ಹೊನ್ನಾಳಿ ತಾಲೂಕು ಆಫೀಸಿನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಂಪಿ ರೇಣುಕಾಚಾರ್ಯ ಹೊಸಳ್ಳಿ ಗ್ರಾಮದ ಬಿಕೆ ನಾಗರಾಜ್ ಎಸ್ಆರ್ ಎಫ್ 29 ಬೆಂಗಳೂರು ಕೆಲಸ ಮಾಡುತ್ತಿದ್ದರು ಇವರು ಅಣ್ಣ ತಮ್ಮಂದಿರು
ನನ್ನ ಕೈಕಾಲು ಹಿಡಿದು ಬೇಡಿಕೊಳ್ಳುತ್ತಿದ್ದಾರೆ ನಮ್ಮ ಅಣ್ಣನನ್ನು ಉಳಿಸಿಕೊಡಿ ಎಂದು ಇವರಿಗೆ ಏನಾದರೂ ಸಹಾಯ ಮಾಡೋಣ ಎಂದು ಬೆಂಗಳೂರು ಬಿಬಿಎಂಪಿ ಕಮಿಷನರ್ ಯಾದ ಚಂದ್ರಗುಪ್ತರವರಿಗೆ ನಾವು ಫೋನ್ ಮಾಡಿದರೆ ಫೋನನ್ನು ಎತ್ತುವುದಿಲ್ಲ ಕೊನೆಗೆ ಮೆಸೇಜ್ ಸಹ ಮಾಡಿಲ್ಲ ಇಂತಹ ದುರಂಕಾರಿ ಮತ್ತು ಮಾನವೀಯತೆ ಇಲ್ಲದೆ ಕೆಲಸ ಮಾಡುವ ಇಂತಹ ಅಧಿಕಾರಿಗಳಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಕಿಡಿಕಾರಿದರು.
ಚಾಮರಾಜನಗರದಲ್ಲಿ ಆದ ಘಟನೆ ಮತ್ತು ಬೆಂಗಳೂರಿನಲ್ಲಿ ಆದ ಘಟನೆ ಬಹಳ ನೋವು ತಂದಿದೆ. ನರೇಂದ್ರಮೋದಿಯವರು ಮತ್ತು ಬಿಎಸ್ ಯಡಿಯೂರಪ್ಪನವರು ದೇಶ ಹಾಗೂ ರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಆದರೆ ರಾಜ್ಯದಲ್ಲಿ ಕೆಲವೊಂದು ಅಧಿಕಾರಿಗಳು ಮತ್ತು ಏಜೆಂಟರುಗಳು ಬೆಡ್ ಮತ್ತು ಆಕ್ಸಿಜನ್ ದಂಧೆಯಲ್ಲಿ ತೊಡಗಿದ್ದಾರೆ ಇಂತವರು ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ ಇಂತವರ ವಿರುದ್ದ ಕಠಿಣ ಕ್ರಮ ವನ್ನು ಸರ್ಕಾರ ಕೈಗೊಳ್ಳಬೇಕು. ಚಾಮರಾಜನಗರದ ಘಟನೆಗೆ ಆರೋಗ್ಯ ಸಚಿವರು ಎರಡು ಎರಡು ಖಾತೆ ಬೇಕೆಂದು ಹಠ ಹಿಡಿದು ಕೆಲಸ ಮಾಡದೆ ಯಾವ ಪುರುಷಾರ್ಥಕ್ಕೆ ಅಧಿಕಾರ ಬೇಕು ಎಂದು ನಿಮಗೆ ಕೆಲಸ ಮಾಡಲಿಕ್ಕೆ ಆಗಲಿಲ್ಲ ಎಂದರೆ ರಾಜೀನಾಮೆ ಕೊಟ್ಟು ಮನೆಗೆ ತೊಲಗಿ ಪಕ್ಷಕ್ಕೂ ಹಾಗೂ ಸರ್ಕಾರಕ್ಕೂ ಸಚಿವರಾಗಿ ಪಕ್ಷಕ್ಕೆ ದ್ರೋಹ ಬಗೆಯುತ್ತಿದ್ದಿರಿ ನೀವು ರಾಜೀನಾಮೆ ಕೊಟ್ಟು ಹೋಗಿ ಎಂದು ಆರೋಗ್ಯ ಸಚಿವರಾದ ಸುಧಾಕರ್ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.