ತೃತಿಯಲಿಂಗಿಯರಿಗೆ(ಮಂಗಳಮುಖಿಯರಿಗೆ) ಫುಡ್ ಕಿಟ್ :
ತಾಲೂಕು ಆಡಳಿತದಿಂದ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ 49 ಜನ ಮಂಗಳಮುಖಿಯರಿಗೆ ಅಗತ್ಯ ವಸ್ತುಗಳ ಫುಡ್ ಕಿಟ್ ಅನ್ನು ತಾಲೂಕು ಆಡಳಿತದಿಂದ ನೀಡಲಾಯಿತ ನೀಡಿದ್ದು, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವುಗಳನ್ನು ಮಂಗಳಮುಖಿಯರಿಗೆ ಅಸ್ಥಾಂತರಿಸಿ ಮಾತನಾಡಿದ ಶಾಸಕರು,ಸರ್ಕಾರ ಸಂಕಷ್ಟದಲ್ಲಿರುವ ಜನರ ಅನುಕೂಲಕ್ಕಾಗಿ ಕೊರೊನಾದಂತಹ ಸಂಕಷ್ಟ ಕಾಲದಲ್ಲಿ ವಿಶೇಷ ಪ್ಯಾಕೇಜ್‍ಗಳನ್ನು ಘೋಷಣೆ ಮಾಡಿದೇ ಎಂದರು.
ಬೆಳಗ್ಗೆ ಹಾಗೂ ಮದ್ಯಾಹ್ನದ ಉಪಹಾರ : ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿನ ಸೋಂಕಿತರಿಗೆ, ಲಸಿಕೆ ಹಾಕಿಸಕೊಳ್ಳಲು ಬರುವ ಸಾರ್ವಜನಿಕರಿಗೆ, ಆಸ್ಪತ್ರೆಯ ಸಿಬ್ಬಂದಿಗಳಿಗೆ, ಪೊಲೀಸರಿಗೆ,ಎಪಿಎಂಸಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪ್ರತನಿತ್ಯ ಬೆಳಗಿನ ಉಪಹಾರ ನೀಡುತ್ತಿದ್ದು, ಇದರ ಜೊತೆಗೆ ಮದ್ಯಾಹ್ನದ ಊಟವನ್ನು ಶಾಸಕರು ನೀಡುತ್ತಿದ್ದಾರೆ. ಪ್ರತಿನಿತ್ಯ ಒಂದು ನೂರಾರು ಜನರಿಗೆ ಶಾಸಕರು ಉಣ ಬಡಿಸುವ ಮೂಲಕ ಸಂಕಷ್ಟದ ಕಾಲದಲ್ಲಿ ಜನರಿಗೆ ಊಟ ನೀಡುವ ಕೆಲಸ ಮಾಡುತ್ತಿದ್ದಾರೆ.
ಲಸಿಕಾ ಕೇಂದ್ರಕ್ಕೆ ಹಾಗೂ ಕೋವಿಡ್ ವಾರ್ಡಗೆ ಭೇಟಿ : ಅಂಬೇಡ್ಕರ್ ಭವನದಲ್ಲಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು ಲಸಿಕೆ ಹಾಕಿಸಿಕೊಳ್ಳಲು ಮುಗಿ ಬಿದ್ದ ಯುವಕರು,ಯುವತಿಯರು, ಸಾರ್ವಜನಿಕರು ಬುದ್ದಿ ಹೇಳಿ ಸಾಮಾಜಿಕ ಅಂತರದಲ್ಲಿ ನಿಂತು ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿ ಹೇಳಿದರು. ಯಾರೀಗೂ ಲಸಿಕೆ ಸಮಸ್ಯೆಯಾಗುವುದಾಗಿಲ್ಲಾ ಪ್ರತಿಯೊಬ್ಬರೂ ಸಮಾದಾನದಿಂದ ಬಂದು ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿ ಹೇಳಿದರು. ಅಷ್ಟೇ ಅಲ್ಲದೇ ಕೋವಿಡ್ ವಾರ್ಡಗಳಿಗೆ ಭೇಟಿ ನೀಡಿ ಶಾಸಕರು ಸೋಂಕಿತರ ಆರೋಗ್ಯ ವಿಚಾರಿಸುವ ಮೂಲಕ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.
ಈ ಸಂದರ್ಭ ತಹಶೀಲ್ದಾರ್ ಬಸವನಗೌಡ ಕೋಟೋರ, ಇಓ ಗಂಗಾಧರ ಮೂರ್ತಿ, ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್, ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ತಾಲೂಕು ಪಂಚಾಯಿತಿ ಸದಸ್ಯ ಶಿವಾನಂದ್ ಸೇರಿದಂತೆ ಮತ್ತೀತತರಿದ್ದರು.