ಹೊನ್ನಾಳಿ ; ಪೂಜ್ಯ ವೀರೇಂದ್ರ ಹೆಗ್ಗಡೆಯವರ
ಸೇವಾಕಾರ್ಯ ಸಾಗಾರದಾಚೆಗೂ ವಿಸ್ತಾರವಾಗಿದೆ,
ಆಡುಮುಟ್ಟದ ಸೊಪ್ಪಿಲ್ಲ, ಇವರು ಮಾಡದ
ಸೇವಾಕಾರ್ಯಗಳಿಲ್ಲ ಆ ನಿಟ್ಟಿನಲ್ಲಿ ಪೂಜ್ಯರ
ನೇತೃತ್ವದಲ್ಲಿ ಸೇವಾ ಚಟುವಟಿಕೆಗಳು
ನಿರಂತರವಾಗಿ ಸಾಗುತ್ತಿರುವುದು ನಮ್ಮೇಲ್ಲರಿಗೂ
ಪ್ರೇರಣೆಯಾಗಿದೆ ಎಂದು ಸಿ.ಎಂ.ರಾಜಕೀಯ
ಕಾರ್ಯದರ್ಶಿ,ಶಾಸಕ ಎಂ.ಪಿ.ರೇಣುಕಾಚಾರ್ಯ
ಹೇಳಿದರು.
ಸೋಮವಾರ ಹೊನ್ನಾಳಿ ನಗರದ ಆಸ್ಪತ್ರೆ
ಆವರಣದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃಧ್ಧಿ
ಯೋಜನಾ ವತಿಯಿಂದ ಪ್ರತಿ ಆಸ್ಪತ್ರೆಗೆ ನೀಡಿದ
ಆಮ್ಲಜನ ಸಾಂದ್ರಕಗಳನ್ನು ಸರ್ಕಾರಿ ವೈದ್ಯರಿಗೆ
ಹಸ್ತಾಂತರಿಸಿ ಮಾತನಾಡಿದರು.
ಇಡೀ ದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ
ಬಡವರ್ಗದ ಮಕ್ಕಳಿಗೆ ಅನುಕೂಲ
ಮಾಡಿದ್ದಾರೆ,ಮಹಿಳೆಯರು ಆರ್ಥಿಕವಾಗಿ
ಸದೃಢರಾಗಬೇಕೆಂದು ಕಿರು ಆರ್ಥಿಕ
ವ್ಯವಸ್ಥೆಯಲ್ಲಿ ಸಾಲ ನೀಡಿ ಅವರನ್ನು ಆರ್ಥಿಕವಾಗಿ
ಸಬಲಿಕರಣವಾಗುವಂತೆ ಪ್ರೇರಪಿಸಲಾಗುತ್ತಿದೆ
ಎಂದರು.
ಕೃಷಿ ಚಟುವಟಿಕೆಯಲ್ಲಿ ತನ್ನದೆ ಆದ ರೀತಿಯಲ್ಲಿ
ರೈತರಿಂದ ಬೇಸಾಯ ಮಾಡಿಸಿ ಉತ್ತಮ್ಮ ಇಳುವರಿ
ತೆಗೆಸುತ್ತಿದ್ದಾರೆ,ಈ ರೀತಿ ಸರ್ಕಾರ ಮಾಡಬೇಕಾದ ಎಲ್ಲ
ಅಭಿವೃಧ್ಧಿ ಕಾರ್ಯಗಳನ್ನು ಪ್ರಾಮಾಣಿಕವಾಗಿ
ಮಾಡಿ ಆ ಎಲ್ಲಾ ಯೋಜನೆಗಳು ಅರ್ಹ
ಫಲಾನುಭವಿಗಳಿಗೆ ತಲುಪಿಸುವಂತೆ
ಮಾಡುತ್ತಿದ್ದಾರೆ ಎಂದು ಅವರ ಸತ್ಕಾರ್ಯವನ್ನು
ಪ್ರಶಂಸಿದರು.
ಶ್ರೀಧರ್ಮಸ್ಥಳ ಗ್ರಾಮಾಭಿವೃಧ್ಧಿ
ಯೋಜಾನೆಯ ಜಿಲ್ಲಾ ನಿರ್ದೇಶಕ ಜಯಂತ್ ಪೂಜಾರ್
ಮಾತನಾಡಿ, ಶ್ರೀಕ್ಷೇತ್ರದ ವತಿಯಿಂದ ಪೂಜ್ಯರ
ಆಶಯದಂತೆ ಜಿಲ್ಲೆಯಲ್ಲಿ ಹರಿಹರ 1.ಹೊನ್ನಾಳಿ
2,ಚನ್ನಗಿರಿ 2,ತಾಲೂಕಿನ ಆಸ್ಪತ್ರೆಗಳಿಗೆ ಒಟ್ಟು ಐದು
ಆಮ್ಲಜನಕ ಸಾಂದ್ರಕಗಳನ್ನು ನೀಡಿದ್ದೇವೆ
ಎಂದರು.ಇಂಥ ಲಕ್ಷಾಂತರ ಸೇವಾಕಾರ್ಯಗಳು
ನಡೆಯುತ್ತಿವೆ ಎಂದರು.
ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್, ಪುರಸಭಾ
ಸದಸ್ಯ ರಂಗಪ್ಪ,ತಾಲೂಕು ಯೋಜನಾ ನಿರ್ದೇಶಕ
ಬಸವರಾಜ್ ಅಂಗಡಿ,ಮೇಲ್ವೀಚಾರಕ ನಾಗರಾಜ್,ಭಾರತಿ
ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಎಚ್‍ಎನ್‍ಎಲ್ ಶ್ರೀಧರ್ಮಸ್ಥಳ ಮೇ 31 ಚಿತ್ರ1;
ಸೋಮವಾರ ಹೊನ್ನಾಳಿ ನಗರದ ಶಿಆಸ್ಪತ್ರೆ
ಆವರಣದಲ್ಲಿ ್ರೀಧರ್ಮಸ್ಥಳ ಗ್ರಾಮಾಭಿವೃಧ್ಧಿ
ಯೋಜನಾ ವತಿಯಿಂದ ಪ್ರತಿ ಆಸ್ಪತ್ರೆಗೆ ನೀಡಿದ
ಆಮ್ಲಜನ ಸಾಂದ್ರಕಗಳನ್ನು ಶಾಸಕ
ಎಂ.ಪಿ.ರೇಣುಕಾಚಾರ್ಯ ಸರ್ಕಾರಿ ವೈದ್ಯರಿಗೆ
ಹಸ್ತಾಂತರಿಸಿದರು.
ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್, ಪುರಸಭಾ
ಸದಸ್ಯ ರಂಗಪ್ಪ,ತಾಲೂಕು ಯೋಜನಾ ನಿರ್ದೇಶಕ
ಬಸವರಾಜ್ ಅಂಗಡಿ,ಮೇಲ್ವೀಚಾರಕ ನಾಗರಾಜ್,ಭಾರತಿ
ಸೇರಿದಂತೆ ಅನೇಕರು ಉಪಸ್ಥಿತರಿದ್ದರು.