ಶ್ರೀ ಮಹದೇವ ಪ್ರಕಾಶ್

ಓ ದೇವರೇ ಈ ಸಾವು ನ್ಯಾಯವೇ,
ಶ್ರೀ ಮಹದೇವ ಪ್ರಕಾಶ್

ಓ ದೇವರೇ ಈ ಸಾವು ನ್ಯಾಯವೇ,
ಪತ್ರಕರ್ತರು,ಸಂಪಾದಕರು,
ಅಂಕಣಕಾರರು,ಪ್ರಬುದ್ಧ ರಾಜಕೀಯ ವಿಶ್ಲೇಷಕರು, ಮಾನ್ಯ ಮುಖ್ಯಮಂತ್ರಿಗಳ ಮಾಜಿ ಸಲಹೆಗಾರರು ಆದ ಶ್ರೀ ಮಹದೇವ ಪ್ರಕಾಶ್ ಅವರ ಅಕಾಲಿಕ ಅಗಲಿಕೆ ಒಂದು ದೊಡ್ಡ ಆಘಾತ.ನಾಡು ನುಡಿ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
1979 ರ ಅವಧಿಯಲ್ಲಿ ನಾನು ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ಎಂ.ಎ ವ್ಯಾಸಂಗ ಮಾಡುತ್ತಿದ್ದಾಗ ಶ್ರೀ ಮಹದೇವಪ್ರಕಾಶ್ ಅವರು ‘ಲೋಕವಾಣಿ’ ದಿನಪತ್ರಿಕೆಯ ಸಂಪಾದಕರಾಗಿದ್ದರು. ಅಂದಿನಿಂದ ಮೊನ್ನೆ ಮೊನ್ನೆಯವರೆಗೂ ನಿಕಟ ಸಂಪರ್ಕ ಹೊಂದಿದ್ದರು. ಅವರೊಂದಿಗೆ ಕನ್ನಡ ಸಾಹಿತ್ಯ, ಕರ್ನಾಟಕ ಇತಿಹಾಸ, ರಾಜ್ಯ ರಾಜಕೀಯ,ಹಾಗೂ ಹತ್ತು ಹಲವಾರು ವಿಷಯಗಳ ಕುರಿತು ಸುದೀರ್ಘವಾಗಿ ಅರ್ಥಪೂರ್ಣ ಸಮಾಲೋಚನೆ ನಡೆಸಿದ್ದೇನೆ. ಅವರೊಂದಿಗಿನ ಮಾತುಕತೆ ನನಗೆ ತುಂಬಾ ಖುಷಿ ನೀಡಿದೆ. ಅವರು ಯಾವಾಗಲೂ ನನ್ನ ಹಿತೈಷಿಗಳಾಗಿದ್ದರು ಎಂದರೆ ತಪ್ಪಾಗಲಾರದು. ಅವರ ಅಕಾಲಿಕ ಅಗಲಿಕೆ ವೈಯಕ್ತಿಕವಾಗಿ ನನಗೆ ಅತೀವ ನೋವುಂಟು ಮಾಡಿದೆ.
ಶ್ರೀ ಮಹದೇವ ಪ್ರಕಾಶ್ ಅವರ ಸುಮಾರು 4 ದಶಕಗಳ ಕಾಲ ವರದಿಗಾರರಾಗಿ,ಸಂಪಾದಕರಾಗಿ,ಅಂಕಣಕಾರರಾಗಿ,ಲೋಕವಾಣಿ ಪತ್ರಿಕೆಯ ಮೂಲಕ ಪತ್ರಿಕಾರಂಗ ಪ್ರವೇಶಿಸಿದ ಅವರು ಶ್ರೀ ವೀರೇಂದ್ರ ಪಾಟೀಲ್,ಶ್ರೀ ಗುಂಡುರಾವ್, ಶ್ರೀ ರಾಮಕೃಷ್ಣ ಹೆಗಡೆ ಅವರಿಂದ ಹಿಡಿದು ಹಾಲಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ನಡೆದ ಬಂದ ಹಾದಿ,ಮಾಡಿದ ಹೋರಾಟ,ನಡೆಸಿದ ಆಡಳಿತಗಳನ್ನು ಹತ್ತಿರದಿಂದ ಬಲ್ಲವರು.ಶಅಗಾಧ ಸ್ಮರಣಾ ಶಕ್ತಿ ಹೊಂದಿದ್ದರು. ಅವರು ಕೇವಲ ರಾಜಕೀಯ ವಿಷಯಗಳ ಮೇಲೆ ಮಾತ್ರವಲ್ಲದೆ, ನಾಡು-ನುಡಿ, ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಅಷ್ಟೇ ಪಾಂಡಿತ್ಯಪೂರ್ಣವಾಗಿ
