಿರಬಾರದು, ರಾಜ್ಯ, ಕೇಂದ್ರ, ನಿಗಮ ಮಂಡಳಿ,
ಸರ್ಕಾರಿ ಅನುದಾನಿತ ಸಂಸ್ಥೆಗಳು, ಅರೆ ಸರ್ಕಾರಿ ಸಂಸ್ಥೆಗಳ
ನೌಕರರಾಗಿರಬಾರದು. 2020-21 ನೇ ಸಾಲಿನ ಸಾಮಾನ್ಯ, ವಿಶೇಷ ಘಟಕ,
ಗಿರಿಜನ ಉಪಯೋಜನೆಯಡಿ ಸಾಂಸ್ಕøತಿಕ ಸಂಘ-ಸಂಸ್ಥೆಗಳ
ಚಟುವಟಿಕೆಗಳಿಗೆ ಧನಸಹಾಯ ಪಡೆದ, ವಾದ್ಯ ಪರಿಕರ,
ವೇಷಭೂಷಣ ಖರೀದಿ, ಶಿಲ್ಪಕಲೆ, ಚಿತ್ರಕಲಾ ಪ್ರದರ್ಶನಕ್ಕೆ
ಧನಸಹಾಯ ಪಡೆದವರು ಈ ಯೋಜನೆಯಡಿ ಅರ್ಜಿ ಸಲ್ಲಿಸುವಂತಿಲ್ಲ.
ಅರ್ಹ ಕಲಾವಿದರು ತಮ್ಮ ಹೆಸರು, ವಿಳಾಸ, ಕಲಾ ಪ್ರಕಾರ, ಆಧಾರ್
ಸಂಖ್ಯೆ (ಆಧಾರ್ ಕಾರ್ಡ್ ಲಗತ್ತಿಸಿ) ದೂರವಾಣಿ ಸಂಖ್ಯೆ ಹಾಗೂ
ಬ್ಯಾಂಕ್‍ಖಾತೆಯ (ಬ್ಯಾಂಕ್ ಪಾಸ್ ಪುಸ್ತಕದ ಮೊದಲ ಪುಟ ಲಗತ್ತಿಸಿ)
ವಿವಿರಗಳನ್ನೊಳಗೊಂಡ ಅರ್ಜಿಯನ್ನು ಜಿಲ್ಲೆಯಲ್ಲಿರುವ
ಯಾವುದೇ ನಾಗರಿಕ ಸೇವಾ ಕೇಂದ್ರಗಳು ಅಥವಾ ಮೊಬೈಲ್
ಮೂಲಕ ಆನ್‍ಲೈನ್‍ನಲ್ಲಿ ಸೇವಾಸಿಂಧು ಪೋರ್ಟಲ್‍ನಲ್ಲಿಯೇ
ಕಡ್ಡಾಯವಾಗಿ ಭರ್ತಿ ಮಾಡಿ ಸಲ್ಲಿಸಬೇಕು. ಭರ್ತಿ ಮಾಡಿದ ಅರ್ಜಿಗಳನ್ನು
ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ
ಇಲಾಖೆಯವರಿಗೆ ಜೂನ್ 05 ರೊಳಗೆ ಸಲ್ಲಿಸಲು ತಿಳಿಸಲಾಗಿದೆ.
ಹೆಲ್ಪ್‍ಲೈನ್ : ಕೋವಿಡ್-19 ನ 2ನೇ ಅಲೆಯ ಪ್ರಯುಕ್ತ ಆರ್ಥಿಕ
ಸಂಕಷ್ಟದಲ್ಲಿರುವ ಕಲಾವಿದರಿಗೆ ತಲಾ ರೂ. 3000 ಗಳ
ಸಹಾಯಧನ ಪಾವತಿಗೆ ಸೇವಾಸಿಂಧುನಡಿ ಅರ್ಜಿ ಸಲ್ಲಿಸಲು ಹೆಲ್ಪ್ ಲೈನ್
ಸ್ಥಾಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕøತಿ
ಇಲಾಖೆಯ ಸಹಾಯಕ ನಿರ್ದೇಶಕರು, ದೂರವಾಣಿ ಸಂಖ್ಯೆ 9964674993
ಅಥವಾ ಕಚೇರಿ ಸಿಬ್ಬಂದಿ ಹೆಚ್. ಆರ್. ಲಕ್ಷ್ಮೀದೇವಿ-9449740270 ಗೆ ಕರೆಮಾಡಿ
ಮಾಹಿತಿ ಪಡೆಯಬಹುದು ಎಂದು ಕನ್ನಡ ಮತ್ತು ಸಂಸ್ಕøತಿ
ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