ಗ್ರಾಮಗಳಲ್ಲಿ ತಿಂಗಳಿಂದ ಮನೇಲೆ
ಇದ್ದು ಇದ್ದು ಬೇಜಾರಾದ ತುಂಬ ಜನ
ಪೆÇೀಷಕರು ತಮ್ಮ ಮಕ್ಕಳಿಗೆ ಕಿರಿ
ವಯಸ್ಸಿನಲ್ಲಿಯೇ ಮದುವೆ
ಮಾಡುವಂತಹ ಆಘಾತಕಾರಿ
ಕೆಲಸಗಳನ್ನ ಮಾಡುತ್ತಿದ್ದಾರೆ.
ಅವರನ್ನ ಜಾಗ್ರತಗೊಳಿಸಿ,
ಮಕ್ಕಳನ್ನ ಕಿರಿವಯಸ್ಸಿನಲ್ಲಿಯೇ
ಮದುವೆ ಮಾಡದೇ, ಅವರ ಭವಿಷ್ಯ
ರೂಪಿಸಿ, ಉತ್ತಮ ಶಿಕ್ಷಣ ನೀಡಿ ಅವರನ್ನು
ಸ್ವಂತ ಕಾಲ ಮೇಲೆ ನಿಲ್ಲುವಂತೆ
ಮಾಡಬೇಕು ಎಂಬುದನ್ನ ಅವರಿಗೆ
ಮನದಟ್ಟು ಮಾಡಿಕೊಡಬೇಕು ಎಂದು
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ
ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ
ನುಡಿದರು.
ಅವರು ನಗರದ ತರಳಬಾಳು
ನಗರದ ಒಂದನೇ ಮುಖ್ಯರಸ್ತೆಯಲ್ಲಿ
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು
ಮಲ್ಲನಕಟ್ಟೆ ಗ್ರಾಮ ಸಂಘದ
ಸಹಯೋಗದೊಂದಿಗೆ ಆಯೋಜಿಸಿದ್ದ
ಬಾಲ್ಯವಿವಾಹ ನಿಷೇಧದ ಬಗ್ಗೆ ಜನಜಾಗೃತಿ
ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ಹಳ್ಳಿಗಳಲ್ಲೂ ಸಹ ಕೆಲವು
ಪೋಷಕರು ಪೆÇೀಲಿಸ್‍ರ, ಸಾಮಾಜಿಕ
ಕಾರ್ಯಕರ್ತರ, ಆಶಾ
ಕಾರ್ಯಕರ್ತರ ಕಣ್ಣು ತಪ್ಪಿಸಿ,
ಮನೆಯೊಳಗೆ ಯಾರಿಗೂ ಅರಿವು
ಬರದಂತೆ, ಮಕ್ಕಳ ಮದುವೆ
ಮಾಡುತ್ತಿದ್ದಾರೆ. ಲಾಕ್ ಡೌನ್
ಇರುವುದರಿಂದ ಕಾನೂನು ಬಾಹಿರ
ಚಟುವಟಿಕೆ ಮಾಡುವರಿಗೆ ಅವಕಾಶ
ಸಿಕ್ಕಾಂತಾಗಿದೆ. ಮಕ್ಕಳು ಶಾಲೆಗೆ ಬೇರೆ
ಹೋಗದೇ ಮನೆಯಲ್ಲೇ
ಕುಳಿತಿರುವುದು ಪೋಷಕರಿಗೆ
ಜವಾಬ್ಧಾರಿಯಿಂದ ನುಣಿಚಿಕೊಳ್ಳುವ
ನೆಪದಲ್ಲಿ ಮದುವೆಗಳನ್ನ ಕದ್ದು
ಮುಚ್ಚಿ ಮಾಡುತ್ತಿದ್ದಾರೆ. ಸಮಾಜ
ಕಲ್ಯಾಣ ಇಲಾಖೆಯ ಗಮನಕ್ಕೆ ಬರುವ
ಎಲ್ಲಾ ಮಾರ್ಗಗಳು ಲಾಕ್ ಡೌನ್‍ನಿಂದ
ನಿಂತುಹೋಗಿದೆ ಎಂದರು.
