ಶ್ರೀಮತಿ ಶ್ರೀ ಸೌಮ್ಯರೆಡ್ಡಿ ಶಾಸಕರು ಜಯನಗರದ ವಿಧಾನಸಭಾ ಕ್ಷೇತ್ರ ಬೆಂಗಳೂರು,
ಸೌಮ್ಯರೆಡ್ಡಿ ಯವರು ರಾಜ್ಯದ ಪ್ರಭಾವೀ ರಾಜಕಾರಣಿಗಳಾದ ಮಾನ್ಯ ರಾಮಲಿಂಗಾರೆಡ್ಡಿ ಅವರ ಪುತ್ರಿ ,
ರಾಮಲಿಂಗಾರೆಡ್ಡಿ ಅವರು ಬೆಂಗಳೂರು ನಗರದಲ್ಲಿ ಏಳು ಬಾರಿ ಶಾಸಕರಾಗಿ ನಾಲ್ಕು ಬಾರಿ ಪ್ರಭಾವಿ ಸಚಿವರಾಗಿ ರಾಜ್ಯ ಸರ್ಕಾರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ, ಇದರೊಂದಿಗೆ ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕರಲ್ಲಿ ಇವರು ಒಬ್ಬರು,
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಆವದಿಯಲ್ಲಿ ಮಾನ್ಯ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಬೆಂಗಳೂರಿನ ಜಯನಗರ ಕ್ಷೇತ್ರದ ಮರು ಚುನಾವಣೆಯ ಹಿನ್ನಲೆಯಲ್ಲಿ ಸೌಮ್ಯರೆಡ್ಡಿ ಅವರು ಕಾಂಗ್ರೆಸ್ ಪಕ್ಷದ ಅಬ್ಯಾರ್ಥಿಯಾಗಿ ಚುನಾವಣೆಯನ್ನು ದೊಡ್ಡ ಪ್ರಮಾಣದಲ್ಲಿ ಎದುರಿಸಿ ಆ ಕ್ಷೇತ್ರದ ಶಾಸಕರಾದರು,
ಸೌಮ್ಯರೆಡ್ಡಿ ಯವರು ಪ್ರಭಾವಿ ರಾಜಕಾರಣಿ ಪುತ್ರಿಯಾಗಿದರೂ ಅದನ್ನು ಅವರು ತೋರ್ಪಡಿಸಿಕೋಳದ್ದೆ ಸರಳತೆಯ ಬದುಕಿನೊಂದಿಗೆ ಜಯನಗರ ಕ್ಷೇತ್ರದ ಆಭಿವೃದಿ ಮತ್ತು ಜನತೆಯ ಕ್ಷೇಮಾಭಿವೃದ್ಧಿ ಕಡೆಗೆ ಗಮನಹರಿಸಿ ಕ್ಷೇತ್ರದ ಜನತೆಯ ಮೆಚ್ಚಿನ ಶಾಸಕರಾಗಿ ಬಿಂಬಿಸಿ ಕೊಂಡಿದ್ದಾರೆ,
ಬೆಂಗಳೂರಿನಲ್ಲಿ ಕೊರೋನ ಎಂಬ ಮಹಾಮಾರಿ ಆರ್ಬಟದ ಸಂದರ್ಭದಲ್ಲಿ ಜಯನಗರ ಕ್ಷೇತ್ರ ಮತ್ತು ಇತರೆ ಪ್ರದೇಶದ ಕೋವಿಡ್ ಸೋಂಕಿತರಿಗೆ ವೈದ್ಯಕೀಯ ನೆರವು ಮತ್ತು ಆತ್ಮಸ್ಥೈರ್ಯದ ಬೆಂಬಲ ನೀಡುವ ನಿಟ್ಟಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅವರು ತೋಡಗಿಸಿ ಕೊಂಡಿದ್ದಾರೆ, ಇದರೊಂದಿಗೆ ಬೆಂಗಳೂರು ಲಾಕ್ ಡೌನ್ ಈನ್ನಲೆಯಲ್ಲೀ ಕ್ಷೇತ್ರದ ಜನಸಾಮಾನ್ಯರ ಬದುಕಿನ ಬವಣೆಗೆ ಸ್ಪಂದನೆ ಮಾಡುವ ನಿಟ್ಟಿನಲ್ಲಿ ಸದಾ ನಿರತರಾಗಿರುತ್ತಾರೆ ಈ ವಿಚಾರಗಳು ಸುದ್ದಿ ಮಾದ್ಯಮಗಳಲ್ಲಿ ಮತ್ತು ಸಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಾಗಿ ಬಿಂಬಿಸುತ್ತಿದೆ, ಅವರು ಇಂತಹ ದಿನನಿತ್ಯ ಮಾಡುವ ಕೆಲಸಗಳಿಗೆ ರಾಜ್ಯದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.