ನಮ್ಮೆಲ್ಲರ ನಾಯಕರು ಮಾಜಿ ಸಚಿವರು ಆಗಿರುವ ಪ್ರಾಮಾಣಿಕ ರಾಜಕಾರಣಿ ಮಾನ್ಯ ಶ್ರೀ ಅಭಯಚಂದ್ರ ಜೈನ್ ಇವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಯುವ ನಾಯಕ, ಎಪಿಎಂಸಿ ಸದಸ್ಯರು ಆಗಿರುವ ಶ್ರೀ ಚಂದ್ರಹಾಸ್ ಸನಿಲ್ ಅವರು ತನ್ನ ವೈಯುಕ್ತಿಕ ನೆಲೆಯಲ್ಲಿ ಅಲಂಗಾರು ಮೌಂಟ್ ರೊಸಾರಿ ಆಶ್ರಮಕ್ಕೆ ಅಕ್ಕಿ ಹಾಗೂ ದಿನ ಉಪಯೋಗಿ ವಸ್ತುಗಳನ್ನು ನೀಡಿದರು , ಮೌಂಟ್ ರೊಸಾರಿ ಸಂಸ್ಥೆಗಳ ನಿರ್ದೇಶಕರಾದ ರೇ ಫಾ ಏವ್ಜಿನ್ ಪಿಂಟೊ , ಸಂಸ್ಥೆಯ ಮುಖ್ಯಸ್ತೆ ಸಿಸ್ಟರ್ ಪ್ರೆಸಿಲ್ಲಾ ಅವರು ಮಾಜಿ ಸಚಿವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು , ಈ ಸಂದರ್ಭದಲ್ಲಿ ಮೂಡಬಿದ್ರಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಶ್ರೀ ರಾಜೇಶ್ ಕಡಲಕೆರೆ , ಯುವ ಇಂಟಕ್ ಅಧ್ಯಕ್ಷರಾದ ಶ್ರೀ ಸುಚಿನ್ ಮಡಿವಾಳ , ಕಾಂಗ್ರೆಸ್ ಮುಖಂಡ ನ್ಯಾಯವಾದಿ ಶ್ರೀ ಇರ್ಷಾದ್ ಮೂಡಬಿದ್ರಿ , ಕಾಂಗ್ರೆಸ್ ಮುಖಂಡರಾದ ಶ್ರೀ ಸಂತೋಷ್ ಶೆಟ್ಟಿ , ಶ್ರೀ ವಜೀರ್ , ಶ್ರೀ ಪ್ರವೀಣ್ ಮೆಂಡೋನ್ಸಾ ಶಿರ್ತಾಡಿ , ಯುವ ನಾಯಕ ಶ್ರೀ ಕ್ಲಾರಿಯೋ , ಶ್ರೀ ರವಿ ಭೋವಿ , ಹಾಗೂ ಇವತ್ತಿನ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿರುವ ಶ್ರೀ ಪ್ರಕಾಶ್ ದೇವಾಡಿಗ ಹಾಜರಿದ್ದರು , , ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ಅವರು ತಮ್ಮ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಣೆ ಮಾಡyಲು ಸೂಚಿಸಿದ್ದು , ಕೊರೊನ ಸಂದರ್ಭದಲ್ಲಿ ಬಡವರಿಗೆ ನೇರವಾಗಿ ಕಷ್ಟಕ್ಕೆ ಸ್ಪಂದನೆ ಮಾಡಲು ಸೂಚಿಸಿರುವ ಬಗ್ಗೆ ಶ್ರೀ ಚಂದ್ರಹಾಸ್ ಸನಿಲ್ ಈ ಸಂದರ್ಭದಲ್ಲಿ ತಿಳಿಸಿದರು