ಶಿಕಾರಿಪುರ ತಾಲೂಕಿನಲ್ಲಿ ಕರೋನ ಪಾಸಿಟಿವ್ ಕೇಸ್ ಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಶಿಕಾರಿಪುರ ಪಟ್ಟಣ ಸೇರಿ ತಾಲೂಕಿನಲ್ಲಿ ಒಂದು ವಾರ ಲಾಕ್ ಡೌನ್ ಮಾಡಲು ಅಧಿಕಾರಿಗಳ ವರ್ತಕರ ಸಭೆ ನಡೆಸಲಾಯಿತು. ಈಗಾಗಲೇ ಹದಿನೈದು ಹೋಬಳಿ ಪಂಚಾಯ್ತಿಗಳು ಕಂಟ್ರೋಲ್ ಮೆಂಟ್ ಜೂನ್ ಗಳಾಗಿದ್ದು.
ತಾಲೂಕಿನಲ್ಲಿ ಕರೋನವನ್ನು ನಿಯಂತ್ರಣ ತರುವ ನಿಟ್ಟಿನಲ್ಲಿ ಸಂಸದ ಬಿ.ವೈ ರಾಘವೇಂದ್ರ ಅವರ ನೇತೃತ್ವದಲ್ಲಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಸೋಮವಾರ 10 ಗಂಟೆಯ ನಂತರ ಬರುವ ಬಾನುವಾರದ ವರೆಗೆ ಶಿಕಾರಿಪುರ ನಗರ ಸಂಪೂರ್ಣ ಲಾಕ್ ಡೌನ್ ಮಾಡಲು ಚಿಂತನೆ ನಡೆಸಲಾಗಿದೆ.
ಈ ಕುರಿತು ಅಧಿಕಾರಿಗಳ ಹಾಗೂ ಕಿರಣಿ ಅಂಗಡಿ ವರ್ತಕರ ಸಲಹೆಯನ್ನು ಪಡೆದರು ಕಂಪ್ಲಿಟ್ ಲಾಕ್ ಡೌನ್ ಕುರಿತು ಶನಿವಾರ ಸಂಜೆ ಅಧಿಕೃತ ಆದೇಶ ಪ್ರಕಟವಾಗಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.ಈ ಸಂದರ್ಬದಲ್ಲಿ ದಂಡಾಧಿಕಾರಿ ಕವಿರಾಜ್.ಮಲೆನಾಡು ಅಭಿವೃದ್ದಿ ಪ್ರಾಧಿಕಾರ ದ ಅಧ್ಯಕ್ಷ ಗುರುಮೂರ್ತಿ.ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳು.ಚುನಾಯಿತ ಪ್ರತಿನಿಧಿಗಳು.ಆರೋಗ್ಯ ಇಲಾಖೆ ಅಧಿಕಾರಿಗಳು.ಪುರಸಭೆ ಅಧಕಾರಿಗಳು ಇತರರು ಉಪಸ್ಥಿತರಿದ್ದರು.