ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಇಬ್ಬರಿಗೆ ಬ್ಲಾಕ್ ಫಂಗಸ್ ಪತ್ತೆಯಾಗಿದ್ದು ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದು ಅವಳಿ ತಾಲೂಕಿನ ಜನರು ಜಾಗಾರೂಕತೆಯಿಂದ ಇರುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದ್ದಾರೆ.
ನಗರದಾಧ್ಯಂತ ಸ್ಯಾಟೈಸರ್ ಮಾಡುವುದಕ್ಕೆ ಚಾಲನೆ ನೀಡಿ ಸ್ವತಃ ಸೈನಿಟೈಸರ್ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.ಹೊನ್ನಾಳಿ ಪುರಸಭಾ ವ್ಯಾಪ್ತಿಯಲ್ಲಿ ಇಂದು ಮತ್ತೆ ನಾಳೆ ಎರಡು ದಿನ ಸ್ಯಾನಿಟೈಸರ್ ಮಾಡುವ ಕೆಲಸ ಮಾಡುತ್ತಿದ್ದು, ಇದರಿಂದ ಕೊರೊನಾ ನಿಯಂತ್ರಿಣ ಮಾಡ ಬಹುದಾಗಿದೆ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿಯವರು ಪ್ರತಿವಾರ್ಡನಲ್ಲೂ ಸ್ಯಾನಿಟೈಸರ್ ಮಾಡುವಂತೆ ಕರೆ ನೀಡಿದ ಶಾಸಕರು, ನಾನು ನಿಮ್ಮ ಮನೆ ಮಗ, ನಿಮ್ಮ ಸಹೋದರನಂತೆ ಕೆಲಸ ಮಾಡುತ್ತಿದ್ದು, ಸೋಂಕಿಯರನ್ನ ಕುಟುಂಬದ ಸದಸ್ಯರೆಂದು ತಿಳಿದು ಅವರಿಗೆ ಆತ್ಮಸ್ಥೈರ್ಯ ತುಂಬುವಂತೆ ತಿಳಿ ಹೇಳಿದರು.
ಅವಳಿ ತಾಲೂಕಿನಲ್ಲಿ ಇಬ್ಬರಿಗೆ ಬ್ಲಾಕ್ ಫಂಗಸ್ ಪತ್ತೆಯಾಗಿದ್ದು ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದು ಚಿಕಿತ್ಸೆಯ ವೆಚ್ಚವನ್ನು ತಾಲೂಕು ಆಡಳಿತ ಬರಿಸಲಿದೆ ಎಂದರು. ಇನ್ನು ಅವಳಿ ಅವಳಿ ತಾಲೂಕಿನ ಬ್ಲಾಕ್ ಫಂಗಸ್ ಪತ್ತೆಯಾಗಿದ್ದು, ಜನರು ಅತ್ಯಂತ ಜಾಗರೂಕತೆಯಿಂದ ಇರುವಂತೆ ತಿಳಿ ಹೇಳಿದರು.

Leave a Reply

Your email address will not be published. Required fields are marked *