ಹರಿಹರ : ನಗರದ ಎಸ್ ಜೆವಿಪಿ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಭಾನುವಾರ ಸಂಜೆ 5 ಗಂಟೆಗೆ ಏರ್ಪಡಿಸಿದ್ದ ಸುಮಾರು ಕೋವಿಡ್್ ರೋಗಿಗಳಿಗೆ ಯೋಗಾಸನ, ಪ್ರಾಣಾಯಾಮ, ಮುದ್ರೆ ಮತ್ತು ವಿವಿಧ ಕ್ರೀಡೆಗಳನ್ನು ನಡೆಸಲಾಯಿತು. ಸುಮಾರು 120 ಕೋವಿಡ್ ಸೋಂಕಿತರು ಭಾಗವಹಿಸಿದ್ದರು.
ಶಾಸಕರಾದ ಎಸ್. ರಾಮಪ್ಪ ಅವರು ಈ ಕಾರ್ಯಕ್ರಮ ಉದ್ಘಾಟಿಸಿದರು. ಯೋಗ ಶಿಕ್ಷಕರಾದ ರವಿಕುಮಾರ್ ಮತ್ತು ಡಾ. ಕೆ. ಜೈಮುನಿ ಅವರು, ಯೋಗಾಸನ, ಪ್ರಾಣಾಯಾಮ ಮಾಡುವ ರೀತಿಯನ್ನು ಸೋಂಕಿತರಿಗೆ ತಿಳಿಸಿದರು. ಶ್ರೀಮತಿ ಮೀನಾಕ್ಷಿ ನಿರಂಜನಮೂರ್ತಿ ಅವರು ಮುದ್ರೆಗಳ ಮಾಹಿತಿ ನೀಡಿದರು.
ನಂತರ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ಸೋಂಕಿತರಿಗೆ ಶಾಸಕ ರಾಮಪ್ಪ ಅವರು ಪ್ರಮಾಣ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಸಮಿತಿಯ ಪದಾಧಿಕಾರಿಗಳಾದ ಕಿರಣ್್ ಬೋಂಗಾಳೆ, ಗಣೇಶ್ ಜಿ.ಆರ್., ನಿರಂಜನ್, ಕಾರ್ತಿಕ್, ವಿಶಾಲ್ ಮೆಹರ್ವಾಡೆ, ಯೋಗ ಶಿಕ್ಷಕರಾದ ರವೀಂದ್ರ ಸಿಂಗ್, ಡಾ. ಕೆ. ಜೈಮುನಿ, ಶ್ರೀಮತಿ ಮೀನಾಕ್ಷಿ, ಶ್ಯಾಮ್್ಸಂಗ್್ ವಿನಯ್್ರಾಜ್್, ಕೋವಿಡ್ ಆರೈಕೆ ಕೇಂದ್ರದ ವೈದ್ಯರು ಮತ್ತು ನರ್ಸ್ ಗಳು ಮತ್ತಿತರರು ಉಪಸ್ಥಿತರಿದ್ದರು.
Inbox

Leave a Reply

Your email address will not be published. Required fields are marked *