ಶಾಲೆಗೆ ಹೋಗಲಾಗದೆ, ಕೆಲಸಕ್ಕೂ
ಹೋಗಲಾರದೆ ಮಕ್ಕಳು ಅತಂತ್ರ
ಸ್ಥಿತಿಯಲ್ಲಿ ಗ್ರಾಮದಲ್ಲಿ
ಬದುಕುತ್ತಿದ್ದು, ಅವರ ಕುಗ್ಗಿದ
ಮನಸ್ಸಿಗೆ, ಚೈತನ್ಯ ತುಂಬಲು
ಗ್ರಾಮದಲ್ಲಿರುವ ಶಿಕ್ಷಕರ, ಸಮಾಜ
ಸುಧಾರಕರು, ಆರೋಗ್ಯ
ಕಾರ್ಯಕರ್ತರು ಶ್ರಮವಹಿಸಿ,
ಜನರನ್ನ ತಮ್ಮ ವಿಚಾರಗಳಿಗೆ
ಸೆಳೆಯಬೇಕು. ಸಾದ್ಯವಾದರೆ ಪೊಲೀಸ್
ಇಲಾಖೆಯ ಸಹಾಯ ಪಡೆಯಬಹುದು.
ಕರೋನ ರೋಗದ ಜೊತೆಗೆ
ಹಲವು ಸಾಮಾಜಿಕ ಸಮಸ್ಯೆಗಳಿಗೆ
ಕಾರಣವಾಗುತ್ತಿದೆ. ಜನರನ್ನ
ಜ್ಞಾನವಂತರಾಗಿಸುವ ಎಲ್ಲಾ
ಮಾರ್ಗಗಳನ್ನ
ಸಂಶೋಧಿಸಬೇಕಾಗಿದೆ. ಕರೋನ
ಮುಗಿಯುವರೆಗೂ ನಾವು
ನಿಸ್ತೇಜನರಾಗಿಬಿಟ್ಟರೆ ಮಕ್ಕಳ ಭವಿಷ್ಯ
ಹಾಳಾಗಿಬಿಡುತ್ತದೆ, ಅದಕ್ಕಾಗಿ ನಾವು
ಎಚ್ಚರವಾಗಿರಬೇಕು ಎಂದರು.
ಮನೆಯ ಬಳಿಯೇ ನಿಂತು
ಕಾರ್ಯಕ್ರಮದಲ್ಲಿ ಬಾಗವಹಿಸಿದ
ಸುಮಾ ಕೆಂಚರೆಡ್ಡಿ, ಶ್ರೀಮತಿ
ಉಮಾದೇವಿ, ನಾಗರಾಜ್,
ಮಲ್ಲನಕಟ್ಟೆ ಚಂದ್ರಪ್ಪ,
ಅಂಶುಲ್, ಹೆಚ್.ಎಸ್, ಪ್ರೇರಣ, ಶ್ರೀನಿವಾಸ, ಜಿ.
ಭಾರತಿ, ಕಾರ್ಯಕ್ರಮವನ್ನ
ಯಶಸ್ವಿಗೊಳಿಸಿದರು.
ಮಕ್ಕಳ ಗೊಂಬೆಗಳನ್ನ ಪ್ರದರ್ಶಿಸಿ,
ಬಾಲ್ಯ ವಿವಾಹದ ಬಿತ್ತಿ ಚಿತ್ರಗಳನ್ನ
ಪ್ರದರ್ಶಿಸಿ, ಬಾಲ್ಯ ವಿವಾಹದಿಂದಾಗುವ
ಅನಾಹುತಗಳ ಬಗ್ಗೆ ಹಾಡುಗಳನ್ನ
ಹೇಳಿ ಜಾಗೃತಿ ಮೂಡಿಸಲಾಯಿತು.