ಬರೆಯುತ್ತಿದ್ದರು.ಅವರು ಟಿವಿ ಮಾದ್ಯಮದಲ್ಲಿಯೂ ಸಹ ರಾಜಕೀಯ ವಿಶ್ಲೇಷಣೆ ಕುರಿತು ಚರ್ಚೆಯಲ್ಲಿ ಭಾಗವಹಿಸುತ್ತಿದ್ದು ಕೇಳುಗರ ಮನ ಮುಟ್ಟುವಂತೆ ನಿರರ್ಗಳವಾಗಿ ಕರಾರುವಾಕ್ಕಾದ ಅಂಕಿ ಅಂಶಗಳೊಂದಿಗೆ ನಿದರ್ಶನಗಳೊಂದಿಗೆ ಮಾತನಾಡುತ್ತಿದ್ದರು.ವಿದ್ಯುನ್ಮಾನ ವಾಹಿನಿಗಳಲ್ಲಿ ರಾಷ್ಟ್ರ ಮತ್ತು ರಾಜ್ಯ ರಾಜಕೀಯ ಚರ್ಚೆ, ಚುನಾವಣೆಯ ವೇಳೆ ಖಾಯಂ ಅತಿಥಿಯಾಗಿದ್ದರು. ತಾವು ಒಪ್ಪಿಕೊಂಡ ಸಿದ್ಧಾಂತಗಳನ್ನು ಅತ್ಯಂತ ಸಂಯಮದಿಂದ ಇನ್ನೊಬ್ಬರು ಒಪ್ಪಿಕೊಳ್ಳುವಂತೆ ನ್ಯಾಯಬದ್ದವಾಗಿ,ತರ್ಕಬದ್ಧವಾಗಿ ಪ್ರಬುದ್ಧವಾಗಿ ವಿಷಯ ಮಂಡಿಸುತ್ತಿದ್ದ ರೀತಿಯಿಂದ ಎಲ್ಲರ ಗಮನಸೆಳೆದಿದ್ದರು.ಅವರ ವಿಶ್ಲೇಷಣೆಯ ವಿಧಾನ ಪಕ್ಷಾತೀತವಾಗಿತ್ತು.
ಬಸವಾದಿ ಶರಣರ ತತ್ವಗಳಂತೆ ಸಮಾಜ ಪರ ನಿಷ್ಠುರವಾದ ಮನೋಭೂಮಿಕೆಯನ್ನು ಮೈಗೂಡಿಸಿಕೊಂಡ ಅಪರೂಪದ ವ್ಯಕ್ತಿಯಾಗಿದ್ದರು. ಯಾರ ಬಗ್ಗೆಯೂ ದ್ವೇಷ ಅಸೂಯೆಗಳನ್ನು ಹೊಂದದೇ ಅದನ್ನು ಅಕ್ಷರ ರೂಪದಲ್ಲಿ ಎಂದಿಗೂ ಬರೆದವರಲ್ಲ. ಶ್ರೀ ತರಳಬಾಳು ಜಗದ್ಗುರುಗಳವರ ಎಲ್ಲಾ ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ ಕಾರ್ಯಗಳನ್ನು ಬಹುವಾಗಿ ಮೆಚ್ಚುಕೊಂಡಿದ್ದ ಅವರು ಪೂಜ್ಯ ತರಳಬಾಳು ಹಿರಿಯ ಜಗದ್ಗುರುಗಳ ಸಿದ್ದಾಂತ ಮತ್ತು ಪರಂಪರೆಯನ್ನು ಬಲವಾಗಿ ಬೆಂಬಲಿಸುತ್ತಿದ್ದರು.
ಶ್ರೀ ಮಹದೇವ ಪ್ರಕಾಶ್ ಅವರು ನನ್ನ ಹಲವಾರು ಲೇಖನಗಳು ಹಾಗೂ ಕವನಗಳನ್ನು ಈ ಹಿಂದೆ ಲೋಕವಾಣಿ ದಿನಪತ್ರಿಕೆ ಹಾಗೂ ಭಾನುವಾರ ಮಾಸಿಕ ಸಂಚಿಕೆಯಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಿ ನನ್ನ ಬರವಣಿಗೆಯನ್ನು ಹುರಿದುಂಬಿಸಿದ್ದಾರೆ.ಅವರು ನೀಡಿದ ಪ್ರೋತ್ಸಾಹಕ್ಕೆ ಸದಾ ಚಿರಋಣಿಯಾಗಿದ್ದೇನೆ.
