ದಾವಣಗೆರೆ ಜಿಲ್ಲೆಯ ಎಲ್ಲಾ ವಿಧದ ವಿಕಲಚೇತನರಿಗೆ ಜೂ.02
ಮತ್ತು 03 ರಂದು ಎರಡು ದಿನಗಳ ಕಾಲ ಜಿಲ್ಲೆಯಲ್ಲಿನ ಎಲ್ಲಾ ನಗರ
ಮತ್ತು ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ
ಕೇಂದ್ರಗಳಲ್ಲಿ ಕೋವಿಡ್ ನಿರೋಧಕ ಲಸಿಕೆಯನ್ನು
ವಿಕಲಚೇತನರಿಗೊಸ್ಕರ ಮೀಸಲಿಟ್ಟು ಹಾಕಲಾಗುವುದು.
ಎಲ್ಲಾ ವಿಕಲಚೇತನರು ಎಂ.ಆರ್.ಡಬ್ಲ್ಯೂ, ವಿ.ಆರ್.ಡಬ್ಲ್ಯೂ ಮತ್ತು
ಯು.ಆರ್.ಡಬ್ಲ್ಯೂಗಳ ಸಹಕಾರದೊಂದಿಗೆ ಪ್ರಾಥಮಿಕ ಆರೋಗ್ಯ
ಕೇಂದ್ರಕ್ಕೆ ತೆರಳಿ ತಪ್ಪದೆ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ
ಪಡೆಯಲು ವಿಕಲಚೇತನರ ಆಧಾರ್ ಕಾರ್ಡ್ ಮತ್ತು ಅಂಗವಿಕಲರ
ಗುರುತಿನ ಚೀಟಿ ಅಥವಾ ವಿಕಲಚೇತನರ ಸರ್ಟಿಫಿಕೇಟ್/ ಯು.ಡಿ.ಐ.ಡಿ,
ಕಾರ್ಡ್ ದಾಖಲೆಗಳೊಂದಿಗೆ ಹಾಜರಾಗಬೇಕು.
ಜಿಲ್ಲೆಯ ವಿಕಲಚೇತನರಿಗಾಗಿಯೇ ಜಿಲ್ಲಾಡಳಿತ ಮತ್ತು ಜಿಲ್ಲಾ
ಪಂಚಾಯತ್‍ನಿಂದ ಈ ವಿಶೇಷ ಕಾರ್ಯಕ್ರಮ ರೂಪಿಸಲಾಗಿದ್ದು
ಆಂದೋಲನದ ರೀತಿಯಲ್ಲಿ ಹಮ್ಮಿಕೊಂಡಿರುವುದರಿಂದ ಜಿಲ್ಲೆಯ ಎಲ್ಲಾ
ವಿಕಲಚೇತನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ.ಆರ್.ಡಬ್ಲ್ಯೂ
ಮತ್ತು ಎಂ.ಆರ್.ಡಬ್ಲ್ಯೂಗಳನ್ನು ಸಂಪರ್ಕಿಸಬಹುದು. ತಾಲ್ಲೂಕು
ಎಂ.ಆರ್. ಡಬ್ಲ್ಯೂ ಗಳ ದೂರವಾಣಿ ಸಂಖ್ಯೆ ಚನ್ನಪ್ಪ ಬಿ-9590829024,
ಸುಬ್ರಮಣ್ಯಂ ಕೆ -9945738141, ಶೈಲಜಾ ಕೆ.ಎಂ.-9886366809 ಶಿವನಗೌಡ
ಎಂ.ಕೆ-9902105734, ಗಂಗಾಧರ ಕೆ.ಹೆಚ್-
9844955315 ಹಾಗೂ ವಿಕಲಚೇತನರ ಸಹಾಯವಾಣಿ ಮತ್ತು ಮಾಹಿತಿ
ಸಲಹಾ ಕೇಂದ್ರದ ದೂರವಾಣಿ ಸಂಖ್ಯೆ 08192-263939
ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ
ನಾಗರಿಕರ ಕಲ್ಯಾಣಧಿಕಾರಿ ಜಿ.ಎಸ್. ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಂಬಾಕು ಸೇವನೆಯಿಂದ ಕೊರೋನಾ ಸಾಧ್ಯತೆ