ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ತಾಲ್ಲೂಕು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು
ನಿಯಂತ್ರಣ ಕೋಶ ಇವರ ಸಂಯುಕ್ತಾಶ್ರಯದಲ್ಲಿ  “ತಂಬಾಕು
ತ್ಯಜಿಸಲು ಬದ್ಧರಾಗಿರಿ” ಎಂಬ ಘೋಷವಾಕ್ಯದಡಿ  ಮೇ.31
ಸೋಮವಾರದಂದು ಭರತ್ ಕಾಲೋನಿಯ ನಗರ ಪ್ರಾಥಮಿಕ
ಆರೋಗ್ಯ ಕೇಂದ್ರದಲ್ಲಿ ಸರಳವಾಗಿ ಏರ್ಪಡಿಸಲಾದ ವಿಶ್ವ ತಂಬಾಕು
ರಹಿತ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಂಬಾಕು ಬಳಕೆ ಮಾಡುವವರಲ್ಲಿ ಕೊರೋನ ಸೋಂಕು
ಹರಡುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ತಂಬಾಕು ಉತ್ಪನ್ನಗಳ
ಸೇವನೆ ಮಾಡುವವರ ಶ್ವಾಸಕೋಶ ಹಲವಾರು ದಿನಗಳಿಂದ
ತಂಬಾಕು ಬಳಸಿದ ಕಾರಣಗಳಿಂದ ದುರ್ಬಲವಾಗಿರುತ್ತದೆ. ಹೀಗಾಗಿ
ತಂಬಾಕು ತ್ಯಜಿಸಲು ಲಾಕ್‍ಡೌನ್ ಸಮಯ ಅತೀ ಸೂಕ್ತವಾಗಿದೆ. ತಂಬಾಕು
ಬಳಸುವವರು ತ್ಯಜಿಸಲು ಬದ್ಧರಾಗಿರಿ ಎಂದು ಈ ಮೂಲಕ
ವಿನಂತಿಸಿಕೊಳ್ಳುತ್ತೇನೆ ಎಂದು ಡಾ. ವೆಂಕಟೇಶ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ. ಸುನಿತಾ, ಕ್ಷೇತ್ರ
ಆರೋಗ್ಯ ಶಿಕ್ಷಣಾಧಿಕಾರಿ ಉಮಾಪತಿ, ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್,
ದೇವರಾಜ್ ಕೆ.ಪಿ ಸಮಾಜ ಕಾರ್ಯಕರ್ತ ಸಿಬ್ಬಂದಿ ಹಾಗೂ ಆಶಾ
ಕಾರ್ಯಕರ್ತೆಯರು ಹಾಜರಿದ್ದರು.

Leave a Reply

Your email address will not be published. Required fields are marked *