ಕೊ ರೋನ ವೈರಸ್ ದೇಶದ ತುಂಬಾ ಹರಡುತ್ತಿರುವ ಈ ಸಂದರ್ಭದಲ್ಲಿ ಕೆಲವು ಸಂಸ್ಥೆಗಳು ಸ್ಥಿತಿವಂತರು ಚುನಾಯಿತ ಪ್ರತಿನಿಧಿಗಳು ವಾರಿಯರ್ಸ್ ಗಳಿಗೆ ಆಹಾರ ಕಿಟ್ ಇನ್ನೂ ಕೆಲವರು. ಸ್ವಯಂ ಸೇವಾ ಕರಿಗೆ ಆಹಾರ ಕಿಟ್ ಹಾಗೂ ಮೆಡಿಕಲ್ ಕಿಟ್ ನೀಡುವುದು ಸರ್ವೇ ಸಾಮಾನ್ಯ .ಆದರೆ ಕಿರಾಣಿ ಅಂಗಡಿ ಹೊಂದಿರುವ ಇವರು ನಗರದ ಕಿರಣ್ ಚಿತ್ರ ಮಂದಿರದ ಸರ್ಕಲ್ ಬಳಿ ಲಾಕ್ ಡೌನ್ ಆದಾಗಿನಿಂದ ಜಿಲ್ಲಾ ಹಾಗೂ ಹೊರ ರಾಜ್ಯ ಗಳಿಂದ ಬರುವ ವಾಹನ ಗಳ ಚಾಲಕರಿಗೆ ಕ್ಲೀನರ್ ಗಳಿಗೆ ಮನೆಯಲ್ಲೇ ದಿನಕ್ಕೊಂದು ಬಗೆ ಬಗೆ ಯಾ ರುಚಿಯಾದ ಊಟ ತಯಾರಿಸಿ ಅದರ ಜೊತೆ ನೀರಿನ ಬಾಟಲ್. ನೀಡಿ ಪ್ರತಿ ದಿನ ಸಂಜೆ ಆರು ವರೆಯಿಂದ ಸುಮಾರು ಒಂಬತ್ತು ಗಂಟೆಗೆ ಯವರೆಗೆ ತನ್ನ ಸಹಚರರ ರೊಂದಿಗೆ ಸಾಮಾಜಿಕ ಕಳಕಳಿ ಇಂದ ಸೇವ ಮಾಡುತ್ತಿರುವ ಮಹಮದ್ ಅನಿ
ಫ್.ಪ್ರಚಾರ ಬಯಸದ ಸಾಮಾಜಿಕ ಕಳಕಳಿ ಹೊಂದಿದ ಅನ್ನದಾನಿ ಯಾಗಿ ಹೊರ ಹೊಮ್ಮಿದ್ದಾರೆ.ಮೊದಲಿನಿಂದಲೂ ಪರೋಪಕಾರ ಹಾಗೂ ಮುಕ್ತಿ ಧಾಮ ಸಂಸ್ಥೆ ಯಲ್ಲಿ ಸಹ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡು ಸೇವೆ ಮಾಡಿದ್ದಾರೆ ಆದರೆ ಪ್ರಚಾರಕ್ಕೆ ಹಿಂದೆ ಸರಿದು ಜನ ಸೇವೆ ಮಾಡುವ ಹೃದಯವಂತ ಅನ್ನದಾನಿ ಯಾಗಿ ಹೊರ ಹೊಮ್ಮಿದ್ದಾರೆ.ಶಿಕಾರಿಪುರ ಮೊದಲು ಮಹಾದಾನ ಪುರ ವೆಂಬ ಹೆಸರು ಇತ್ತೆಂದು ಪ್ರತೀತಿ ಇದೆ ಹಾಗಾಗಿ ಇಂತಹ ಪುಣ್ಯದ ಕೆಲಸ ಮಾಡುವ ಕಾಣದ ಕೈಗಳು ಎಷ್ಟೋ ಇದೆ .ಮಾನವಿ ಮೌಲ್ಯ ಆದಾರಿತ ಇಂಥ ಅನಿ ಫ.ಅಂತ ಸಮಾಜ ಸೇವಕರು ಬೆಳಕಿಗೆ ಬಂದಾಗ ಅದರ ಉಪಯೋಗ ಪಾಲಾನು ಬವಿ ಗಳಿಗೆ ಸಿಗಲು ಸಾದ್ಯ ಇಂತಹ ಸ್ವಯಂ ಪ್ರೇರಿತ ಪ್ರಚಾರ ಬಯಸದ ಸಾಮಾಜಿಕ ಕಳಕಳಿ ಹೊಂದಿದ ಅನ್ನದಾನಿ ಗಳು ಹೊರ ಹೊಮ್ಮಿದಾಗ ಲೆ.ಸಮಾಜ ನೊಂದ ಜೀವಿಗಳು ಬದುಕಲು ಸಾಧ್ಯ. ಇವರೇ ನಿಜವಾದ ಜನ ಸೇವಕರು