ಹೊನ್ನಾಳಿ : ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಅರಬಗಟ್ಟೆಯಲ್ಲಿರುವ ವಸತಿ ಶಾಲೆಯಲ್ಲಿ 800 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲಿದ್ದು ನಾಳೆ ಅಂದರೆ ಸೋಮವಾರ ಜಿಲ್ಲಾಉಸ್ತುವಾಗಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ್ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಲಿದ್ದಾರೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಅಧಿಕಾರಿಗಳೊಂದಿಗೆ ಅರಬಗಟ್ಟೆಯ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿಸಿ ಪರಿಸ್ಥಿತಿ ಅವಲೋಕಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ತಾಲೂಕಿನ ಸಾಸ್ವೇಹಳ್ಳಿ ಹಾಗೂ ಜೀವನಹಳ್ಳಿ ಕೋವಿಡ್ ಕೇರ್ ಸೆಂಟರ್‍ಗಳನ್ನು ಮುಚ್ಚಿ ಅರಬಗಟ್ಟೆಯ ವಸತಿ ಶಾಲೆಯಲ್ಲಿ 800 ಬೆಡ್‍ಗಳ ಸುಸಜ್ಜಿತ ಬೃಹತ್ ಕೋವಿಡ್ ಕೇರ್ ಸೆಂಟರ್ ಆರಂಭಿಸಲಿದ್ದು ಸೋಮವಾರದಿಂದಲೇ ಕೋವಿಡ್ ಕೇರ್ ಸೆಂಟರ್ ಕಾರ್ಯಾರಂಭ ಮಾಡಲಿದೆ ಎಂದರು.
ಈಗಾಗಲೇ ಅರಬಗಟ್ಟೆಯಲ್ಲಿನ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್‍ಗೆ ಬೇಕಾದ ಹಾಸಿಗೆ, ಮಂಚ ಜೋಡನೆ ನಡೆಯುತ್ತಿದ್ದು ದಿನದ 24 ಘಂಟೆಯೂ ವಿದ್ಯುತ್ ಇರುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಾಸ್ವೇಹಳ್ಳಿ ಹಾಗೂ ಜೀನಹಳ್ಳಿಯ ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಗುಣಮುಖರಾದವನ್ನು ಬಿಟ್ಟು ಉಳಿದವರನ್ನು ಅರಬಗಟ್ಟೆಗೆ ಸ್ಥಳಾಂತರಿಸುವುದಾಗಿ ತಿಳಿಸಿದ ಶಾಸಕರು ಸೋಂಕಿತರಿಗೆ ಯಾವುದೇ ತೊಂದರೆ ಯಾಗದಂತೆ ಎಲ್ಲಾ ಒಂದೇ ಕಡೆ ಸಿಗ ಬೇಕೆಂಬ ಉದ್ದೇಶದಿಂದ 800 ಹಾಸಿಗೆಗಳ ಬೃಹತ್ ಕೋವಿಡ್ ಕೇರ್ ಸೆಂಟರ್ ಆರಂಭಗೊಳ್ಳಲಿದೆ ಎಂದರು.
ಕೋವಿಡ್ ಸೆಂಟರ್ ಉದ್ಘಾಟಿಸಲಿರುವ ಜಿಲ್ಲಾಉಸ್ತುವಾರಿ ಸಚಿವರು : ಸೋಮವಾರ ಅರಬಗಟ್ಟೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ 800 ಹಾಸಿಗೆಗಳ ಬೃಹತ್ ಕೋವಿಡ್ ಕೇರ್ ಸೆಂಟರ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಭೈತರಿ ಬಸವರಾಜ್ ಉದ್ಘಾಟನೆ ಮಾಡಲಿದ್ದಾರೆ. ಸಂಸದರಾದ ಜಿ.ಎಂ.ಸಿದ್ದೇಶ್ವರ್, ಜಿಲ್ಲಾಧಿಕಾರಿ ಮಹಂತೇಶ್ ಬೀಳಗಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕೋವಿಡ್ ಕೇರ್ ಸೆಂಟರ್ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕೋವಿಡ್ ಕೇರ್ ಸೆಂಟರ್‍ಗೆ ಹೋಗುವ ರಸ್ತೆ ಅಭಿವೃದ್ದಿ : ಅರಬಗಟ್ಟೆಯಲ್ಲಿರುವ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್‍ಗೆ ತೆರಳುವ ರಸ್ತೆ ಹಾಳಾಗಿದ್ದು ಇದೀಗ ರಸ್ತೆ ಅಭಿವೃದ್ದಿ ಕಾಮಗಾರಿ ಬರದಿಂದ ಸಾಗಿದೇ. ಖುದ್ದು ಸ್ಥಳ ಪರಿಶೀಲನೆ ನಡೆಸಿದ ರೇಣುಕಾಚಾರ್ತ ಅಂಬ್ಯುಲೆನ್ಸ್ ಓಡಾಟಕ್ಕೆ ತೊಂದರೆಯಾಗದ ರೀತಿಯಲ್ಲಿ ರಸ್ತೆ ಅಭಿವೃದ್ದಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೇ ಸೋಮವಾರದ ಒಳಗೆ ಕಾಮಗಾರಿ ಪೂರ್ಣಗೊಳಿಸಿ ವಾಹನ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಸೂಚಿಸಿದರು.
ಎಲ್ಲಾ ಸೌಲಭ್ಯ ಒಂದೇ ಕಡೆ : ಅರಬಗಟ್ಟೆಯಲ್ಲೇ 800 ಬೆಡ್‍ಗಳ ಬೃಹತ್ ಕೋವಿಡ್ ಕೇಂದ್ರ ಆರಂಭಿಸುವುದರಿಂದ ಸೋಂಕಿತರಿಗೆ ಅನುಕೂಲವಾಗುವುದರ ಜೊತೆಗೆ ವೈದ್ಯರು ದಾದಿಯರ ಸಮಸ್ಯೆ ಕೂಡ ಬಗೆ ಹರಿಯಲಿದೆ. 800 ಸೋಂಕಿತರನ್ನು ಒಂದೇ ಕಡೆ ಹಾಕುವುದರಿಂದ ಎಲ್ಲಾ ಸೌಲಭ್ಯಗಳು ಒಂದೇ ಕಡೆ ಸಿಕ್ಕಂತಾಗುತ್ತದೆ ಎಂದರು.
ಈ ಸಂದರ್ಭ ತಹಶೀಲ್ದಾರ್ ಬಸನಗೌಡ ಕೋಟೂರ, ತಾಲೂಕು ಆರೋಗ್ಯಾಧಿಕಾರಿ ಡಾ|| ಕೆಂಚಪ್ಪ, ಬೆಸ್ಕಾಂ ಎಇಇ ರವಿಕಿರಣ್, ಲೋಕೋಪಯೋಗಿ ಇಲಾಖೆ ಎಇಇ ಮಲ್ಲಿಕಾರ್ಜುನ್,ಪಿಎಸೈ ರಮೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಂದ್ರನಾಯ್ಕ, ಎಪಿಎಂಸಿ ಸದಸ್ಯ ಕುಬೇರಪ್ಪ ಸೇರಿದಂತೆ ಮತ್ತೀತತರಿದ್ದರು.