ಶ್ರೀ ಮಹದೇವ ಪ್ರಕಾಶ್ ಒಂದು ಜ್ಞಾನ ಕೋಶ ಹಾಗೂ ಜ್ಞಾನ ಭಂಡಾರ ಆಗಿದ್ದರು ಎಂದರೆ ಅತಿಶಯೋಕ್ತಿಯಾಗಲಾರದು.
ನಮ್ಮ ದೇಶ ಮತ್ತು ರಾಜ್ಯದ ಇತಿಹಾಸ, ಕರ್ನಾಟಕದ ನಾಡು – ನುಡಿ ಸಾಹಿತ್ಯ,ಕಲೆ ಸಂಸ್ಕೃತಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ರಾಜಕೀಯ ವಾಸ್ತವ ನಡೆಯ ಬಗ್ಗೆ ಅಪಾರವಾದ ಜ್ಞಾನ ಹೊಂದಿದ್ದರು.
ಅವರು ಬೃಹತ್ ಗ್ರಂಥಾಲಯವೇ ಆಗಿದ್ದರು ಎಂದರೆ ತಪ್ಪಾಗಲಾರದು. ರಾಜ್ಯದ ಒಂದು ಬೃಹತ್ ಗ್ರಂಥಾಲಯವೇ ಆಕಸ್ಮಿಕವಾದ ಬೆಂಕಿಗೆ ಸಿಲುಕಿ ನಾಶವಾದ ರೀತಿಯಲ್ಲಿಯೇ ಮಹದೇವ ಪ್ರಕಾಶ್ ಅವರ ಅಗಲಿಕೆ ಇಂದು ಭಾಸವಾಗುತ್ತಿದೆ.
ಪದವಿ, ಪ್ರಶಸ್ತಿ ಪುರಸ್ಕಾರಗಳಿಗೆ ಆಸೆಪಟ್ಟ ಜೀವ ಮಹದೇವ ಪ್ರಕಾಶ್‌ ಅವರದಾಗಿರಲಿಲ್ಲ.ಸಮಗ್ರ ಕರ್ನಾಟಕದ ಅಭಿವೃದ್ಧಿಯ ಕನಸನ್ನು ಕಂಡ ಮಹದೇವ ಪ್ರಕಾಶ್‌ ಕರುಣೆ ಇಲ್ಲದ ಕೊರೊನಾದಿಂದ ಇನ್ನಿಲ್ಲವೆಂಬುದು ದುಃಖವೆನಿಸುತ್ತದೆ ಯಾರನ್ನೂ ಓಲೈಸದೆ ನೇರವಾಗಿ ವಿವರಿಸಿ ಹೇಳುವ ಅವರ ಕಾರ್ಯ ಪ್ರವೃತ್ತಿ ನೈಜ ಪತ್ರಿಕೋದ್ಯಮದ ಪ್ರಪಂಚಕ್ಕೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ.
ಆತ್ಮೀಯ ಶ್ರೀ ಮಹದೇವ ಪ್ರಕಾಶ್, ಸಂಪಾದಕರು, ಅಂಕಣಕಾರರು, ಮತ್ತು ರಾಜಕೀಯ ವಿಶ್ಲೇಷಕರು, ಮಾನವತಾವಾದಿ ಶ್ರೀ ಬಸವೇಶ್ವರರು ಭೂಮಿಗೆ ಬಂದ ದಿನದಂದೇ ನಮ್ಮನ್ನು ಅಗಲಿ ಇಂದು ಬರೀ ನೆನಪಾಗಿಯೇ ಉಳಿದಿದ್ದಾರೆ‌ ಎಂಬುದು ನೋವಿನ ಸಂಗತಿ.
ಅಜಾತಶತೃ, ಸರಳ ಸಜ್ಜನ,ನೇರ ನಿಷ್ಟುರವಾದಿ ಸಹೃದಯಿ,ಮೇಧಾವಿ, ಸದಾ ಹಸನ್ಮುಖಿಯಾದ ಶ್ರೀ ಮಹದೇವ ಪ್ರಕಾಶ್ ಆವರಿಗೆ ನನ್ನ ಮನದಾಳದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತೇನೆ.ಅವರ ಕುಟುಂಬ ವರ್ಗಕ್ಕೆ ಹಾಗೂ ಅಪಾರ ಒಡನಾಡಿಗಳು ಮತ್ತು ಬಂಧು ಬಳಗದವರ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲೆಂದು ಕೋರುತ್ತೇನೆ.
ನಾಡು ನುಡಿ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

Leave a Reply

Your email address will not be published. Required fields are marked *